fbpx
ಸಮಾಚಾರ

5 ನೇ ಕ್ಲಾಸ್ ಗೆ ಶಾಲೆ ಬಿಟ್ಟ ಇವರು 21 ಕೋಟಿ ಸಂಬಳ ಪಡೆಯುತ್ತಾರೆ.

5 ನೇ ಕ್ಲಾಸ್ ಗೆ ಶಾಲೆ ಬಿಟ್ಟ ಇವರು 21 ಕೋಟಿ ಸಂಬಳ ಪಡೆಯುತ್ತಾರೆ.

 

ನಾವು MDH ಮಸಾಲಾ ತಿಂದಿರ್ತೀವಿ ಆದ್ರೆ ಅದರ ಓನರ್ ಬಗ್ಗೆ ತಿಳಿದುಕೊಳ್ಳಲೇಬೇಕಾದದ ಒಂದು ಇಂಟೆರೆಸ್ಟಿಂಗ್ ಸುದ್ದಿ ಒಂದು ಇದೆ. ಇವರು ವರ್ಷಕ್ಕೆ ಪಡೆಯೋದು ಬರೋಬ್ಬರಿ 21 ಕೋಟಿ ವೇತನ.

 

 

94 ವರ್ಷ ವಯಸ್ಸಿನ ಇವರು ಟಿವಿ 5ನೇ ಕ್ಲಾಸ್ ಇರುವಾಗಲೇ ಶಾಲೆ ತೊರೆದವರು, ಆದರೆ ಇವರು ಎಫ್‌ಎಂಸಿಜಿ ವಲಯದಲ್ಲಿ ಅತ್ಯಂತ ಹೆಚ್ಚು ವೇತನ ಅಂದರೆ ವಾರ್ಷಿಕವಾಗಿ 21 ಕೋಟಿ ರೂ. ಪಡೆಯುವ CEO ಆಗಿದ್ದಾರೆ. ಮಸಾಲಾ ಬ್ರಾಂಡ್‌ MDH ನ ಕುರಿತು ಟಿವಿ ಪ್ರಚಾರ ಕಾರ್ಯಕ್ರಮದಲ್ಲಿ ಹಾಗು ಮಸಾಲಾ ಪ್ಯಾಕ್‌ನಲ್ಲಿ ರುಮಾಲು ಸುತ್ತಿಕೊಂಡು ಕಾಣಿಸಿಕೊಳ್ಳುವ ಇವರ ಹೆಸರು ಧರ್ಮಪಾಲ್ ಗುಲಾಟಿ.

 

 

 

ಧರ್ಮಪಾಲ್ ಗುಲಾಟಿ ರವರು ತಾವು ಪಡೆದ ಸಂಭಾವನೆಯ ಶೇ.90 ಭಾಗವನ್ನು ದತ್ತಿ ಸಂಸ್ಥೆಗಳಿಗೆ ದಾನವಾಗಿ ಕೊಡುತ್ತಾರೆ. ಇದರಿಂದ ಅಪಾರ ಜನರಿಗೆ ಸಹಾಯ ಹಸ್ತ ಮಾಡುತ್ತಾರೆ.

 

 

ಧರ್ಮಪಾಲ್ ಅವರ ತಂದೆ ಚುನಿ ಲಾಲ್ ರವರು 1919ರಲ್ಲಿ ಈಗಿನ ಪಾಕಿಸ್ತಾನದ ಸೈಲ್ಕೋಟ್‌ನಲ್ಲಿ ಮೊದಲು ಚಿಕ್ಕದಾದ ಅಂಗಡಿಯೊಂದನ್ನು ಪ್ರಾರಂಭ ಮಾಡಿದರು. ಸ್ವತಂತ್ರ ನಂತರ ಭಾರತ-ಪಾಕಿಸ್ತಾನ ವಿಭಜನೆಯಾದ ನಂತರ ಭಾರತಕ್ಕೆ ಬಂದಿದ್ದರು. ಇದೀಗ ಈ ಸಂಸ್ಥೆ 1500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಜೊತೆಗೆ 20 ಶಾಲೆ ಮತ್ತು ಆಸ್ಪತ್ರೆಗಳನ್ನು ಈ ಸಂಸ್ಥೆ ನಡೆಸುತ್ತಿದ್ದೆ . ದೇಶ್ಯಾದ್ಯಂತ ಕಂಪನಿಯ 15 ಕಾರ್ಖಾನೆ ಇವೆ, ೧೦೦೦ ಕ್ಕೂ ಅಧಿಕ ಡೀಲರ್‌ಗಳನ್ನು ಹೊಂದಿದೆ. ಗುಲಾಟಿ ಅವರ ಪುತ್ರ ಈ ಕಂಪೆನಿಯ ಸಮಗ್ರ ನಿರ್ವಹಣೆ, ಆರು ಪುತ್ರಿಯರು ಪ್ರಾದೇಶಿಕ ಡೀಲರ್‌ಶಿಪ್‌ ಜವಾಬ್ದಾರಿ ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top