fbpx
ಹೆಚ್ಚಿನ

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಪ್ರಧಾನಿ ಮೋದಿ ಏನು ಹೇಳಿದ್ರು ಗೊತ್ತ.

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಪ್ರಧಾನಿ ಮೋದಿ ಏನು ಹೇಳಿದ್ರು ಗೊತ್ತ.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಕಲಾಪದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ, ‘ಸಂವಿಧಾನದಲ್ಲಿ ಗೊಂದಲವನ್ನು ಮೂಡಿಸಿ ದೇಶವನ್ನು ವಿಭಜನೆ ಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಪಕ್ಷವು ಒಂದು ಕುಟುಂಬದ ಸೇವೆಯನ್ನು ಮಾಡುವುದಕ್ಕಾಗಿ ಇಡೀ ದೇಶವನ್ನೇ ಕಡೆಗಣಿಸಿತ್ತು ಎಂದು ಪ್ರಧಾನಿ ಮೋದಿ ಆರೋಪ ಸಂಸತ್ ನಲ್ಲಿ ಮಾಡಿದರು.

 

 

ಸುಮಾರು 90 ನಿಮಿಷದ ವರೆಗೆ ನಿರಾಯಾಸವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ‘ನಿಮ್ಮದು ಕೆಸರನ್ನು ಎರಚಿ ಓಡಿ ಹೋಗುವ, ಹಿಟ್ ಆ್ಯಂಡ್ ರನ್ ಮಾಡುವ ಬುದ್ಧಿ. ನೀವು ಕೆಸರು ಎರಚಿದಲ್ಲೆಲ್ಲ ಕಮಲಗಳು ಅರಳುತ್ತಲೇ ಇರುತ್ತವೆ’ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

 

 

ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಭಾರತ ದೇಶದ ಬಳಿಕ ಸ್ವಾತಂತ್ರ್ಯವನ್ನು ಪಡೆದ ದೇಶಗಳೆಲ್ಲವೂ ಅದ್ಭುತ ಅಭಿವೃದ್ಧಿ ಸಾಧಿಸಿದ್ದರೆ, ಭಾರತವೇಕೆ ಪ್ರಗತಿಯಲ್ಲಿ ಇನ್ನು ಹಿಂದುಳಿಯಿತು?’ ಎಂದು ಹೇಳುತ್ತಾ ಸ್ವತಂತ್ರ ನಂತರ ಆಡಳಿದ ನಡೆಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

 

 

ಸರ್ದಾರ್ ವಲ್ಲಭಾಯಿ ಪಟೇಲ್ ಪ್ರಧಾನ್ ಮಂತ್ರಿ ಆಗಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು. ಲೋಕಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ಸಂಸದರು ತೀವ್ರ ವಿರೋಧದ ನಡುವೆಯೂ ಮೋದಿ ಭಾಷಣವನ್ನು ಮುಂದು ವರಿಸಿದರು..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top