fbpx
ದೇವರು

ಇನ್ನುಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲ ಪ್ರಸಾದ ಎಂದು ಹಂಚುವಾಗಿಲ್ಲ : ಪ್ರಸಾದ ವಿನಿಯೋಗಕ್ಕೆ ಬೇಕು ಪರವಾನಗಿ!   

ಇನ್ನುಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲ ಪ್ರಸಾದ ಎಂದು ಹಂಚುವಾಗಿಲ್ಲ : ಪ್ರಸಾದ ವಿನಿಯೋಗಕ್ಕೆ ಬೇಕು ಪರವಾನಗಿ!   

ಇನ್ನುಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲ ಪ್ರಸಾದ ಎಂದು ಹಂಚುವ ಹಾಗಿಲ್ಲ, ಮಂದಿರ, ಮಸೀದಿ ಮತ್ತು ಚರ್ಚ್ ಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಸಲುವಾಗಿ ಆಯಾ ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ.

Image result for prasada

ಆಹಾರ ಸುರಕ್ಷತಾ ಇಲಾಖೆಯು ಹೊಸ ನಿಯಮವನ್ನು ಜಾರಿ ಮಾಡಿದೆ, ಮುಜರಾಯಿ ಇಲಾಖೆ ದೇಗುಲ ಸೇರಿದಮತೆ ರಾಜ್ಯದ ಎಲ್ಲಾ ದೇಗುಲಗಳಿಗೆ ಚರ್ಚ್ ಹಾಗೂ ಮಸೀದಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿಮಾಡಿದ್ದು ಪ್ರಸಾದ ವಿನಿಯೋಗಕ್ಕೆ ಲೈಸನ್ಸ್ ಪಡೆಯುವಂತೆ ಸೂಚಿಸಿದೆ.

Related image

ಭಕ್ತರಿಗೆ ಪ್ರಸಾದ ರೂಪದಲ್ಲಿ ಯಾವುದೇ ಆಹಾರ ಪದಾರ್ಥ ನೀಡಿದರೂ ಅದನ್ನು ಆಹಾರ ಸುರಕ್ಷತೆ ಇಲಾಖೆಯ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದೆ. ದೇಗುಲದಲ್ಲಿ ವಿತರಣೆ ಮಾಡುವ ಪ್ರಸಾದದಲ್ಲಿ ಗುಣಮಟ್ಟ ಕಾಪಾಡುವುದಿಲ್ಲ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Related image

ಮೂರು ಬಾರಿ ನೋಟಿಸ್ ನೀಡಿದ ನಂತರವೂ ಲೈಸೆನ್ಸ್ ಪಡೆಯದೇ, ಪ್ರಸಾದ ಪರೀಕ್ಷೆಗೆ ಒಳಪಡಿಸದೇ ವಿತರಣೆ ಮಾಡಿದರೆ ದಂಡ ವಿಧಿಸಲು ಆಹಾರ ಇಲಾಖೆ ನಿರ್ಧರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top