fbpx
ಮನೋರಂಜನೆ

ಪುನೀತ್ ಬಳಿ ಪ್ರಥಮ್ ಕೇಳಿ ಪಡೆದುಕೊಂಡ ಆ ವಸ್ತು ಏನು ಗೊತ್ತಾ?

ಪುನೀತ್ ಬಳಿ ಪ್ರಥಮ್ ಕೇಳಿ ಪಡೆದುಕೊಂಡ ಆ ವಸ್ತು ಏನು ಗೊತ್ತಾ?

 

 

ಸದಾ ಒಂದಿಲ್ಲೊಂದು ಗಿಮ್ಮಿಕ್ಕು, ಬಿಲ್ಡಪ್ಪುಗಳಿಂದಲೇ ಪ್ರಚಾರದಲ್ಲಿರುವ ಆಸಾಮಿ ಪ್ರಥಮ್ ಈಗ ಮತ್ತೊಂದು ವಿಷಯಕ್ಕೆ ಸುದ್ದಿಗೆ ಬಂದಿದ್ದಾರೆ, ಬಿಗ್ ಬಾಸ್ ಗೆದ್ದ ನಂತರ ವೇದಿಕೆಯಲ್ಲಿ ಸುದೀಪ್ ಬಳಿ ಹೊಸ 2000 ಮತ್ತು 500 ರೂಪಾಯಿಗಳನ್ನು ಕೇಳಿಪಡೆದುಕೊಂಡಿದ್ದ ಪ್ರಥಮ್ ಈಗ ಪುನೀತ್ ರಾಜಕುಮಾರ್ ಅವರ ಬಳಿ ಕೂಡ ಅಮೂಲ್ಯವಾದ ವಸ್ತುವೊಂದನ್ನು ಪಡೆದುಕೊಂಡಿದ್ದಾರಂತೆ. ಈ ವಿಷಯವನ್ನು ಸ್ವತಃ ಪ್ರಥಮ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

 

ಇತ್ತೀಚಿಗೆ ಪುನೀತ್ ರಾಜಕುಮಾರ್ ಅವರು ನಡೆಸಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಭಾಗಿಯಾಗಿದ್ದ ಪ್ರಥಮ್ ಪುನೀತ್ ರಾಜಕುಮಾರ್ ಅವರ ಬಳಿ ಅವರು ಹಾಕಿದ್ದ ಬ್ಲೇಝರ್ ಅನ್ನು ಕೇಳಿ ಪಡೆದುಕೊಂಡಿದ್ದರಂತೆ. ಕಾರ್ಯಕ್ರಮದ ಈ ಸಂಚಿಕೆ ಈ ವಾರ ಪ್ರಸಾರವಾಗಲಿದ್ದು ಸಂಚಿಕೆಯ ಶೂಟಿಂಗ್ ಮುಗಿದಿದೆ.

ಕಾರ್ಯಕ್ರಮದಲ್ಲಿ ಪುನೀತ್ ಧರಿಸಿದ್ದ ಈ ಬ್ಲೇಝರ್ ಪ್ರಥಮ್ ಗೆ ಇಷ್ಟವಾಗಲು ಕಾರಣವೇನು? ಮತ್ತು ಕಾರ್ಯಕ್ರಮದಲ್ಲಿ ಪ್ರಥಮ್ ಜೊತೆ ಯಾರೆಲ್ಲ ಅಥಿತಿಯಾಗಿ ಭಾಗವಸಿದ್ದರು ಎಂಬುದನ್ನು ತಿಳಿದುಕೊಳ್ಳಲು ಈ ಶನಿವಾರದವರೆಗೆ ಕಾಯಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top