fbpx
ರಾಜಕೀಯ

ಸಾಮಾಜಿಕ ಜಾಲತಾಣಹಳಲ್ಲಿ ಕಾರ್ಯಕರ್ತರಿಗೆ ನಕಲಿ ಖಾತೆ ಸೃಷ್ಟಿಸುವ ಕುರಿತು ರಮ್ಯಾ ಮೇಡಂ ಪಾಠ ..

ಸಾಮಾಜಿಕ ಜಾಲತಾಣಹಳಲ್ಲಿ ಕಾರ್ಯಕರ್ತರಿಗೆ ನಕಲಿ ಖಾತೆ ಸೃಷ್ಟಿಸುವ ಕುರಿತು ರಮ್ಯಾ ಮೇಡಂ ಪಾಠ ..

ನಕಲಿ ಖಾತೆ ತೆರೆಯೋದು ಹೇಗೆ? ರಮ್ಯಾ ಮೇಡಂ ಪಾಠ ಹೇಳಿಕೊಡ್ತಾರೆ ಕೇಳಿ..

Image result for Ramya politics

ಸಾಮಾಜಿಕ ಜಾಲತಾಣಹಳಲ್ಲಿ ನಕಲಿ ಖಾತೆ ತೆರೆಯುವುದು ಹೇಗೆ ಮತ್ತು ಅವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಪಾಠ ಮಾಡುತ್ತಿರುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಈ ವಿಡಿಯೋದಲ್ಲಿ ಕನ್ನಡದ ಖ್ಯಾತ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ, ತಮ್ಮ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ನಕಲಿ ಖಾತೆ ಸೃಷ್ಟಿಸುವ ಕುರಿತು ಪಾಠ ಹೇಳುತ್ತಿದ್ದಾರೆ.

Related image

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿ ಮಾತನಾಡುತ್ತಾರೆ ಎಂದು ಅವರ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ಸುದ್ದಿಯಾಗಿದ್ದ ರಮ್ಯಾ, ಇದೀಗ ಸ್ವತಃ ವಿವಾದದಲ್ಲಿ ಸಿಲುಕಿದ್ದು, ಆಡಿಕೊಳ್ಳುವವರೆದುರು ಎಡವಿ ಬಿದ್ದಂತಾಗಿದೆ.

 

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಒಬ್ಬೊಬ್ಬರೂ 3-4 ಅಕೌಂಟ್ ಹೊಂದುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವ ವಿಡಿಯೋ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ.

Image result for Ramya politics

ವಿಡಿಯೋದಲ್ಲಿ ರಮ್ಯಾ, ಇವತ್ತು ನೀವೆಲ್ಲರೂ ಮೂರು ಅಕೌಂಟ್ ಕ್ರಿಯೇಟ್ ಮಾಡಬೇಕು. ಒಂದು ನಿಮ್ಮ ಹೆಸರಿನಲ್ಲಿ, ಮತ್ತೊಂದು ಬೇರೆಯವರ ಹೆಸರಿನಲ್ಲಿ, ಇನ್ನೊಂದು ಶ್ರೀವತ್ಸ ಹೆಸರಲ್ಲಿ ಮಾಡಬೇಕು. ಇದನ್ನು ಬಾಟ್ಸ್ ಎನ್ನುತ್ತಾರೆ. ಬಾಟ್ಸ್ ಎಂದರೆ ಒಂದು ರೋತಿ ರೋಬಾಟ್ ಇದ್ದಂತೆ. ಅದು ವ್ಯಕ್ತಿ ಅಲ್ಲ. ಒಬ್ಬರ ಹೆಸರಿನಲ್ಲಿ ಮೂರ್ನಾಲ್ಕು ಅಕೌಂಟ್ ಇದ್ದರೆ ಏನೂ ತಪ್ಪಿಲ್ಲ ಎಂದು ರಮ್ಯಾ ಸ್ಪಷ್ಟವಾಗಿ ಹೇಳಿರುವುದು ವಿಡಿಯೋದಲ್ಲಿದೆ.

‘ನಕಲಿ ಖಾತೆ ಹೊಂದುವುದು ತಪ್ಪಲ್ಲವೇ?’ ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ‘ಅದರಲ್ಲಿ ತಪ್ಪೇನಿದೆ?, ನಿಜ ಹೇಳಬೇಕೆಂದರೆ ನಂದೂ ಒಂದು ನಕಲಿ ಖಾತೆಯಿದೆ’ ಎಂದು ಉತ್ತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top