fbpx
ಸಿನಿಮಾ

ಎಸ್. ನಾರಾಯಣ್ ಕೇಳುವ ಈ ಪ್ರಶ್ನೆಗಳಿಗೆ ಉತ್ತರಿಸಿ ‘ಡೈಮಂಡ್ ನೆಕ್ಲೆಸ್’ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ

ನಿರ್ದೇಶಕ ಎಸ್. ನಾರಾಯಣ್ ಏನೇ ಮಾಡಿದ್ರೂ ಅದೃಷ್ಟ ಕೈ ಹಿಡೀತಾ ಇಲ್ಲ. ಎರಡು ವರ್ಷಗಳಲ್ಲಿ ನಾರಾಯಣ್ ಎಸ್ ಅಂಥಾ ಹೊರಟಿದ್ದೆಲ್ಲವೂ ನೋ ಅಂತ ಹಿಮತಿರುಗವ ಹಾಗೆ ಆಗಿದೆ. ಹಾಗೆಂದು ಕನ್ನಡದ ಖ್ಯಾತ ನಟ, ನಿರ್ದೇಶಕ ಎಸ್. ನಾರಾಯಣ್ ಸುಮ್ಮನಾಗಿಲ್ಲ.

 

Related image

 

ರೀಮೇಕ್ ಚಿತ್ರಗಳಲ್ಲಿ ದೊಡ್ಡ ಯಶಸ್ಸು ಕಂಡಿರುವ ನಾರಾಯಣ್ ಅವರ ಹಿಂದಿನ ರೀಮೇಕ್ ಚಿತ್ರ ‘ಮನಸು ಮಲ್ಲಿಗೆ’ ಬಾಕ್ಸಾಫಿಸ್​ನಲ್ಲಿ ಗೆಲ್ಲಲಿಲ್ಲ. ಇದರ ನಡುವೆ ಹೊಸಬರ ತಂಡ ಕಟ್ಟಿಕೊಂಡು ಆರಂಭಿಸಿದ ಬಿಗ್ ಬಜೆಟ್‍ನ ‘ಜೆಡಿ’ ಅನ್ನೋ ಚಿತ್ರ ಆರಂಭವಾಗಿ ಅದ್ಧೂರಿ ಮುಹೂರ್ತ ಮಾಡಿಕೊಂಡರೂ ಚಿತ್ರದ ಚಿತ್ರೀಕರಣ ಆರಂಭವಾಗಲೇ ಇಲ್ಲ.

 

Image result for ‘ಮನಸು ಮಲ್ಲಿಗೆ’

 

ಅರ್ಜುನ್ ಸರ್ಜಾ ನಾಯಕರಾಗಿ ನಟಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಜೀವನಾಧಾರಿತ ಚಿತ್ರ ‘ಭೂಮಿಪುತ್ರ’ ಕೂಡ ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕಾಗಿ ಕಾಯುತ್ತಲೇ ಇದೆ. ಇದರ ನಡುವೆ ನಾರಾಯಣ್​ ಒಂದು ಮನರಂಜನಾ ವಾಹಿನಿ ಆರಂಭಿಸಲಿದ್ದಾರೆ ಎನ್ನುವ ಸುದ್ದಿ ಬಂತಾದರೂ, ಅದು ಕೂಡ ಅಲ್ಲಿಗೇ ನಿಂತಿದೆ.

 

Image result for ‘ಭೂಮಿಪುತ್ರ’

 

ಎಸ್. ನಾರಾಯಣ್ ಸುಮ್ಮನಾಗಿಲ್ಲ. ಸದ್ಯ ಹೊಸಬರನ್ನು ಕಟ್ಟಿಕೊಂಡು ಹೊಸ ಚಿತ್ರದ ಮುಹೂರ್ತಕ್ಕೆ ತಯಾರಾಗಿದ್ದಾರೆ. ಭಾನುವಾರ ಚಿತ್ರದ ಮುಹೂರ್ತ ನಗರದ ಹನುಮಂತನಗರದಲ್ಲಿ ನಡೆದಿದ್ದು, ಈ ಚಿತ್ರಕ್ಕೆ ಹೆಸರನ್ನು ಇನ್ನೂ ಇಟ್ಟಿಲ್ಲ ಈ ಚಿತ್ರಕ್ಕೆ ಹೆಸರನ್ನು ನೀಡುವ ಜವಾಬ್ದಾರಿಯನ್ನು ನಿರ್ದೇಶಕ ಎಸ್ ನಾರಾಯಣ್ ಅವರು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ

ಅದು ಹೇಗೆ ಅಂತೀರಾ ,ಈಗಾಗಲೇ ಈ ಚಿತ್ರಕ್ಕೆ ಅನೇಕ ಟೈಟಲ್ಗಳನ್ನು ಎಸ್ ನಾರಾಯಣ್ ಅವರು ನಿಗದಿ ಪಡಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಆ ಹೆಸರನ್ನು ಈಗಲೇ ಬಹಿರಂಗಪಡಿಸುವುದಿಲ್ಲ ವಂತೆ

ಚಿತ್ರದ ಟೈಟಲ್ ಅನ್ನು ಒಂದು ಕವರ್ನಲ್ಲಿ ಹಾಕಿ ಮುಚ್ಚಿಟ್ಟಿದ್ದಾರೆ ಹಾಗೆಯೇ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಶ್ನೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಲಾಗುತ್ತದೆ ಯಂತೆ ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕಳುಹಿಸಿದವರಿಗೆ ಚಿತ್ರತಂಡದ ಪರವಾಗಿ ಒಂದು ಲಕ್ಷ ಬೆಲೆ ಬಾಳುವ ವಜ್ರದ ನೆಕ್ಲೆಸ್ ಅನ್ನು ಬಹುಮಾನವಾಗಿ ಕೊಡುತ್ತಾರೆ

ಈ ಚಿತ್ರದಲ್ಲಿ ನಾರಾಯಣ್ ಅವರ ಮಗ ಪಂಕಜ್ ನಾರಾಯಣ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ
ಮಾಡಲಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top