fbpx
ಮನೋರಂಜನೆ

ಶರಣ್ ಡ್ಯಾನ್ಸ್ ನೋಡಿ ಫಿದಾ ಆದ ಸ್ಯಾಂಡಲ್’ವುಡ್ ಮಂದಿ.

ಶರಣ್ ಡ್ಯಾನ್ಸ್ ನೋಡಿ ಫಿದಾ ಆದ ಸ್ಯಾಂಡಲ್’ವುಡ್ ಮಂದಿ.

 

 

ಕಾಮಿಡಿ ಕಿಂಗ್ ಶರಣ್ ಅವರು ಕೇವಲ ಕಾಮಿಡಿ ಮಾತ್ರವಲ್ಲದೆ ಡ್ಯಾನ್ಸ್ ಕೂಡ ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲದ ರೀತಿಯಲ್ಲಿ ಡ್ಯಾನ್ಸ್ ಮಾಡಿಕೊಂಡು ಬಂದಿದ್ದಾರೆ. ಕಾಮಿಡಿ ಪಾತ್ರಗಳನ್ನೇ ಮಾಡುತ್ತಿದ್ದ ಶರಣ್ ರಾಂಬೋ ಸಿನಿಮಾದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದರು. ಆಗ ಅದೇ ಹೆಸರಿನಲ್ಲೇ ಮತ್ತೊಂದು ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದೆ.

 

 

ಹೌದು ಶರಣ್ ಅಭಿನಯದ ರಾಂಬೋ-2 ಚಿತ್ರ ರಿಲೀಸ್ ಗೆ ತಯಾರಾಗಿದ್ದು ಚಿತ್ರದ ಹಾಡೊಂದು ನೆನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ನೆನ್ನೆ ಶರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡದಿಂದ ಯವ್ವ ಯವ್ವ ಎಂಬ ಈ ಹಾಡು ಉಡುಗೊರೆಯಾಗಿ ಬಿಡುಗಡೆಯೊಂದಿದ್ದು ಆ ಹಾಡಿನಲ್ಲಿ ಶರಣ್ ಸಕತ್ ಸ್ಟೆಪ್ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಮತ್ತು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.

ಹಾಡಿನಲ್ಲಿ ನಟಿ ಆಶಿಕಾ ಜೊತೆ ಭರ್ಜರಿ ಸ್ಟೆಪ್ ಹಾಕಿರುವ ಶರಣ್ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಮನಸೋತಿದ್ದು ಶರಣ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ಹಾಡಿನ ಕ್ವಾಲಿಟಿ ಕೂಡ ತಂಬಾ ಚೆನ್ನಾಗಿ ಮೂಡಿ ಬಂದಿದ್ದು ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಎಂದೆನಿಸುತ್ತದೆ.

ಅಂದಹಾಗೆ ರಾಂಬೋ-2 ಚಿತ್ರವನ್ನು ಅನಿಲ್ ನಿರ್ದೇಶನ ಮಾಡುತ್ತಿದ್ದು ಇದು ಒಂದು ಕಾಮಿಡಿ ಕತೆಯನ್ನು ಆಧರಿಸಿರುವ ಜರ್ನಿ ಸಿನಿಮಾವಾಗಿದೆಯಂತೆ. ಆಶಿಕಾ ಮತ್ತು ಶರಣ್ ಇದೆ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚಿಕ್ಕಣ್ಣ ಕೂಡ ನಟಿಸಿದ್ದಾರೆ.

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top