fbpx
ಕಿರುತೆರೆ

ಮತ್ತೊಂದು ಟಿವಿ ಷೋಗೆ ಸಾರಥ್ಯ ವಹಿಸಲಿದ್ದಾರೆ ಶಿವಣ್ಣ:ಕಾರ್ಯಕ್ರಮದ ವಿಶೇಷತೆ ಏನು ಗೊತ್ತಾ?

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಶಿವರಾಜಕುಮಾರ್:

 

 

ಸ್ಯಾಂಡಲ್ ವುಡ್’ನಲ್ಲಿ ಅತಿ ಹೆಚ್ಚು ಬ್ಯುಸಿಯಾಗಿರುವ ನಟ ಎಂದರೆ ಅದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್. ಸಾಲು ಸಾಲು ಚಿತ್ರಗಳು ತಮ್ಮ ಮುಂದೆ ಇದ್ದರೂ ಬಿಡುವು ಮಾಡಿಕೊಂಡು ಆಗಾಗ ಕಿರುತೆರೆ ಶೋಗಳನ್ನು ಕೂಡ ನಡೆಸಿಕೊಡುವ ಶಿವಣ್ಣ ಈಗ ಮತ್ತೊಂದು ವಿಭಿನ್ನ ಟಿವಿ ಷೋಗೆ ಸಾರಥ್ಯ ವಹಿಸಲು ಸಜ್ಜಾಗಿದ್ದಾರೆ. ಈ ಹಿಂದೆ ಶಿವರಾಜಕುಮಾರ್ ಝೀ ವಾಹಿನಿಯಲ್ಲಿ ‘ನಾನಿರುವುದೇ ನಿಮಗಾಗಿ’ ಮತ್ತು ಉದಯ ಟಿವಿಯಲ್ಲಿ ‘ಕಿಕ್’ ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

 

 

ಸದ್ಯ ಸುವರ್ಣ ವಾಹಿನಿಯಲ್ಲಿ ‘ನಂ. 1 ಯಾರಿ ವಿಥ್‌ ಶಿವಣ್ಣ’ ಎಂಬ ಟಾಕ್ ಷೋ ಆರಂಭವಾಗಲಿದ್ದು ಆ ಶೋಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾರಥ್ಯ ವಹಿಸಲಿದ್ದಾರೆ. ಈ ಟಾಕ್‌ ಶೋನ ಪ್ರತಿ ಸಂಚಿಕೆಗೆ ಚಿತ್ರರಂಗದಿಂದ ಅಥವಾ ಚಿತ್ರರಂಗದ ಹೊರತಾದ ಸೆಲೆಬ್ರೆಟಿ ಇಬ್ಬರು ಅತ್ಮೀಯ ಸ್ನೇಹಿತರು ಅಥಿತಿಗಳಾಗಿ ಆಗಮಿಸುತ್ತಾರೆ. ಅವರಿಬ್ಬರ ಆತ್ಮೀಯತೆ, ಸ್ನೇಹ, ಒಡನಾಟದ ಬಗ್ಗೆ ಸ್ವಲ್ಪ ಕಾಲೆಳೆತ, ತಮಾಷೆಗಳಿಂದ ಹರಟೆ ಹೊಡೆಯುವುದೇ ಕಾರ್ಯಕ್ರಮದ ಕಾನ್ಸೆಪ್ಟ್.

ಅಂದಹಾಗೆ ತೆಲುಗಿನಲ್ಲಿ ರಾಣಾದಗ್ಗುಬಾಟಿ ನಡೆಸಿಕೊಡುತ್ತಿದ್ದ ‘ನಂ.1 ಯಾರೀ ರಾಣಾ’ ಎಂಬ ಕಾರ್ಯಕ್ರಮದ ಯಥಾವತ್ ಕನ್ನಡ ಅವತರಣಿಕೆಯೇ ‘ಯಾರೀ ನಂಬರ್ ಒನ್ ಶಿವಣ್ಣ” ಆಗಿದ್ದು ಇದೇ ತಿಂಗಳ ಕೊನೆಯ ವಾರದಿಂದ ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top