fbpx
ಸಿನಿಮಾ

ಕನ್ನಡ ಮೀಡಿಯಂ ರಾಜು ಜೊತೆ ನಿಂತ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್

ಫಸ್ಟ್ ರ್‍ಯಾಂಕ್ ರಾಜು ಎಂಬ ಯಶಸ್ವೀ ಸಿನಿಮಾವನ್ನು ಕೊಟ್ಟಿದ್ದ ನರೇಶ್, ಗುರುನಂದನ್ ಮತ್ತವರ ತಂಡ, ಶಿವಲಿಂಗ, ಶ್ರಾವಣಿ ಸುಬ್ರಮಣ್ಯ, ಗೋವಿಂದಾಯ ನಮಃದಂಥ ಹಿಟ್ ಚಿತ್ರಗಳನ್ನು ನೀಡಿ ಗೆಲುವಿನ ಸರದಾರ ಎನಿಸಿಕೊಂಡಿದ್ದ ಕೆ.ಎ. ಸುರೇಶ್ ನಿರ್ಮಾಣ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರೋ ಕಾರಣಕ್ಕೆ ಸಾಕಷ್ಟು ಕತೂಹಲ ಸೃಷ್ಟಿಸಿದ್ದ ಸಿನಿಮಾ ರಾಜು ಕನ್ನಡ ಮೀಡಿಯಂ.

 

 

ಚಿತ್ರದ ಪ್ರಚಾರಕ್ಕಷ್ಟೇ `ಕನ್ನಡ’ವನ್ನು ಬಳಸಿಕೊಳ್ಳುವವರ ನಡುವೆ ನಿಜಕ್ಕೂ ಕನ್ನಡ ಭಾಷೆಯ ಮೇಲೆ ಹೃದಯಾಂತರಾಳದ ಅಭಿಮಾನವಿಟ್ಟಿರೋದು ಈ ಚಿತ್ರದ ಬಗ್ಗೆ ಮೆಚ್ಚಲೇ ಬೇಕಾದ ಅಂಶ. ನರೇಶ್ ನಿರ್ದೇಶನದ ಮೊದಲ ಸಿನಿಮಾದಲ್ಲೂ ಬದುಕನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಇಲ್ಲೂ ಸಹ ಅದು ಮುಂದುವರೆದಿದೆ.

 

 

ರಾಜು ಕನ್ನಡ ಮೀಡಿಯಂ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಈ ಚಿತ್ರವನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ

 

 

ರಾಜು ಕನ್ನಡ ಮೀಡಿಯಂ ಚಿತ್ರವನ್ನು ವೀಕ್ಷಿಸುವಂತೆ ಚಿತ್ರತಂಡ ಕೋರಿದ್ದು ಈ ಸಮಯದಲ್ಲಿ ಚಿತ್ರ ನಿರ್ಮಾಪಕರಾದ ಕೆ. ಎ ಸುರೇಶ್ ನಾಯಕ ನಟ ಗುರುನಂದನ್ ನಿರ್ದೇಶಕ ನರೇಶ್ ಕುಮಾರ್ ಸಹ ಜೊತೆಗಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top