fbpx
ಮನೋರಂಜನೆ

ತೇಲಿ ಬಂತು ಶ್ರಿಯಾ ಸರಣ್ ಮದುವೆ ಸುದ್ದಿ: ಈ ಬಗ್ಗೆ ಶ್ರೀಯಾ ಹೇಳಿದ್ದೇನು?

ತೇಲಿ ಬಂತು ಶ್ರಿಯಾ ಸರಣ್ ಮದುವೆ ಸುದ್ದಿ: ಈ ಬಗ್ಗೆ ಶ್ರೀಯಾ ಹೇಳಿದ್ದೇನು?

 

ನೆನ್ನೆಯಿಂದ ಹರಿದಾಡುತ್ತಿದ್ದ ತನ್ನ ಮದುವೆಯ ಸುದ್ದಿಗೆ ಬಹುಭಾಷಾ ನಟಿ ಶ್ರಿಯಾ ಸರಣ್ ಬ್ರೇಕ್ ಹಾಕಿದ್ದಾರೆ. ನೆನ್ನೆ ಸಂಜೆಯಿಂದ ಶ್ರೀಯಾ ಅವರು ತಮ್ಮ ರಷ್ಯನ್ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದು ಶೀಘ್ರವೇ ರಾಜಸ್ತಾನದಲ್ಲಿ ಸಪ್ತಪದಿ ತುಳಿಯಲ್ಲಿದ್ದಾರೆ ಎಂಬ ಸುದ್ದಿಗೆ ಎಲ್ಲೆಡೆ ಹರಿದಾಡಿತ್ತು.

 

 

ತಮ್ಮ ಮದುವೆ ವದಂತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದನ್ನು ನೋಡಿ ಶ್ರೀಯಾ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಮದುವೆಯಾಗುತ್ತಿದೆ ಎಂಬ ಸುದ್ದಿ ಶುದ್ಧಸುಳ್ಳು’ ಎಂದಿದ್ದಾರೆ. ಈ ಬಗ್ಗೆ ಶ್ರಿಯಾ ತಾಯಿ ನೀರಜಾ ಕೂಡ ಮಾತನಾಡಿದ್ದು ‘ಶ್ರೀಯಾ ಮದುವೆ ಸುದ್ದಿ ಕೇವಲ ವದಂತಿ ಅಷ್ಟೇ! ರಾಜಸ್ಥಾನದಲ್ಲಿನ ತನ್ನ ಗೆಳತಿಯ ಮದುವೆಯಲ್ಲಿ ಶ್ರೀಯಾ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಬಟ್ಟೆ ಮತ್ತು ಒಡವೆಗಳ ಖರೀಧಿ ಮಾಡಿದ್ದಾಳೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಸದ್ಯ ಬಿಗ್ ಬ್ಯಾನರ್ ನ 4 ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶ್ರೀಯಾ ಶರಣ್ ಗಮನ ಏನಿದ್ದರೂ ತಮ್ಮ ಚಿತ್ರಗಳ ಮೇಲೆ ಮಾತ್ರ ಇದ್ದು ಸದ್ಯಕ್ಕೆ ಮದುವೆಯ ಬಗ್ಗೆ ಯಾವುದೇ ಯೋಚನೆಗಳಿಲ್ಲ ಎಂದು ವರದಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top