fbpx
ಮನೋರಂಜನೆ

ತಮ್ಮ ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರವಂತೆ!

ತಮ್ಮ ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರವಂತೆ!

 

 

ಇತ್ತೀಚಿಗೆ ನಡೆದ ಪ್ರಕಾಶ್ ರಾಜ್ ಕುರಿತಾದ ಇರುವುದೆಲ್ಲವ ಬಿಟ್ಟು ಪುಸ್ತಕ ಬಿಡುಗಡೆಯ ವೇಳೆ ಪ್ರಕಾಶ್ ರೈ ಅವರ ಕುರಿತು ಮಾತನಾಡುತ್ತಾ ಕಿಚ್ಚ ಸುದೀಪ್ “ನನ್ನ ನಟನಾ ಜೀವನದಲ್ಲಿ ನಾನು ಶರಣಾಗಿರುವುದು ಇಬ್ಬರಿಗೆ ಮಾತ್ರ. ಮೊದಲು ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣುವರ್ಧನ್ ಸರ್‌ಗೆ ಶರಣಾದೆ, ಆಮೇಲೆ ‘ರನ್ನ’ ಚಿತ್ರೀಕರಣದ ಸಂದರ್ಭದಲ್ಲಿ ಪ್ರಕಾಶ್ ರೈ ಅವರಿಗೆ ಶರಣಾದೆ. ನಾನು ಇಷ್ಟ ಪಟ್ಟ ನಟರುಗಳಲ್ಲಿ ವಿಷ್ಣು ಸರ್ ಮತ್ತು ಪ್ರಕಾಶ್ ರೈ ಪ್ರಮುಖರು.” ಎಂದು ಹೇಳಿದ್ದಾರೆ.

 

 

ಪ್ರಕಾಶ್ ರೈ ಅವರ ‘ಇರುವುದೆಲ್ಲವ ಬಿಟ್ಟು’ ಎಂಬ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುದೀಪ್ ತಮ್ಮ ಬಗ್ಗೆ, ಚಿತ್ರರಂಗದ ಪಯಣದ ಬಗ್ಗೆ, ಪ್ರಕಾಶ್ ರೈ ಅವರ ಬಗ್ಗೆ ಆಪ್ತವಾಗಿ ಮಾತನಾಡಿದರು “ಪ್ರಕಾಶ್ ರೈ ಅವರು ನಡೆದಾಡುವ ಹಾರ್ಡ್ ಡಿಸ್ಕ್ ಇದ್ದ ಹಾಗೆ. ಅವರೊಳಗೆ ನಾವು ತಿಳಿದುಕೊಳ್ಳಬೇಕಾದ ತುಂಬಾ ವಿಷಯಗಳಿವೆ. ನಾನು ಅವರನ್ನು ಭೇಟಿ ಮಾಡಿದ ಪ್ರತೀ ಸಲವೂ ಒಂದೊಂದು ವಿಚಾರವಾಗಿ ನಾನು ಸ್ಫೂರ್ತಿಗೊಳ್ಳುತ್ತೇನೆ. ? ಈ ಪುಸ್ತಕ ಪ್ರಕಾಶ್‌ ಅವರ ವ್ಯಕ್ತಿತ್ವ ಎಂಬ ಸಿನಿಮಾದ ಟ್ರೇಲರ್‌ ಅಷ್ಟೆ. ಅವರ ವ್ಯಕ್ತಿತ್ವದ ಸಿನಿಮಾ ನೋಡಬೇಕೆಂದರೆ ಅವರೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು. ” ಎಂದು ಸುದೀಪ್ ಹೇಳಿದರು.

 

 

ಸಮಾರಂಭದಲ್ಲಿ ನಟ ಸುದೀಪ್ ಸೇರಿದಂತೆ ಹಿರಿಯ ಸಾಹಿತಿ ಎಚ್‌.ಎಸ್‌.ವೆಂಕಟೇಶ್‌, ನಟಿ ಶ್ರುತಿ ಹರಿಹರನ್, ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ, ನಟ ಅಚ್ಯುತ್ ರಾವ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. ‘ಇರುವುದೆಲ್ಲವ ಬಿಟ್ಟು’ ಎಂಬ ಪುಸ್ತಕ ಪ್ರಕಾಶ್ ರೈ ರಚಿಸಿರುವ ಮೊದಲ ಪುಸ್ತಕವಾಗಿದ್ದು ಪುಸ್ತಕಕ್ಕೆ 150ರೂ ಬೆಲೆಯನ್ನು ನಿಗದಿಮಾಡಲಾಗಿದೆ. ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್’ಲೈನ್ ನಲ್ಲೂ ಕೂಡ ಲಾಭವಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top