fbpx
ಹೆಚ್ಚಿನ

ಮಂಗಳ ಮುಖಿಯರು ಸತ್ತಾಗ ಅವರ ಅಂತ್ಯ ಸಂಸ್ಕಾರ ರಾತ್ರಿಯ ಹೊತ್ತು ಮಾತ್ರ ಮಾಡುತ್ತಾರೆ ಯಾಕೆ ಗೊತ್ತಾ?

ಮಂಗಳ ಮುಖಿಯರು ಸತ್ತಾಗ ಅವರ ಅಂತ್ಯ ಸಂಸ್ಕಾರ ರಾತ್ರಿಯ ಹೊತ್ತು ಮಾತ್ರ ಮಾಡುತ್ತಾರೆ ಯಾಕೆ ಗೊತ್ತಾ?

 

ಈ ವಿಷಯ ನಿಮ್ಮನ್ನು ಬೆಚ್ಚಿ ಬೀಳಿಸುವಂತಹ ವಿಷಯವಾಗಿರಬಹುದು ? ಅದರೂ ಇದು ಸತ್ಯ .ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ .ಅವರ ನಡೆ ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ವಿಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ನಿಯಮಗಳನ್ನು ಅವರು ಪಾಲನೆ ಮಾಡುತ್ತಾರೆ.

 

 

ಸಾಮಾನ್ಯವಾಗಿ ಮಂಗಳ ಮುಖಿಯರು ಹೇಗಿರುತ್ತಾರೆ…. ? ಎನ್ನುವ ಬಗ್ಗೆ ಹಲವಾರು ಕಡೆ ಕೇಳಿ ತಿಳಿದು ,ಇನ್ನೂ ಅನೇಕರು ಓದಿ ,ವಿಡಿಯೊಗಳನ್ನು ನೋಡಿ ತಿಳಿದುಕೊಂಡಿರುತ್ತಾರೆ.
ಆದರೆ ಅವರ ಶವಯಾತ್ರೆಯನ್ನು ನೋಡಿದವರ ಸಂಖ್ಯೆ ಮಾತ್ರ ಬಹಳ ವಿರಳ … ಮಂಗಳ ಮುಖಿಯರ ಸಮುದಾಯದಲ್ಲಿ ಶವವನ್ನು ಮುಚ್ಚಿಡಲಾಗುತ್ತದೆ. ಬೆಳಗ್ಗೆ ಎಂದಿಗೂ ಕೂಡ ಶವಯಾತ್ರೆಯನ್ನು ಮಾಡುವುದಿಲ್ಲ. ರಾತ್ರಿಯೇ ಶವದ ಅಂತ್ಯ ಸಂಸ್ಕಾರವನ್ನು ನಡೆಸುತ್ತಾರೆ. ಮಂಗಳ ಮುಖಿಯರ ಶವವನ್ನು ಯಾರೂ ನೋಡಬಾರದು, ಎನ್ನುವ ಕಾರಣಕ್ಕೆ ರಾತ್ರಿಯ ಸಮಯದಲ್ಲಿ ಶವಯಾತ್ರೆಯನ್ನು ನಡೆಸುತ್ತಾರೆ.

 

 

ಅವರ ಸಮುದಾಯದಲ್ಲಿ ಅವರು ಸಮುದಾಯ ಬಿಟ್ಟು ಬೇರೆ ಸಮುದಾಯದ ಮಂಗಳ ಮುಖಿಯರು ಆ ಶವಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಇನ್ನೂ ಅವರ ಸಮುದಾಯದಲ್ಲಿ ಸಾವು ಉಂಟಾದರೆ, ಯಾರು ಕಣ್ಣೀರು ಹಾಕುವುದಿಲ್ಲ ಬದಲಾಗಿ ಈ ನರಕ ಜೀವನದಿಂದ ಮುಕ್ತಿ ಸಿಕ್ಕಿದೆ ಎಂಬ ನಂಬಿಕೆಯಿಂದ ಆಪ್ತರನ್ನು ಕಳೆದುಕೊಂಡ ದುಃಖ ಎಷ್ಟೇ ಇದ್ದರೂ ಕಣ್ಣೀರು ಹಾಕದೆ ಸಂಭ್ರಮಿಸುತ್ತಾರೆ.
ಇನ್ನೂ ಹಣವನ್ನು ದಾನ ಮಾಡುತ್ತಾರೆ. ಹಿಂದೂ ಧರ್ಮವನ್ನು ಪಾಲಿಸುವ ಮಂಗಳ ಮುಖಿಯರು ಸಾವು ಉಂಟಾದಾಗ ಚಪ್ಪಲಿಯಿಂದ ಚಪ್ಪಲಿ ಏಟು ನೀಡುತ್ತಾರೆ, ಎಲ್ಲ ಪಾಪ ಕಳೆಯಲಿ ಎಂಬುದು ಈ ಪದ್ಧತಿಯ ಹಿಂದಿನ ಉದ್ದೇಶವಾಗಿದೆ.ಮಂಗಳ ಮಖಿಯರ ಸಮುದಾಯದಲ್ಲಿ ಶವವನ್ನು ಸುಡುವ ಬದಲು ಸಮಾಧಿ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top