fbpx
ಭವಿಷ್ಯ

ಫೆಬ್ರವರಿ 12 ನೇ ತಾರೀಖು ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ , ಒಂದೇ ರಾಶಿಯಲ್ಲಿ ಮೂರು ಗ್ರಹಗಳ ಮಹಾ ಸಂಯೋಗ ನಡೆಯುತ್ತೆ

ಫೆಬ್ರವರಿ 12 ನೇ ತಾರೀಖು ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ , ಒಂದೇ ರಾಶಿಯಲ್ಲಿ ಮೂರು ಗ್ರಹಗಳ ಮಹಾ ಸಂಯೋಗ ನಡೆಯುತ್ತೆ

 

ಗ್ರಹಗಳ ರಾಜ ಸೂರ್ಯದೇವನು ಕುಂಭ ರಾಶಿಗೆ ಫೆಬ್ರವರಿ ಹನ್ನೆರಡನೇ ತಾರೀಕಿನಂದು ಪ್ರವೇಶ ಮಾಡಲಿದ್ದಾನೆ. ಇದರ ಜೊತೆಗೆ ಬುಧ ಗ್ರಹವು ಕೂಡ ಹದಿನೈದನೇ ತಾರೀಖು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದರ ಸಂಯೋಗದಿಂದ ಕುಂಭ ರಾಶಿಯಲ್ಲಿ ಈಗಾಗಲೇ ಫೆಬ್ರವರಿ ಆರನೇ ತಾರೀಖಿನಂದು ಶುಕ್ರ ಗ್ರಹವು ಪ್ರವೇಶ ಮಾಡಿದ್ದು ಶುಕ್ರ ಗ್ರಹ ,ಬುಧ ಗ್ರಹ ,ಮತ್ತು ಸೂರ್ಯ ಗ್ರಹ ಎಲ್ಲರೂ ಕುಂಭ ರಾಶಿಯಲ್ಲಿ ಸ್ಥಿತರಾಗಿರುತ್ತಾರೆ. ಈ ಗ್ರಹಗಳ ಸಂಯೋಗದ ಕಾರಣದಿಂದ ಬೇರೆ ರಾಶಿಯವರು ಶುಭ ಫಲವನ್ನು ಕಾಣಲಿದ್ದಾರೆ .

 

 

ಹನ್ನೆರಡನೇ ತಾರೀಖು ಫೆಬ್ರವರಿ 2018 ಬೆಳಗಿನ ಜಾವ ಎರಡು ಗಂಟೆಗೆ ಗ್ರಹಗಳ ರಾಜ ಸೂರ್ಯ ದೇವನು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಸೂರ್ಯನು ಕುಂಭ ರಾಶಿಗೆ ಪ್ರವೇಶವಾಗುವ ಮೂಲಕ ಸನಾತನ ಧರ್ಮದ ಹೊಸ ವರ್ಷ ಪ್ರಾರಂಭವಾಗುವುದು.

 

 

ಕುಂಭ ಮತ್ತು ಮಕರ ರಾಶಿ ಈ ಎರಡೂ ರಾಶಿಯ ಸ್ವಾಮಿಯ ಅಧಿಪತಿ ಶನೈಶ್ಚರ ದೇವನೇ ಆಗಿದ್ದಾನೆ. ಶನಿ ಮತ್ತು ಸೂರ್ಯ ಸಂಬಂಧದಲ್ಲಿ ಮಗ ಮತ್ತು ತಂದೆಯಾಗಿದ್ದಾರೆ, ಶನಿಯ ರಾಶಿಯಾದ ಕುಂಭ ರಾಶಿಗೆ ಅಂದರೆ ಮಗನ ರಾಶಿಗೆ ತಂದೆಯು ಪ್ರವೇಶ ಮಾಡಲಿದ್ದಾನೆ. ಈ ಹಿಂದೆ ಕೂಡ ಮಕರ ರಾಶಿಯಲ್ಲಿಯೇ ತನ್ನ ಪುತ್ರನ ರಾಶಿಯಲ್ಲಿ ಸ್ಥಿತನಿದ್ದ ಸೂರ್ಯ ಈಗಲೂ ಕೂಡ ಪುತ್ರನ ರಾಶಿಯಾದ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಶನಿಗೆ ಸೂರ್ಯನು ಶತ್ರುವಾಗಿದ್ದರೂ ಕೂಡ ಸೂರ್ಯನು ಶನಿಯ ತಂದೆಯಾಗಿದ್ದಾರೆ, ತಂದೆ ಎಂದಿಗೂ ಕೂಡ ತನ್ನ ಪುತ್ರನಿಗೆ ಕೆಡುಕನ್ನು ಉಂಟು ಮಾಡುವುದಿಲ್ಲ. ಸೂರ್ಯನ ಮಿತ್ರ ಗ್ರಹವು ಚಂದ್ರ ಬುಧ ಮತ್ತು ಮಂಗಳ. ಸಮ ಗ್ರಹಗಳೆಂದರೆ ಅವು ಬುಧ . ಅನಂತರ ಶತ್ರು ಗ್ರಹ ಶನಿ, ರಾಹು, ಶುಕ್ರ ಗ್ರಹಗಳು .

 

 

ಇದರ ಜೊತೆಗೆ ಸೂರ್ಯ ಗ್ರಹಣವೂ ಫೆಬ್ರವರಿ ಹದಿನೈದನೇ ತಾರೀಖಿನಂದು ಶತಭಿಷಾ ನಕ್ಷತ್ರದಲ್ಲಿ ಸಂಭವಿಸಲಿದೆ. ಶತಭಿಷಾ ನಕ್ಷತ್ರವು ಕುಂಭ ರಾಶಿಯಲ್ಲಿ ಬರುವುದರಿಂದ ಈ ಶತಭಿಷ ನಕ್ಷತ್ರ ಕುಂಭ ರಾಶಿಯವರು ಸ್ವಲ್ಪ ಎಚ್ಚರವಾಗಿ ಇರುವುದು ಒಳ್ಳೆಯದು.

ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಯೋಗದಿಂದ ಸೂರ್ಯ ಮತ್ತು ಬುಧ ಜೊತೆಯಾಗುವುದರಿಂದ ಹದಿನೈದನೇ ತಾರೀಖಿನಂದು ಬುಧಾದಿತ್ಯ ಯೋಗವೂ ಕುಂಭ ರಾಶಿಯಲ್ಲಿ ಉಂಟಾಗುವುದು .
ಕುಂಭ ರಾಶಿಯಲ್ಲಿ ಸೂರ್ಯನ ಜೊತೆಗೆ ಬುಧ ,ಶುಕ್ರ ಗ್ರಹವು ಜೊತೆಯಾಗಲಿದ್ದಾರೆ, ಇದರ ಜೊತೆ ಜೊತೆಗೇ ಶನಿ ಗ್ರಹ, ಗುರು ಗ್ರಹ ಮತ್ತು ಮಂಗಳನ ದೃಷ್ಟಿ ಕೂಡ ಬೀಳಲಿದೆ .ಈ ಪ್ರಕಾರವಾಗಿ ಕುಂಭ ರಾಶಿಯ ಮೇಲೆ ಆರು ಗ್ರಹಗಳ ಪರಿಣಾಮ ಬೀರಲಿದೆ. ಈ ಕಾರಣದಿಂದ ಎಲ್ಲ ರಾಶಿಗಳು ಅವಶ್ಯವಾಗಿ ಪ್ರಭಾವಕ್ಕೆ ಒಳಗಾಗುತ್ತಾರೆ .ಆದರೆ ಕೆಲವು ರಾಶಿಯವರಿಗೆ ಅಪೇಕ್ಷೆ ಮಾಡಿದ ಹಾಗೆ ಅಧಿಕವಾಗಿ ಉತ್ತಮ ಫಲಗಳನ್ನು ಪಡೆದುಕೊಳ್ಳುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top