fbpx
ಸಮಾಚಾರ

ಮುದ್ರಿತವಾಗಿರುವ 14 ಬಗೆಯ 10 ರೂ ನಾಣ್ಯಗಳ ಕುರಿತು ಸ್ಪಷ್ಟನೆ ನೀಡಿದ ರಿಸರ್ವ್ ಬ್ಯಾಂಕ್!

ಮುದ್ರಿತವಾಗಿರುವ 14 ಬಗೆಯ 10 ರೂ ನಾಣ್ಯಗಳ ಕುರಿತು ಸ್ಪಷ್ಟನೆ ನೀಡಿದ ರಿಸರ್ವ್ ಬ್ಯಾಂಕ್! 

 

 

 

ಕೆಲವು ಸುಳ್ಳು ವದಂತಿಗಳಿಗೆ ಕಿವಿಕೊಟ್ಟು 10 ರುಪಾಯಿಯ ನಾಣ್ಯವನ್ನು ಅಮಾನ್ಯವಾಗಿದೆ ಎಂದು ತಿಳಿದುಕೊಂಡು ವಹಿವಾಟಿಗೆ ಈ 10 ರುಪಾಯಿಯ ನಾಣ್ಯವನ್ನು ತಿರಸ್ಕರಿಸುವ ಜನರಿಗೆ ಆರ್’ಬಿಐ ಖಡಕ್ ವಾರ್ನಿಂಗ್ ಕೊಟ್ಟಿದೆ. 10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲಿಲ್ಲ ಎಂಬ ವದಂತಿಯನ್ನು ಅಲ್ಲಗಳೆದಿರುವ ಆರ್.ಬಿ.ಐ ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ 10 ರೂಪಾಯಿ ನಾಣ್ಯವನ್ನು ವಹಿವಾಟುಗಳಿಗೆ ಸಾರ್ವಜನಿಕರು ಉಪಯೋಗಿಸಬೇಕು ಎಂದು ದೇಶದ ನಾಗರೀಕರ ಮೊಬೈಲ್’ಗಳಿಗೆ ಸಂದೇಶ ಕಳುಹಿಸುವುದರ ಮೂಲಕ ತಿಳಿಯಪಡಿಸುತ್ತಿದೆ.

 

ಭಾರತೀಯ ರಿಸರ್ವ್ ಬ್ಯಾಂಕ್ ಈವರೆಗೆ ಹದಿನಾಲ್ಕು ರೀತಿಯ ಹತ್ತು ರೂಪಾಯಿಯ ನಾಣ್ಯಗಳನ್ನು ಮುದ್ರಿಸಿದೆ ಅವುಗಳಲ್ಲಿ ಯಾವ ನಾಣ್ಯವೂ ಕೂಡ ಬ್ಯಾನ್ ಆಗಿಲ್ಲ.
ಅವುಗಳಲ್ಲೂ ಕೆಲವು ನಾಣ್ಯಗಳು ರೂಪಾಯಿಯ ಚಿಹ್ನೆಯನ್ನು ಹೊಂದಿದ್ದರೆ ಕೆಲವು ನಾಣ್ಯಗಳು ಹೊಂದಿಲ್ಲ ಹಾಗಾಗಿ ನಾಗರೀಕರು ಈ ಬಗ್ಗೆ ಗೊಂದಲವಾಗಬಾರದು ಎಂದು RBI ಖಚಿತ ಪಡಿಸಿದೆ.

 

 

ದೇಶದ ಎಲ್ಲಾ ಕಡೆಯಲ್ಲಿಯೂ 10 ರೂಪಾಯಿಯ ನಾಣ್ಯಗಳು ಈಗಲೂ ಚಲಾವಣೆಯಲ್ಲಿದೆ. 10 ರೂಪಾಯಿಯ ನಾಣ್ಯವನ್ನು ಅಮಾನ್ಯ ಮಾಡಿಲ್ಲ. ನಾಣ್ಯ ಚಲಾವಣೆಯಿಲ್ಲ ಎಂಬುದು ಸುಳ್ಳುವದಂತಿ. ಈ ನಾಣ್ಯವನ್ನು ವಹಿವಾಟಿನಲ್ಲಿ ಬಳಸಬೇಕು ಒಂದು ವೇಳೆ 10 ರೂಪಾಯಿಯ ನಾಣ್ಯವನ್ನು ಸ್ವೀಕರಿಸದಿರುವವರ ವಿರುದ್ಧ ಪೊಲೀಸರಿಗೆ ಕಂಪ್ಲೇಂಟ್ ಕೊಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕ್ಷೇತ್ರೀಯ ನಿರ್ದೇಶಕ ಯುಜನ್‌ ಇ.ಕಾರ್ತಿಕ್‌ ಈಗಾಗಲೇ ತಿಳಿಸಿದ್ದಾರೆ.

10 ರೂಪಾಯಿಯ ನಾಣ್ಯ ಇವತ್ತಿಗೂ ಕೂಡ ಕಾನೂನಿನ ಸಕ್ರಮ ನಾಣ್ಯವಾಗಿದೆ. ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯ ಮಾಡಿದಂತೆ 10 ರೂ. ನಾಣ್ಯವನ್ನು ಅಮಾನ್ಯಗೊಳಿಸಿಲ್ಲ. ಕೆಲವು ಕಿಡಿಗೇಡಿಗಳು ಸುಖಾಸುಮ್ಮನೆ 10 ರೂಪಾಯಿಯ ನಾಣ್ಯ ಬ್ಯಾನ್ ಆಗಿದೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇಂಥವರ ಮಾತಿಗೆ ಜನಸಾಮಾನ್ಯರು ಕಿವಿಕೊಡಬೇಡಿ ಎಂದು ಆರ್ಬಿಐ ತಿಳಿಸಿದೆ. ಈ ವಿಷ್ಯದ ಕುರಿತು ಜಾಗೃತಿ ಮೂಡಿಸಲು ಸ್ವತಃ RBI ಕಚೇರಿಯಿಂದಲೇ ಪ್ರತಿಯೊಬ್ಬರ ಮೊಬೈಲ್’ಗೂ 10 ರೂಪಾಯಿಯ ನಾಣ್ಯ ಬ್ಯಾನ್ ಆಗಿಲ್ಲ ಎಂಬ ಟೆಕ್ಸ್ಟ್ ಮೆಸೇಜ್ ರವಾನಿಸುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top