fbpx
ಬಿಗ್ ಬಾಸ್

ಇಂಗ್ಲಿಷ್ ಹಾಡನ್ನು ಕದ್ದು 3 ಪೆಗ್ ಸಾಂಗ್ ಮಾಡುದ್ರಾ ಚಂದನ್ ಶೆಟ್ಟಿ? ನೋಡಿ ಇಲ್ಲಿದೆ ಪ್ರೂಫ್!

ಇಂಗ್ಲಿಷ್ ಹಾಡನ್ನು ಕದ್ದು 3 ಪೆಗ್ ಸಾಂಗ್ ಮಾಡುದ್ರಾ ಚಂದನ್ ಶೆಟ್ಟಿ? ನೋಡಿ ಇಲ್ಲಿದೆ ಪ್ರೂಫ್!

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ಹೊರಬಂದ ಚಂದನ್ ಶೆಟ್ಟಿ ವಿರುದ್ಧ ಘೋರ ಆರೋಪವೊಂದು ಬಂದಿದೆ.

 

ಚಂದನ್ ಶೆಟ್ಟಿ ತುಂಬಾ ಪ್ರತಿಭಾವಂತ ಹಾಗು ತುಂಬಾ ಕಷ್ಟ ಪಟ್ಟು ಮೇಲೆ ಬೆಳೆದಿರುವಂತಹ ವ್ಯಕ್ತಿ. ತಾನೇ ಲಿರಿಕ್ ಬರೆದು ಮ್ಯೂಸಿಕ್ ಕೊಟ್ಟು ತಯಾರಾದ ಆ ಸಾಂಗ್’ಗಳನ್ನ ಒಂದೊಂದಾಗಿ ಕಲಾ ಕಾಲಕ್ಕೆ ಯೂಟ್ಯೂಬಲ್ಲಿ ಹರಿ ಬಿಟ್ಟು ಹಂತ ಹಂತವಾಗಿ ಯಶಸ್ಸು ಕಂಡ ಬಹುಮುಖ ಪ್ರತಿಭೆ ಚಂದನ್. ಚಂದನ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದ್ದು ‘ತ್ರೀ ಪೆಗ್’ ಪಾರ್ಟಿ ಸಾಗ್ ಎಂಬ ಹಾಡು. ಈ ಹಾಡು ಸ್ಯಾಂಡಲ್ ವುಡ್ ಅಂಗಳದಲ್ಲಿ ಯಾವ ಸ್ಟಾರ್ ನಟನ ಹಾಡು ಮಾಡದಷ್ಟು ಸೌಂಡ್ ಮಾಡಿತ್ತು. ಯೂಟ್ಯೂಬಲ್ಲಿ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದ ಈ ಹಾಡು ದೇಶ ವಿದೇಶಗಳಲ್ಲೂ ಕೂಡ ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡಿನಿಂದ ಚಂದನ್ ಕೂಡ ಒಂದು ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.

 

 

ಆದರೆ ಎರಡು ವರ್ಷ ಹಿಂದಿನ ಚಂದನ್’ನ ತ್ರೀ ಪೆಗ್ ಮೇಲೆ ಈಗ ಅಪಸ್ವರ ಕೇಳಿಬರುತ್ತಿವೆ. 2011ರಲ್ಲಿಬಿಡುಗಡೆಯಾಗಿದ್ದ Stefy De Cicco ಎಂಬ ಇಂಗ್ಲಿಷ್ ಹಾಡಿನ ಟ್ಯೂನಿನ ಯಥಾವತ್ತು ಕಾಪಿ ಎಂಬುದು ಎಂಥವರಿಗಾದರೂ ಗೊತ್ತಾಗುವಂತಿದೆ. ಅಲ್ಲದೆ Shermanology & GRX ಹಾಡಿನ ಟ್ಯೂನ್ ಕೂಡ ತ್ರೀ ಪೆಗ್ ಹಾಡಿನಲ್ಲಿದೆ.. ಒಂಚೂರು ಬದಲಾವಣೆಯಿಲ್ಲದೆ ಯಥಾವತ್ತಾಗಿ ತ್ರೀ ಪೆಗ್ ಹಾಡಿಗೆ Stefy De Cicco ಬೀಟ್ಸ್ ಅನ್ನ ಬಳಸಿಕೊಳ್ಳಲಾಗಿದೆ. ಒಂದು ಪಕ್ಷ ಇಂಗ್ಲಿಷ್ ಹಾಡನ್ನು ಸ್ಫೂರ್ತಿ ತಗೊಂಡು ತ್ರೀ ಪೆಗ್ ಸಾಂಗ್ ಮಾಡಿದ್ದೇನೆ ಎಂದು ಮೊದಲೇ ಹೇಳಿದ್ದಾರೆ ಈ ಟ್ಯೂನ್ ಕಳುವಿನ ವಿಷಯ ಚರ್ಚೆಗೆ ಬರುತ್ತಿರಲಿಲ್ಲವೇನೋ?

ಈ ವಿಡಿಯೋಗಳನ್ನು ನೋಡಿ ಪ್ರೂಫ್ ಇದರಲ್ಲಿದೆ.👇👇👇👇

 

 

 

ಒಟ್ನಲ್ಲಿ ಈ ಇಗ್ಲೀಷ್ ಹಾಡುಗಳನ್ನು ಒಮ್ಮೆ ಕೇಳಿದರೆ ಸಾಕು ಶೆಟ್ರು ತಮ್ಮ ಹಾಡಿಗೆ ಟ್ಯೂನ್’ಗಳನ್ನ ಯಥಾವತ್ತಾಗಿ ಬಟ್ಟಿ ಇಳಿಸಿಕೊಂಡಿರುವುದು ಎಂಥಾ ಚಿಕ್ಕ ಮಕ್ಕಳಿಗೂ ತಿಳಿಯುತ್ತದೆ. ಬಿಗ್ ಬಾಸ್ ಮನೆಯಲ್ಲಿ ಕೈಗೆ ಸಿಕ್ಕ ವಸ್ತುಯಿಗಳಿಂದಲೇ ವಿಧ ವಿಧವಾಗಿ ಹಾಡುಗಳನ್ನು ಮಾಡುತ್ತಿದ್ದ ಚಂದನ್ ಯಾಕೆ ರೀತಿ ಮಾಡಿಬಿಟ್ರು ಎಂಬುದು ಸದ್ಯಕ್ಕೆ ಅವರ ಅಭಿಮಾನಿಗಳಲ್ಲಿರುವ ಬೇಸರ. ಏನೇ ಇರಲಿ ಟ್ಯೂನ್ ಕಳುವಿನ ಈ ಮರ್ಮ ಈಗ ಬಹಿರಂಗವಾಗಿದ್ದು ಒಳ್ಳೇದೇ ಆಯಿತು, ಒಂದು ವೇಳೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಈ ವಿಷಯ ವೈರಲ್ ಆಗಿದ್ದರೆ ಬಿಗ್ ಬಾಸ್ ಗೆಲ್ಲಲು ತೊಂದರೆಯಾದರೂ ಆಗುತ್ತಿತ್ತು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top