fbpx
ಮನೋರಂಜನೆ

ದರ್ಶನ್ ಬರ್ತಡೇಗೆ ಒಂದು ವಾರದ ಮುಂಚೆಯೇ ಅವರ ಮನೆ ಬಳಿ ಅಭಿಮಾನಿಗಳು ಏನೆಲ್ಲಾ ಮಾಡಿದ್ದಾರೆ ನೋಡಿ!

ದರ್ಶನ್ ಬರ್ತಡೇಗೆ ಒಂದು ವಾರದ ಮುಂಚೆಯೇ ಅವರ ಮನೆ ಬಳಿ ಅಭಿಮಾನಿಗಳು ಏನೆಲ್ಲಾ ಮಾಡಿದ್ದಾರೆ ನೋಡಿ!

 

 

ತಮ್ಮ ನೆಚ್ಚಿನ ನಟರು ಹುಟ್ಟಿದ ದಿನವೆಂಬುದು ಅಭಿಮಾನಿಗಳ ಪಾಲಿಗೆ ಅಕ್ಷರಶಃ ಹಬ್ಬ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕೂಡ ಈ ಹಬ್ಬವನ್ನು ಕೆಲ ವರ್ಷಗಳಿಂದ ಕೇಕೆ ಹಾಕಿ ಸಿಕ್ಕಾಪಟ್ಟೆ ಸಂಭ್ರಮ ಪಡುತ್ತಾರೆ. ಈ ಬಾರಿಯೂ ಇನ್ನೇನು ದರ್ಶನ್ ಹುಟ್ಟಿದ ಹಬ್ಬದ ಸಂಭ್ರಮ ಎದುರಾಗಲಿದೆ. ಅದಾಗಲೇ ಅಭಿಮಾನಿಗಳೆಲ್ಲ ವಿಭಿನ್ನವಾದ ರೀತಿಯಲ್ಲಿ ಅದನ್ನಾಚರಿಸಲು ತಯಾರಿ ಮಾಡಿಕೊಂಡಿದ್ದಾರೆ!

 

 

ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಟ್ಟುಹಬ್ಬವನ್ನು ಅಭಿಮಾನಿಗಳು ಉತ್ಸವದಂತೆ ಸಾರ್ಥಕವಾಗಿ ಆಚರಿಸಲು ಮುಂದಾಗಿದ್ದಾರೆ. ಅದಕ್ಕೆ ಅಭಿಮಾನಿಗಳೇ ಸೇರಿಕೊಂಡು ‘ಡಿ ಉತ್ಸವ’ ಎಂಬ ಹೆಸರನ್ನೂ ಫೈನಲ್ ಮಾಡಿಕೊಂಡು ಅದರ ಚೆಂದದ ಲೋಗೋವನ್ನೂ ಮಾಡಿಕೊಂಡಿದ್ದಾರೆ. ಜೊತೆಗೆ ಡಿ ಉತ್ಸವದ ಸಂಪೂರ್ಣವಾದ, ಅಚ್ಚುಕಟ್ಟಾದ ರೂಪುರೇಷೆಗಳನ್ನೂ ಸಿದ್ಧಪಡಿಸಿಕೊಂಡಿದ್ದಾರೆ.

ಇನ್ನೂ ಅಭಿಮಾನಿಗಳ ನೆಚ್ಚಿನ ಡಿ ಬಾಸ್ ಹುಟ್ಟುಹಬ್ಬಕ್ಕೆ ಇನ್ನೂ ಒಂದು ವಾರ ಇದ್ದರೂ ಆಗಲೇ ಫ್ಯಾನ್ಸ್ ಸೆಲೆಬ್ರೇಷನ್ ಸ್ಟಾರ್ಟ್ ಆಗಿದೆ. ರಾಜರಾಜೇಶ್ವರಿ ನಗರದ ಅವರ ಮನೆಯ ಬಳಿ ದರ್ಶನ್ ಅಭಿಮಾನಿಗಳ ಫ್ಲೆಕ್ಸ್’ಗಳು ರಾರಾಜಿಸುತ್ತಿವೆ. ಫ್ಲೆಕ್ಸ್ ಗಳಿಗೆ ಭಾರಿ ಗಾತ್ರದ ಹೂವಿನ ಹಾರಗಳು ಬೀಳುತ್ತಿವೆ, ಅಭಿಮಾನಿಯೊಬ್ಬರು ಹೂವಿನಲ್ಲಿ ಡಿ-ಬಾಸ್ ಎಂದು ಬರೆದು ದೀಪವನ್ನು ಬೆಳಗಿಸಿದ್ದಾರೆ. ಇನ್ನೂ ಒಂದು ವಾರ ಇರುವಾಗಲೇ ಈ ರೀತಿ ಸಂಭ್ರಮ ಪಡುತ್ತಿರುವ ದರ್ಶನ್ ಅಭಿಮಾನಿಗಳು ಇನ್ನು ಹುಟ್ಟುಹಬ್ಬದ ದಿನ ಮತ್ಯಾವ ರೀತಿಯಲ್ಲಿ ಸಂಭ್ರಮಿಸಿತ್ತಾರೋ ಕಾದುನೋಡಬೇಕು.

 

 

 


 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top