fbpx
ಮನೋರಂಜನೆ

ಶೀರ್ಷಿಕೆ ನೀಡಿದವರಿಗೆ ಡೈಮೆಂಡ್ ನೆಕ್ಷೇಸ್ ಬಹುಮಾನ!

ಮುಹೂರ್ತದ ಸಂದರ್ಭದಲ್ಲಿ ಹೊಸಾ ಹುರುಪು, ಗೆಲುವಿನ ನಿರೀಕ್ಷೆಗಳೆಲ್ಲ ಲಕಲಕಿಸುತ್ತಾ ಸಂಭ್ರಮದ ವಾತಾವರಣ ಇರುವುದು ವಾಡಿಕೆ. ಆದರೆ ತಮ್ಮ ಹೊಸಾ ಚಿತ್ರವೊಂದಕ್ಕೆ ಮುಹೂರ್ತ ಮುಗಿಸಿಕೊಂಡ ನಿರ್ದೇಶಕ ಎಸ್ ನಾರಾಯಣ್ ನಿಟ್ಟುಸಿರೊಂದನ್ನು ರವಾನಿಸಿ, ಕೊನೆಗೂ ಮಹೂರ್ತ ಆಯಿತು ಅಂತ ಬೇಸರವೋ ಖುಷಿಯೋ ಎಂಬ ಗೊಂದಲ ಕಾಡುವಂತೆ ಮಾಧ್ಯಮದವರನ್ನು ಮುಖಾಮುಖಿಯಾಗಿದ್ದಾರೆ!

 

 

ಇಂಥಾ ಮಿಶ್ರಭಾವದಲ್ಲಿ ನಿರ್ದೇಶಕ ಎಸ್.ನಾರಾಯಣ್ ಹೊಸ ಚಿತ್ರದ ಕುರಿತು ಹೇಳಿಕೊಂಡಾಗ ಪತ್ರಕರ್ತರಿಗೆ ಆಶ್ಚರ್ಯ ಉಂಟಾಗಿತ್ತು. ಅವರು ಹೇಳುವಂತೆ ಹಲವು ಕತೆಗಳು, ಚಿತ್ರಕತೆ ಸಿದ್ದಪಡಿಸಿಕೊಂಡಾಗ ನಿರ್ಮಾಪಕರು ಮುಂದೆ ಬರುತ್ತಿದ್ದರು. ನಂತರ ಅದು ಕೈತಪ್ಪಿ ಹೋಗುತ್ತಿರುವುದು ಜಾಹಿರಾತಿನಿಂದಲೇ ತಿಳಿಯುತ್ತಿತ್ತು. ಇದೇ ರೀತಿ ೧೮ ಸಿನಿಮಾಗಳು ಆಗಿದೆ. ಕಾರಣವೇನೆಂದು ಇಂದಿಗೂ ತಿಳಿದಿಲ್ಲ. ನಮ್ಮ ಕಾಲದಲ್ಲಿ ಈ ರೀತಿ ಇರಲಿಲ್ಲ. ಅಕಸ್ಮಾತ್ ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ ಎಲ್ಲವನ್ನು ತಿಳಿಸಿ ಮನದಟ್ಟು ಮಾಡಿಸಿ ಅನುಮತಿ ಪಡೆದುಕೊಂಡು ಮುಂದಿನ ಕೆಲಸಕ್ಕೆ ಹೋಗುತ್ತಿದ್ದೆವು. ಆದರೆ ಈ ಸಿನಿಮಾ ಆ ರೀತಿ ಆಗದಂತೆ ಇಲ್ಲಿಯತನಕ ಬಂದು ನಿಂತಿದೆ ಅಂತ ನಿಟ್ಟುಸಿರಿಟ್ಟರು ನಾರಾಯಣ್!

ಕತೆಯ ಕುರಿತು ಹೇಳುವುದಾದರೆ ಪ್ರಸಕ್ತ ಯುವ ಪೀಳಿಗೆಯು ಎತ್ತ ಸಾಗುತ್ತಿದೆ. ಏನೇನೋ ಕಳೆದುಕೊಳ್ಳುವ ಅನಿವಾರ್ಯತೆ ಇದೆ. ಇವರುಗಳು ಜನ್ಮದಾತರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎರಡು ತಲೆಮಾರುಗಳ ಅಂತರದ ಸಮಸ್ಯೆಗಳು ಚಿತ್ರದ ಮುಖ್ಯ ಅಂಶವಾಗಿದೆ. ಚಿತ್ರಕ್ಕೆ ಹೆಸರು ಇಡಲು ಅಂದಾಜು ೧೨೦ ಟೈಟಲ್‌ಗಳನ್ನು ಗುಡ್ಡ ಹಾಕಾಲಾಗಿತ್ತು. ವಿನೂತನವಾಗಿರಲಿ ಅಂತ ಶೀರ್ಷಿಕೆಯನ್ನು ಜನರಿಗೆ ಬಿಡಲಾಗಿದೆ. ಚಿತ್ರಕ್ಕೆ ಹೊಂದುವಂತೆ ಸೂಕ್ತ ಟೈಟಲ್ ನೀಡಿದವರಿಗೆ ಒಂದು ಲಕ್ಷ ಮೌಲ್ಯದ ಡೈಮಂಡ್ ನಕ್ಲೆಸ್ ಕೊಡಲು ನಿರ್ಮಾಪಕರ ಯೋಜನೆ ಆಗಿದೆ. ಬೆಂಗಳೂರು, ಶ್ರವಣಬೆಳಗೊಳ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ನಾಯಕಿ ಸೇರಿದಂತೆ ೧೨ ಪಾತ್ರಗಳು ಸದ್ಯದಲ್ಲೆ ಆಯ್ಕೆಯಾಗಲಿದ್ದಾರೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.

 

 

ನಿರ್ದೇಶಕರ ಪುತ್ರ ಪಂಕಜ್ ಮರಳಿ ಯತ್ನ ಎನ್ನುವಂತೆ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ನಾಯಕ. ಇವರ ಹಿಂದಿನ ತೆಲಮಾರಿನಲ್ಲಿ ಅಭಿಜಿತ್ ನಟಿಸುತ್ತಿದ್ದಾರೆ. ಬಿಗ್‌ಬಾಸ್ ವಿಜೇತ ಚಂದನ್‌ಶೆಟ್ಟಿ ಸಾಹಿತ್ಯ-ಸಂಗೀತ, ಕಿಟ್ಟಿಕೌಶಿಕ್ ಛಾಯಗ್ರಹಣ, ಸಂಕಲನ ಶಿವುಯಾದವ್ ನಿರ್ವಹಿಸುತ್ತಿದ್ದಾರೆ. ಅಶೋಕ್‌ಶೇಟ್, ಶ್ರೀನಿವಾಸನ್‌ದೊರೈ, ಫಾರೂಕ್‌ಪಾಷಾ ನಿರ್ಮಾಣ ಮಾಡುತ್ತಿದ್ದು, ಅಭಿಜಿತ್ ಕೂಡ ಪಾಲುದಾರರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top