fbpx
ಸಮಾಚಾರ

SBI ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ! ಪ್ರತಿಯೊಬ್ಬ ಗ್ರಾಹಕರು ತಿಳ್ಕೊಳ್ಳೇಬೇಕು!

SBI ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ! ಪ್ರತಿಯೊಬ್ಬ ಗ್ರಾಹಕರು ತಿಳ್ಕೊಳ್ಳೇಬೇಕು!

 

Image result for state bank of india

 

ಕಳೆದ ವರ್ಷ ತನ್ನ ಅಧೀನ ಬ್ಯಾಂಕುಗಳನ್ನು ತನ್ನೊಂದಿಗೆ ವಿಲೀನ ಮಾಡಿಕೊಂಡ ನಂತರದಿಂದ ಸರ್ವಾಧಿಕಾರಿ ದೋರಣೆ ತೋರುತ್ತಿರುವ ಸರ್ಕಾರೀ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಂದು ಹೆಸರು ಪಡೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸದ್ಯ ಸಿಹಿ ಸುದ್ದಿಯೊಂದನ್ನ ನೀಡಿದೆ. ಕನಿಷ್ಟ ಉಳಿತಾಯ ಇಲ್ಲದ ಅಕೌಂಟ್ ಹೋಲ್ಡರ್’ಗಳಿಗೆ ಶುಲ್ಕ ವಿಧಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ಎಸ್ ಬಿ ಐ ಕನಿಷ್ಠ ಉಳಿತಾಯದ ಮೊತ್ತ ಮತ್ತು ಅವರ ಮೇಲಿನ ದಂಡವನ್ನು ಕಡಿಮೆ ಮಾಡಿದೆ.

ಈ ಮೊದಲು ಉಳಿತಾಯ ಖಾತೆಯ ತಿಂಗಳ ಕನಿಷ್ಠ ಠೇವಣಿ ಮೊತ್ತವನ್ನು 5 ಸಾವಿರಕ್ಕೆ ನಿಗದಿ ಮಾಡಿತ್ತು ನಂತರ ಸೆಪ್ಟೆಂಬರ್ ನಲ್ಲಿ 5 ಸಾವಿರದಿಂದ 3 ಸಾವಿರ ರೂಪಾಯಿಗೆ ಕಡಿತಗೊಳಿಸಿತ್ತು. ಉಳಿತಾಯ ಖಾತೆಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಮೊತ್ತ ಇರುವ ಖಾತೆಗಳಿಗೆ ದಂಡ ವಿಧಿಸಲಾಗುತ್ತಿತ್ತು. ಇದೀಗ ನಗರ ಪ್ರದೇಶಗಳ ಉಳಿತಾಯ ಖಾತೆಗಳ ಕನಿಷ್ಟ ಉಳಿತಾಯವನ್ನು ಅನ್ನು 1ಸಾವಿರ ರುಪಾಯಿಗೆ ಇಳಿಕೆ ಮಾಡಲು ಎಸ್.ಬಿ,ಐ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

 

 

ಪ್ರಸ್ತುತ ಮೆಟ್ರೊ ಪಾಲಿಟನ್ ನಗರಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಇತರೆ ಉಪ ನಗರ ಪ್ರದೇಶಗಳಲ್ಲಿ 2 ಸಾವಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂಪಾಯಿ ಕನಿಷ್ಠ ಠೇವಣಿ ನಿಗದಿ ಮಾದಲಾಗಿದ್ದು ಈ ಪೈಕಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬ್ಯಾಂಕುಗಳ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅನ್ನು 1000 ಇಳಿಸಲು ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ. ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಪಡೆಯಲಾಗಿದ್ದ ಶುಲ್ಕಗಳಿಂದ ಎಸ್.ಬಿ.ಐ ಗೆ 1700 ಕೋಟಿ ಹಣ ಸಂಗ್ರವಾಗಿತ್ತು.

ಶುಲ್ಕಗಳಿಂದ ಸಂಗ್ರವಾದ ಹಣ ಎಸ್ಬಿಐ ತ್ರೈಮಾಸಿಕ ಆದಾಯಕ್ಕಿಂತಲೂ ಜಾಸ್ತಿಇರುವುದು ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.. ಎಸ್ ಬಿಐನ ದುಬಾರಿಯಾದ ಶುಲ್ಕ ಕುರಿತು ಗ್ರಾಹಕರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತೀವ್ರ ಒತ್ತಡದ ಮೇರೆಗೆ ಎಸ್ ಬಿಐ ತನ್ನ ಕನಿಷ್ಟ ಬ್ಯಾಲೆನ್ಸ್ ಮೇಲಿನ ಶುಲ್ಕದಲ್ಲಿ ಕಡಿತ ಮಾಡಲು ಚಿಂತನೆ ನಡೆಸುತ್ತಿದೆ.

 

 

ಕನಿಷ್ಠ ಠೇವಣಿ ಇಲ್ಲದವರ ಮೇಲೆ ಹಾಕುವ ದಂಡದ ಜೊತೆಗೆ, ನಿರ್ವಹಣಾ ಶುಲ್ಕವನ್ನು ವಿಷಿಸುತ್ತಾ ಬಂದಿರುವ SBI ನಗರ ಪ್ರದೇಶ, ಗ್ರಾಮಾಂತರ ಪ್ರದೇಶಗಳಿಗೆ ಬೇರೆ ಬೇರೆ ರೀತಿಯ ನಿರ್ವಹಣಾ ಶುಲ್ಕಗಳನ್ನು ವಿಧಿಸುತ್ತಾ ಬಂದಿದೆ. ಸದ್ಯ ನಿಗದಿಪಡಿಸಲಾಗಿದ್ದ ನಿರ್ವಹಣಾ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 75 ರಿಂದ 25ರುಗೆ ಮತ್ತು ಗ್ರಾಮೀಣ ಪ್ರದೇಶಗಲ್ಲಿ 40 ರಿಂದ 20 ರುಗಳಿಗೆ ಇಳಿಸಲಾಗಿದೆ. ಅಲ್ಲದೆ ಪ್ರಧಾನಿ ಅವರ ಜನಧನ ಯೋಜನೆಗೆ ಅನುಗುಣವಾಗಿ ಸಣ್ಣ ಖಾತೆ, ಮಕ್ಕಳ ಖಾತೆ, ಹಿರಿಯ ನಾಗರಿಕರ ಖಾತೆ, ಪಿಂಚಣಿದಾರ ಖಾತೆಗಳನ್ನು ವಿಧಿಸಲಾಗುತ್ತಿದ್ದ non-maintenance of Monthly Average Balance ಶುಲ್ಕದಿಂದ ಮುಕ್ತಿಗೊಳಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top