fbpx
ಸಿನಿಮಾ

ಶೂಟಿಂಗ್ ಶುರುವಾಗುವ ಮುಂಚೆಯೇ ಹರಿಪ್ರಿಯಾ ಕೈಗೆ ಸಿಕ್ಕಿತು ಸಿನಿಮಾ ಸ್ಕ್ರಿಪ್ಟ್!

ಹಿಂದೆ ‘ಬುಲೆಟ್‌ ಬಸ್ಯಾ’ ಚಿತ್ರ ನಿರ್ದೇಶನ ಮಾಡಿದ್ದ ಜಯತೀರ್ಥ ಈಗ ರಿಷಭ್‌ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ‘ಬೆಲ್‌ ಬಾಟಮ್‌’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ
ಹಿಂದೆ ರಿಷಭ್‌ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದ ‘ರಿಕ್ಕಿ’ ಚಿತ್ರ ಕ್ಕೆ ಹರಿಪ್ರಿಯಾ ನಾಯಕಿಯಾಗಿದ್ದರು .

 

 

ಅಷ್ಟೇ ಅಲ್ಲದೆ ಜಯತೀರ್ಥ ನಿರ್ದೇಶನ ಮಾಡಿದ್ದ ‘ಬುಲೆಟ್‌ ಬಸ್ಯಾ’ ದಲ್ಲೂ ಹರಿಪ್ರಿಯಾ ನಟನೆ ಮಾಡಿದ್ದರು , ಈಗ ಇದೆ ಸಂಯೋಗದಲ್ಲಿ ನಟಿ ಹರಿಪ್ರಿಯಾ ‘ಬೆಲ್‌ ಬಾಟಮ್‌’ ಚಿತ್ರಕ್ಕೆ ನಾಯಕಿಯಾಗಿದ್ದಾರೆ .

 

 

ಗೋಲ್ಡನ್‌ ಹಾರ್ಸ್‌ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂತೋಷ್‌ ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ , ಅರವಿಂದ್‌ ಕಶ್ಯಪ್‌ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ .

 

 

ಈ ಚಿತ್ರ 29 ಕ್ಕೆ ಸೆಟ್ಟೇರಲಿದ್ದು , ಫೆಬ್ರವರಿ ಮೂರನೇವಾರದಿಂದ ಶೂಟಿಂಗ್ ಆರಂಭವಾಗಲಿದೆ .

 

 

 

ಇನ್ನು ಶೂಟಿಂಗ್ ಶುರುವಾಗುವ ಮುಂಚೆಯೇ ನಟಿ ಹರಿಪ್ರಿಯಾ ಹಾಗು ನಾಯಕನಟ ರಿಷಭ್‌ ಶೆಟ್ಟಿಯವರಿಗೆ ಪೂರ್ವಭಾವಿ ತಯಾರಿಯಂತೆ ಸ್ಕ್ರಿಪ್ಟ್ ಓದಲು ಕೊಟ್ಟಿದ್ದಾರೆ ನಿರ್ದೇಶಕ ಜಯ ತೀರ್ಥ , ಶೂಟಿಂಗ್ ಶುರುವಾದಾಗ ಸ್ಕ್ರಿಪ್ಟ್ ಓದಿ ಅಭ್ಯಾಸ ಮಾಡಿಕೊಂಡು ಕಷ್ಟ ಪಡುವ ಬದಲು ಮೊದಲೇ ಸ್ಕ್ರಿಪ್ಟ್ ಓದಿಕೊಂಡು ತಾಲೀಮು ನಡೆಸಿದರೆ ಒಳ್ಳೆಯದಲ್ಲವೇ ಇದರಿಂದ ಸಿನಿಮಾ ಕ್ವಾಲಿಟಿ ಕೂಡ ಚೆನ್ನಾಗಿರುತ್ತೆ ಏನಂತೀರಾ ?

 

 

 

ಈ ಚಂದದ ಫೋಟೋಗಳನ್ನು ನಟಿ ಹರಿಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top