fbpx
ಆರೋಗ್ಯ

ಹಿಪ್ಪು ನೇರಳೆ ಹಣ್ಣುಗಳು ಬರಿ ಕುರಿಗಳಿಗೆ ಮಾತ್ರವಲ್ಲ ಮನುಷ್ಯರು ತಿಂದ್ರೆ ಈ 8 ಲಾಭಗಳು ಪಡ್ಕೊಬಹುದು ಅಂತಾ ಗೊತ್ತಾದ್ಮೇಲೆ ಸಿಕ್ರೆ ಯಾವತ್ತೂ ಬಿಡಲ್ಲ

ಹಿಪ್ಪು ನೇರಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ ಹಿಪ್ಪುನೇರಳೆ ಗಿಡ ಬರೀ ರೇಷ್ಮೆ ಹುಳುಗಳಿಗೆ ಆಹಾರವಷ್ಟೇ ಅಲ್ಲ, ಹಿಪ್ಪು ನೇರಳೆ ಹಣ್ಣಿನಲ್ಲಿ ಕಬ್ಬಿಣ ,ವಿಟಮಿನ್ ಸಿ, ವಿಟಮಿನ್ ಕೆ, ಪೊಟಾಷಿಯಂ, ರಿಬೋಫ್ಲಾವಿನ್, ಕ್ಯಾಲ್ಸಿಯಂ , ನಾರಿನಾಂಶ ಇನ್ನೂ ಅನೇಕ ಪೋಷಕಾಂಶಗಳು ಹೇರಳವಾಗಿದ್ದು ಈ ಹಣ್ಣನ್ನು ನಿಯಮಿತವಾಗಿ ತಿನ್ನುತ್ತಾ ಬಂದರೆ ವಯಸ್ಸಾಗುವಿಕೆಯನ್ನು ತಡೆಯುತ್ತದೆ.

 

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿ ದಿನನಿತ್ಯಕ್ಕೆ ಅಗತ್ಯವಾದ ಶೇಕಡ ಹತ್ತರಷ್ಟು ನಾರಿನಾಂಶ ಹೊಂದಿದೆ ಇದರಿಂದಾಗಿ ಹೊಟ್ಟೆ ಕಟ್ಟುವಿಕೆ, ಮೂತ್ರ ವಿಸರ್ಜನೆಯ ತೊಂದರೆಗಳು, ಹೊಟ್ಟೆಯ ಉಬ್ಬರ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಪರಿಹಾರ ಹೊಂದಬಹುದು.

 

ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶವು ಹೇರಳವಾಗಿದ್ದು ಇದು ಜೀವಕೋಶಗಳಿಗೆ ಅಗತ್ಯವಾದ ಆಮ್ಲಜನಕವನ್ನು ಪೂರೈಸುವಲ್ಲಿ ಸಹಕಾರಿಯಾಗಿದೆ

 

ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾದ ಫ್ಲ್ಯಾವೊನೊಯ್ಡ್ ಅಂಶಗಳು ಹೇರಳವಾಗಿದ್ದು ಇವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶಗಳನ್ನು ಅಂದರೆ ಅನಗತ್ಯ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ, ಜೀವಕೋಶಗಳಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸಿ ರಕ್ತನಾಳಗಳನ್ನು ವಿಶ್ರಾಂತಿ ಮಾಡುತ್ತದೆ

 

ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿ ಆಂಟಿ ಒಕ್ಸಿಡಾಂಟ್ಸ್ ಗಳು ಹೆಚ್ಚಾಗಿದೆ ಅಷ್ಟೇ ಅಲ್ಲದೆ ವಿಟಮಿನ್ ಸಿ ವಿಟಮಿನ್ಎ ಹಾಗೂ ಪೊಲಿಫೆನೊಲಿಕ್ ಅಂಶಗಳು ಹೇರಳವಾಗಿವೆ
ಇವು ಜೀವಕೋಶಗಳಿಗೆ ಅಪಾಯ ತಂದೊಡ್ಡುವ ಕ್ಯಾನ್ಸರ್ ಕಾರಕ ಅಂಶಗಳ ವಿರುದ್ಧ ಹೋರಾಡುತ್ತದೆ

 

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ

 

ಹಿಪ್ಪು ನೇರಳೆ ಹಣ್ಣಿನಲ್ಲಿ ಕ್ಯಾರೊಟಿನಾಯ್ಡ್ಸ್ ಅಂಶಗಳು ಹೇರಳವಾಗಿದ್ದು ಇದು ಕಣ್ಣಿನ ಸುತ್ತಲ ಜೀವಕೋಶಗಳನ್ನು ಅಷ್ಟೇ ಅಲ್ಲದೆ ಕಣ್ಣಿನ ಪೊರೆ ಸಮಸ್ಯೆ ಕಾಡದಂತೆ ಕಣ್ಣನ್ನು ರಕ್ಷಿಸುತ್ತದೆ.

 

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಹಾಗೂ ಜೀವಕೋಶಗಳಿಗೆ ಅಗತ್ಯವಾದ ಖನಿಜಾಂಶಗಳು ಯಾವುದೇ ಕಾಯಿಲೆಯು ಮನುಷ್ಯನನ್ನು ಕಾಡದಂತೆ ಕಾಪಾಡುತ್ತದೆ ಬ್ಯಾಕ್ಟೀರಿಯಾ ವೈರಸ್ ಮುಂತಾದ ಸೋಂಕುಗಳಿಂದ ರಕ್ಷಿಸುತ್ತದೆ

 

ಮೂಳೆಗಳನ್ನು ಬಲಪಡಿಸುತ್ತದೆ

 

 

ಹಿಪ್ಪುನೇರಳೆ ಹಣ್ಣಿನಲ್ಲಿರುವ ವಿಟಮಿನ್ ಕೆ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶಗಳು ಜೊತೆಗೆ ಗಂಧಕ ಹಾಗೂ ಮೆಗ್ನೀಶಿಯಂ ಅಂಶಗಳು ಮೂಳೆಯನ್ನು ರಕ್ಷಿಸುತ್ತದೆ

 

ವಯಸ್ಸಾಗುವಿಕೆಯನ್ನು ತಡೆಯುತ್ತದೆ

 

 

ಹಿಪ್ಪು ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಎ ವಿಟಮಿನ್ ಹಾಗೂ ಬೀಟಾ ಕೆರಾಟಿನ್, ಆಲ್ಫಾ ಕೆರಾಟಿನ್ ಅಂಶಗಳು ಜೀವಕೋಶಗಳನ್ನು ಕಾಪಾಡುತ್ತವೆ ಇವು ಚರ್ಮದ ಸುಕ್ಕು ಹಾಗೂ ಕಲೆಗಳನ್ನು ನಿವಾರಿಸುತ್ತದೆ ಅಲ್ಲದೆ ವಯಸ್ಸಾಗುವಿಕೆಯನ್ನು ತಡೆಯುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top