fbpx
ಸಿನಿಮಾ

ನಿಮ್ಮ ಮನೆಲಿ ಹೆಣ್ಣು ಮಕ್ಕಳು ಇಲ್ವೇನ್ರಿ ? ಅಂತಾ ಸಿದ್ದರಾಮಯ್ಯನ ಸರ್ಕಾರದ ವಿರುದ್ಧ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಗುಡುಗಿದ್ದು ಈ ಕಾರಣಕ್ಕೆ

ಕಳೆದ ಎರಡು ದಿನಗಳಿಂದ ರಾತ್ರಿ ಹಗಲು ಎಂದು ಲೆಕ್ಕಿಸದೆ ಬಿಸಿಯೂಟದ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ

 

 

ಪಿಎಫ್ ಇಎಸ್ಐ ಹಾಗೂ ಕನಿಷ್ಠ ವೇತನವನ್ನು ನೀಡುವಂತೆ ಜೊತೆಗೆ ಇನ್ನೂ ಇತರ ಬೇಡಿಕೆಗಳನ್ನು ಬಿಸಿಯೂಟದ ಕಾರ್ಯಕರ್ತೆಯರು ಸರ್ಕಾರದ ಮುಂದೆ ಇಟ್ಟಿದ್ದಾರೆ .

 

ಇನ್ನು ಈ ವಿಷಯವನ್ನು ಮುಖ್ಯಮಂತ್ರಿಗಳು ಇತ್ಯರ್ಥ ಮಾಡುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಬಿಸಿಯೂಟದ ಕಾರ್ಯಕರ್ತೆಯರು ಹೇಳಿದ್ದಾರೆ

ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ .

ಹೆಣ್ಣು ಮಕ್ಕಳು ಹಗಲು ರಾತ್ರಿ ಎನ್ನದೇ ರಸ್ತೆ ಬದಿಯಲ್ಲಿ ಕೂತು ಕೊಳ್ಳುವುದು ಎಷ್ಟು ಸರಿ ಎಂದು ಸರ್ಕಾರವನ್ನು ಫೈರಿಂಗ್ ಸ್ಟಾರ್ ಪ್ರಶ್ನೆ ಮಾಡಿದ್ದಾರೆ ,ಹೆಣ್ಣುಮಕ್ಕಳ ಯಾವುದೇ ವಿಷಯವಾದರೂ ಮೊದಲು ನಾನು ಧ್ವನಿ ಎತ್ತುತ್ತೇನೆ .

 

 

ಇನ್ನು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭಾರಿ ತರಾಟೆಗೆ ತೆಗೆದುಕೊಂಡ ಫೈರಿಂಗ್ ಸ್ಟಾರ್ ನಿಮಗೊಂದು ಪ್ರಶ್ನೆ ಕೇಳುತ್ತೇನೆ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದರೆ ಹೀಗೆಯೇ ಅವರನ್ನು ರಸ್ತೆಯಲ್ಲಿ ಕುಳಿತುಕೊಳ್ಳಲು ಬಿಡುತ್ತಿದ್ದೀರಾ? ನೀವೇ ಹೇಳಿ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ

ಅವರಿಗೆ ಬರುವ ವೇತನ ಎರಡು ಸಾವಿರ ರೂಪಾಯಿಯಲ್ಲಿ ಈಗ ಇರುವ ಬೆಲೆಗಳಲ್ಲಿ ಹಾಗೂ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸಲು ಸಾಧ್ಯವೇ ಹೇಳಿ , ಒಂದು ವೇಳೆ ನಿಮಗೆ ಎರಡು ಸಾವಿರ ರೂಪಾಯಿ ಸಂಬಳ ಬಂದಿತ್ತು ಎಂದುಕೊಳ್ಳೋಣ ಆಗ ನಿಮ್ಮ ಜೀವನ ನಿರ್ವಹಣೆ ಹೇಗೆ ಮಾಡುತ್ತೀರಾ ?
ಅಷ್ಟು ಚೆನ್ನಾಗಿ ಅಡುಗೆ ಮಾಡುತ್ತಾರೆ ಅವರು ಮಾಡುವ ಅಡುಗೆಯಾದರೂ ಒಳ್ಳೆಯ ಬೆಲೆ ನೀಡಬೇಕು ಅಲ್ಲವೇ ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಈ ವಿಷಯವನ್ನು ಇತ್ಯರ್ಥ ಮಾಡಿ ಎಂದು ಸಹ ಫೈರಿಂಗ್ ಸ್ಟಾರ್ ಈ ಸಮಯದಲ್ಲಿ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top