fbpx
ಕ್ರಿಕೆಟ್

ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ: ಭಾರತಕ್ಕೆ ಹ್ಯಾಟ್ರಿಕ್ ಗೆಲುವು

ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ: ಭಾರತಕ್ಕೆ ಹ್ಯಾಟ್ರಿಕ್ ಗೆಲುವು

 

 

ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮಣ್ಣು ಮುಕ್ಕಿಸಿದೆ. ಈ ಮೂಲಕ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮಾಡಲು ಮುಂದಾದ ಭಾರತ ನಾಯಕ ವಿರಾಟ್ ಕೊಹ್ಲಿಯ ಭರ್ಜರಿ ಶತಕದ(160) ಸಹಾಯದಿಂದ ಭಾರತ ದಕ್ಷಿಣ ಆಫ್ರಿಕಾಗೆ 304 ರನ್ ಗಳ ಗುರಿ ನೀಡಿತ್ತು.

 

 

ಭಾರತ ನೀಡಿದ 304 ರನ್ನುಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭಾರತೀಯ ಬೌಲರ್ ಗಳ ಕರಾರುವಾಕ್ ದಾಳಿಗೆ ಸಿಲುಕಿ.ಕೇವಲ 173 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೂ ಕಳೆದುಕೊಂಡು ಭಾರತಕ್ಕೆ ಶರಣಾಯಿತು. ನಾಯಕ ಏಡೆನ್ ಮಾರ್ಕ್ರಮ್ ಹಾಗೂ ಜೆಪಿ ಡ್ಯುಮಿನಿ ಬಿಟ್ಟರೆ ಮತ್ಯಾವ ಆಫ್ರಿಕಾ ದಾಂಡಿಗನು ಕೂಡ ಭಾರತದ ಬೌಲಿಂಗ್ ಗೆ ಪ್ರತಿರೋಧ ಒಡ್ಡುವಷ್ಟು ಪ್ರಯತ್ನ ಮಾಡಲಿಲ್ಲ. ಭಾರತದ ಸ್ಪಿನ್ನರ್ ಗಳಾದ ಯಜುವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ಮಾರಕ ದಾಳಿಗಳ ನೆರವಿನಿಂದ ಭಾರತ ತಂಡವು 124 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ.

1992–92 ಹಾಗೂ 2010–11ರಲ್ಲಿ ನಡೆದ ಏಕದಿನ ಸರಣಿಗಳಲ್ಲಿ ಭಾರತ ತಂಡ ಆರಂಭಿಕ ಪಂದ್ಯಗಳನ್ನು ಗೆದ್ದು 2–0ಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಸೋಲು ಕಂಡು ಸರಣಿಯನ್ನು ಕಳೆದುಕೊಂಡಿತ್ತು. ಉಭಯ ದೇಶಗಳ ನಡುವಣ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಮ್ಮೆಯೂ ಮೂರು ಪಂದ್ಯ ಗೆದ್ದಿರಲಿಲ್ಲ ಆದರೀಗ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ.

 


ಸಂಕ್ಷಿಪ್ತ ಸ್ಕೊರ್:

ಭಾರತ ನಿಗದಿತ 50 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303
ವಿರಾಟ್ ಕೊಹ್ಲಿ 160
ಶಿಕಾರ ಧವನ್ 76
ಭುವನೇಶ್ವರ್ ಕುಮಾರ್ 16

ರಬಡಾ 54/3
ಲುಂಗಿಸಾನಿ 47/2

ದಕ್ಷಿಣ ಆಫ್ರಿಕಾ 40 ಓವರ್ಗಳಲ್ಲಿ 179- ಆಲೌಟ್
ಜೆಪಿ ಡುಮಿನಿ 51
ಮಕ್ರಂ 32
ಡೇವಿಡ್ ಮಿಲ್ಲರ್ 24

ಚಾಹಲ್ 46/4)
ಕುಲ್‌ದೀಪ್ ಯಾದವ್ 23/4

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top