fbpx
ವಾಸ್ತು

ಅಡುಗೆ ಮನೆಗೆ ಸಂಬಂಧಪಟ್ಟ ಕೆಲವು ವಾಸ್ತು ಸಲಹೆ ಹಾಗು ಸೂಚನೆಗಳನ್ನು ಪಾಲಿಸುತ್ತ ಬಂದರೆ ಮನೆಯೊಡತಿಗೆ ತುಂಬಾ ಒಳ್ಳೆಯದು

ಅಡುಗೆ ಮನೆಗೆ ಸಂಬಂಧಪಟ್ಟ ಕೆಲವು ವಾಸ್ತು ಸಲಹೆ ಹಾಗು ಸೂಚನೆಗಳನ್ನು ಪಾಲಿಸುತ್ತ ಬಂದರೆ ಮನೆಯೊಡತಿಗೆ ತುಂಬಾ ಒಳ್ಳೆಯದು

 

ಅಡುಗೆ ಮನೆಯನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುತ್ತೇವೆ. ಆದರೆ ಮನೆಯಲ್ಲಿ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿದ್ದರೆ ಶುಭವಾಗುತ್ತದೆ.ಅಡುಗೆ ಅಥವಾ ಅಗ್ನಿ ಗೃಹವು ಮನೆಯ ಅಗ್ನಿ ಸ್ಥಾನವಾದ ಆಗ್ನೇಯ ದಿಕ್ಕಿನಲ್ಲಿ ಇರಬೇಕು.
ನಾವು ಯಾವುದರ ಮೇಲೆ ಅಡುಗೆ ಮಾಡುತ್ತಿದ್ದೇವೆಯೋ, ಅದು ದಕ್ಷಿಣ ಅಥವಾ ಉತ್ತರ ಗೋಡೆಗೆ ತಾಕದ ಹಾಗೆ ನೋಡಿಕೊಳ್ಳಬೇಕು. ಹಾಗೆಯೇ ಸ್ಟವ್ ಹೊರಗಡೆ ಎಲ್ಲರಿಗೂ ಕಾಣುವ ಹಾಗೆ ಇಟ್ಟುಕೊಳ್ಳುವುದು ಸಹ ಒಳ್ಳೆಯದಲ್ಲ .
ಸ್ಟವ್ ಹತ್ತಿರ ಪಂಪ್ ಗಳು, ಸಿಂಕ್ಗಳು ಇರದ ಹಾಗೆ ನೋಡಿಕೊಳ್ಳಬೇಕು. ಆಗ್ನೇಯ ದಿಕ್ಕಿನಲ್ಲಿ ನೀರಿನ ಬಳಕೆ ಎಷ್ಟು ಕಡಿಮೆ ಇರುತ್ತದೆಯೋ, ಅಷ್ಟು ಒಳ್ಳೆಯದಲ್ಲ. ನೀರಿನ ಬಳಕೆ ಹೆಚ್ಚು ಇದ್ದರೆ ಆರ್ಥಿಕ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ, ಅಗ್ನಿ ,ಜಲ ಎರಡು ಪರಸ್ಪರ ವಿರುದ್ಧ ಪದಗಳು, ಮನೆಯಲ್ಲಿ ಅಲ್ಮಿರಾಗಳು ಉತ್ತರ ದಿಕ್ಕಿನಲ್ಲಿದ್ದರೆ, ಅದರಲ್ಲಿ ಬೇಕಾಗಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಬೇಕು .

 

 

ಮಿಕ್ಸಿ, ಗ್ರೈಂಡರ್ ನಂತಹ ಎಲೆಕ್ಟ್ರಿಕಲ್ ವಸ್ತುಗಳನ್ನು ಅಡುಗೆ ಮನೆಯ ಉತ್ತರ ಭಾಗಕ್ಕೆ ಇಟ್ಟುಕೊಳ್ಳಬೇಕು. ಅಡುಗೆ ಮನೆಯಲ್ಲಿ ಸಿಂಕ್ ಇಲ್ಲದಿರುವುದೇ ಒಳ್ಳೆಯದು. ಅಡುಗೆ ಮನೆಯಲ್ಲಿ ಉಪ್ಪು, ಅರಿಶಿನ ಇಡಬೇಕು. ಎಂತಹ ಅಡುಗೆ ಮಾಡಿದರೂ ಉಪ್ಪು ಇಲ್ಲದೆ ರುಚಿ ಇರುವುದಿಲ್ಲ .

 

 

ಉಪ್ಪು ಇಲ್ಲದ ಅಡುಗೆ ಇಲ್ಲ , ಹಾಗೆಯೇ ಉಪ್ಪಿನ ಬಗ್ಗೆ ಇರುವ ತುಂಬಾ ಆಚಾರಗಳು, ನಮ್ಮ ಭಾರತದಲ್ಲಿ ಆಚರಿಸುತ್ತಾರೆ. ಉಪ್ಪಿನಿಂದ ಮನೆಗೆ ಒಳ್ಳೆಯದು ಆಗುತ್ತದೆ ಎಂದು ನಮ್ಮ ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಒಂದು ವೇಳೆ ಮನೆಯಲ್ಲಿ ಉಪ್ಪು ಕಳ್ಳತನವಾದರೆ ಲಕ್ಷ್ಮೀದೇವಿ ಮನೆಯಿಂದ ಹೊರಕ್ಕೆ ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದಾಳೆ ಎಂದು ಭಾವಿಸುತ್ತಾರೆ.

 

ಹರಿಶಿನ ನಮ್ಮ ದೇಶದಲ್ಲಿ ಉನ್ನತ ವಸ್ತುವಾಗಿದೆ. ಅರಿಶಿನದ ಕೊಂಬನ್ನು ವಿನಾಯಕನ ವಿಗ್ರಹವಾಗಿ ಹೋಲಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ಸಂತೋಷ , ನೆಮ್ಮದಿ ಇರುತ್ತದೆ. ಈ ಎರಡು ವಸ್ತುಗಳು ಲಕ್ಷ್ಮೀದೇವಿಯ ಹಾಗೆಯೇ ವಿನಾಯಕನಿಗೂ ಕೂಡಾ ತುಂಬಾ ಪ್ರಿಯವಾದವು.

ಈ ಉಪ್ಪು ಮತ್ತು ಅರಿಶಿಣವನ್ನು ಅಡುಗೆ ಮನೆಯಲ್ಲಿ ಒಟ್ಟಿಗೆ ಎಂದಿಗೂ ಇಡಬಾರದು .
ಒಂದು ವೇಳೆ ಹಾಗೆ ಉಪ್ಪು ಮತ್ತು ಅರಿಶಿಣವನ್ನು ಒಟ್ಟಿಗೆ ಅಡುಗೆ ಮನೆಯಲ್ಲಿ ಇಟ್ಟರೆ ದಾರಿದ್ರ್ಯ ಬರುತ್ತದೆ. ಅದಕ್ಕೆ ಇದನ್ನು ಬೇರೆ ಬೇರೆ ಜಾಗದಲ್ಲಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಬಾಗಿಲಿಗೆ ಕನ್ನಡಿಯನ್ನು ಇಡಬಾರದು .ಪ್ರವೇಶ ದ್ವಾರದ ಹತ್ತಿರ ಅಡುಗೆ ಮನೆ ಇದ್ದರೆ ಕುಟುಂಬ ಸದಸ್ಯರಿಗೆ ಜೀರ್ಣಕ್ರಿಯೆಯ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆ .

 

 

ಅಡುಗೆ ಮನೆಗೆ ಪರದೆಗಳನ್ನು ಉಪಯೋಗಿಸಬೇಕು. ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಬೇಕೆಂದರೆ ಉಪ್ಪು ಮತ್ತು ಅರಿಶಿನವನ್ನು ದೂರ ದೂರದ ಸ್ಥಳಗಳಲ್ಲಿ ಎರಡನ್ನೂ ಇಡಬೇಕು. ನಮ್ಮ ಘನತೆಗೆ ತಕ್ಕಂತೆ ಮತ್ತು ತಕ್ಕ ಹಾಗೆ ಮನೆಯಲ್ಲಿ ಅಡುಗೆ ಮನೆಯನ್ನು ರೂಪಿಸಿಕೊಳ್ಳುತ್ತೇವೆ,ಆದರೆ ಮನೆಯಲ್ಲಿ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿದ್ದರೆ ಶುಭವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top