fbpx
ದೇವರು

ಮಹಾಮಸ್ತಕಾಭಿಷೇಕದ ಕುರಿತು ನಿಮಗೆ ಗೊತ್ತಿರದ ಇತಿಹಾಸದ ಪವಾಡದ ಕಥೆಯ ಬಗ್ಗೆ ತಿಳಿದುಕೊಳ್ಳಿ.

ಮಹಾಮಸ್ತಕಾಭಿಷೇಕದ ಕುರಿತು ನಿಮಗೆ ಗೊತ್ತಿರದ ಇತಿಹಾಸದ ಪವಾಡದ ಕಥೆಯ ಬಗ್ಗೆ ತಿಳಿದುಕೊಳ್ಳಿ.

ಶ್ರವಣಬೆಳಗೊಳದಲ್ಲಿ ಮರುಕಳಿಸುತ್ತಿದೆ ಪರಂಪರೆ 2300 ವರ್ಷ ಇತಿಹಾಸವಿರುವ, ಚಾವುಂಡರಾಯನ ತಾಯಿಯ ಆಸೆಯಂತೆ ಅರಿಷ್ಟನೇಮಿ ಶೀಲಾ ವಿನ್ಯಾಸದಲ್ಲಿ ಮೂಡಿ ಬಂದ ವಿಶ್ವ ಪ್ರಖ್ಯಾತ 57 ಅಡಿ ಎತ್ತರದ ಏಕಶಿಲಾ ಮೂರ್ತಿ ಭಗವಾನ್ ಬಾಹುಬಲಿ.

 

 

ಕ್ರಿ. ಶ 981 ರಲ್ಲಿ ನಡೆದ ಪ್ರಥಮ ಮಹಾ ಮಸ್ತಕಾಭಿಷೇಕ ಜರುಗಿತು. ರಾಜ ಚಂದ್ರಗುಪ್ತ ಮೌರ್ಯ, ಆಚಾರ್ಯ ಭದ್ರಬಾಹು ಮುನಿ ಹಾಗು ಇನ್ನು ಅನೇಕ ಮಹಾನ್ ಜನ ಮುನಿಗಳ ತಪೋಭೂಮಿ ಈ ಶ್ರವಣಬೆಳಗೊಳ. ವಿದ್ಯಾಗಿರಿ ಬೆಟ್ಟದಲ್ಲಿ ನೆಲೆಸಿರುವ ವಿಶ್ವಪ್ರಖ್ಯಾತ 57 ಅಡಿ ಎತ್ತರದ ಏಕಶಿಲಾ ಮೂರ್ತಿ. ಇಲ್ಲಿ ದರ್ಶನ ಮಾಡುವುದರಿಂದ ಶಾಂತಿ ಹಾಗು ಅನುಭೂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಚಾವುಂಡರಾಯ ಶ್ರವಣಬೆಳಗೊಳದ ಪ್ರಸಿದ್ಧ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೀರ್ತಿ ಪಡೆದವರು; ಚಾವುಂಡರಾಯಪುರಾಣವೆಂದು ಹೆಸರಾಗಿರುವ ತ್ರಿಷಪ್ಟಿ ಲಕ್ಷಣ ಮಹಾಪುರಾಣವೆಂಬ ಮಹಾಪುರಾಣವನ್ನು ಗದ್ಯದಲ್ಲಿ ರಚಿಸಿದರು.

 

 

ಪವಾಡದ ಕಥೆ:

ಚಾವುಂಡರಾಯ ಮಹಾಮಸ್ತಕಾಭಿಷೇಕ ಮಾಡುವಾಗ ದ್ರವ್ಯವು ಬಾಹುಬಲಿ ಸ್ವಾಮಿಯ ಹೃದಯ ಭಾಗದ ಕೆಳಗೆ ಬರುತ್ತಿರಲಿಲ್ಲ, ಅಭಿಷೇಕವು ಪೂರ್ಣ ವಾಗುತ್ತಿರಲಿಲ್ಲ ಆಗ ಚಾವುಂಡರಾಯ ಚಿಂತೆಗೆ ಒಳಗಾದರು. ಆಗ ಕೂಷ್ಮಾಂಡಿನಿ ದೇವಿಯು ಒಬ್ಬ ವೃದ್ಧ ಮಹಿಳೆ ವೇಷದಲ್ಲಿ ಬಂದು ಒಂದು ಚಿಕ್ಕ ಬಿಂದಿಗೆಯಲ್ಲಿ ಅಭಿಷೇಕ ಮಾಡಿದಾಗ ಅಭಿಷೇಕ ಪೂರ್ಣವಾಗುತ್ತದೆ ಇದೊಂದು ವಿಸ್ಮಯವೇ ಸರಿ.

 

 

ಚಂದ್ರಗಿರಿ ಬೆಟ್ಟದಲ್ಲಿ ಅತ್ಯದ್ಭುತವಾದ ಜಿನಾಲಯಗಳಿವೆ. ವಿಶ್ವದ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಮಹಾಮಸ್ತಕಾಭಿಷೇಕವು ಫೆಬ್ರುವರಿ 18 2018 ರಿಂದ ಫೆಬ್ರುವರಿ 25 2018 ರವರೆಗೆ ನಡೆಯಲಿದೆ. ಲಕ್ಷಣತರ ಭಕ್ತರು ಆಗಮಿಸಿ ಭಗವಾನ ಬಾಹುಬಲಿಯ ದರ್ಶನ ಪಡೆಯುತ್ತಾರೆ.

 

 

88 ನೇ ಮಹಾಮಸ್ತಕಾಭಿಷೇಕದ ಉದ್ಘಾಟನಾ ಸಮಾರಂಭವು ನಿನ್ನೆ ದಿನಾಂಕ 07 ಫೆಬ್ರುವರಿ 2018 ರಂದು ನಡೆಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಸಾರಥ್ಯದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top