fbpx
ಆರೋಗ್ಯ

ಸೈನಸ್ ತಲೆನೋವಿಗೆ ಸುಲಭ ಪರಿಣಾಮಕಾರಿಯಾದ ಮನೆಮದ್ದು

ಸೈನಸ್ ತಲೆನೋವಿಗೆ ಸುಲಭ ಪರಿಣಾಮಕಾರಿಯಾದ ಮನೆಮದ್ದು

ಶೀತದ ನಂತರ ಕಾಡುವ ಸೈನಸ್ ತಲೆನೋವು ನಮ್ಮ ಸಾಮಾನ್ಯ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳೇನು ನೋಡೋಣ.

Image result for ಸೈನಸ್

*ಬಾಯಿಯನ್ನು ಉಗುರು ಬೆಚ್ಚಗೆ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

Image result for hot water

*ಅಲರ್ಜಿಗೆ ಸಂಬಂಧಿಸಿದ ಧೂಳಿನಿಂದ ದೂರ ಇರಬೇಕು.

Image result for dust allergy

*ಮನೆಯನ್ನು ಶುಭ್ರವಾಗಿಟ್ಟುಕೊಂಡು ಸುತ್ತಲೂ ನೀರು, ಕೆಸರು ಇರದಂತೆ ನೋಡಿಕೊಳ್ಳಬೇಕು.

Image result for hot water drinking

*ದ್ರವಾಂಶ ಸೇವನೆ

ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಆದಷ್ಟು ಬಿಸಿ ಬಿಸಿಯಾದ ನೀರನ್ನು ಆಗಾಗ ಕುಡಿಯುತ್ತಿರುವುದು ದೇಹಕ್ಕೆ ಒಳ್ಳೆಯದು.

Image result for menasu

*ಖಾರದ ಆಹಾರ

ಕಾಳುಮೆಣಸು, ಸಾಸಿವೆಯಂತಹ ಖಾರದ ಪದಾರ್ಥಗಳನ್ನು ಆದಷ್ಟು ಆಹಾರದಲ್ಲಿ ಸೇರಿಸಿ ಸೇವಿಸಿ. ಇದು ಕಫ ಕರಗಿಸುತ್ತದೆ. ಕೆಫೈನ್ ಅಂಶವಿರುವ ಆಹಾರ ಸೇವನೆ ಬೇಡ.

Image result for ನಿಂಬೆ ಪಾನೀಯ

*ನಿಂಬೆ ಪಾನೀಯಕ್ಕೆ ಜೇನುತುಪ್ಪ ಸೇರಿಸಿ

ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿಯುತ್ತಿರಿ.  ಇದು ಗಟ್ಟಿಯಾದ ಕಫ ಕರಗಿಸುತ್ತದೆ.

Image result for menasu soop

*ಸೂಪ್

ಸ್ವಲ್ಪ ಕಾಳು ಮೆಣಸು ಹಾಕಿದ ಟೊಮೆಟೋ ಸೂಪ್ ಕುಡಿಯಿರಿ. ಖಾರ ಖಾರವಾಗಿ ಸೇವಿಸುವುದರಿಂದ ನಾಲಿಗೆಗೆ ರುಚಿಯಷ್ಟೇ ಅಲ್ಲ, ಕಫವೂ ಕರಗುವುದು.

Related image

*ಆವಿ ತೆಗೆದುಕೊಳ್ಳುವುದು

ಕುದಿಯುವ ಬಿಸಿ ನೀರನ್ನು ಅಗಲವಾದ ಬಾಯಿ ಇರುವ ಪಾತ್ರೆಗೆ ಹಾಕಿ ಅದರಲ್ಲಿ 8-10 ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ಹಬೆ ತೆಗೆದುಕೊಳ್ಳಿ. ಇದು ಸೈನಸ್ ಸಮಸ್ಯೆಯನ್ನು ಸ್ವಲ್ಪ ಕಮ್ಮಿ ಮಾಡುತ್ತದೆ.

Related image

*ಸಾಕಷ್ಟು ನೀರು ಕುಡಿಯಿರಿ

ಸೈನಸ್ ಸಮಸ್ಯೆ ಕಾಣಿಸಿಕೊಂಡಾಗ ಸುಮಾರು 3-4 ಲೀಟರ್ ನೀರು ಕುಡಿಯಬೇಕು, ಬಿಸಿನೀರು ಸೇವನೆ   ಒಳ್ಳೆಯದು.  ಸೈನಸ್ ಆದಾಗ ಮದ್ಯ, ಕೆಫೀನ್ ಮತ್ತು ಧೂಮಪಾನ ವರ್ಜಿಸಬೇಕು, ಇವುಗಳಿಂದ ದೇಹದ ನೀರಿನಂಶ ಕಡಿಮೆಯಾಗುತ್ತದೆ.

Image result for ಯೋಗ

*ಯೋಗ

ಸೂರ್ಯ ನೇತಿ, ಜಲ  ನೇತಿ, ಕಪಾಲಭಾತಿ, ಭಸ್ತ್ರಿಕ ಹಾಗು ಅನುಲೋಮ-ವಿಲೋಮ ಪ್ರಾಣಾಯಾಮ ಗಳು  ಸೈನುಸೈಟಿಸ್ ನಿವಾರಣೆಗೆ ಸಹಾಯಕಾರಿ. ಇವುಗಳನ್ನು ಯೋಗ ಗುರುಗಳ ನಿರ್ದೇಶನದಂತೆ ಮಾಡುವುದೊಳ್ಳೆಯದು.

Related image

*ಕಷಾಯ ಸೇವನೆ

ಕಾಳು ಮೆಣಸು, ಮೂಲಂಗಿ ಗಳಿಂದ ಮಾಡಿದ ಕಷಾಯ ಸೇವನೆ ಲಾಭದಾಯಕ, ಮೆಣಸು, ಅರಿಶಿಣ, ಶುಂಠಿ, ನಿಂಬೆ ರಸ ಗಳಂತಹ ತೀಕ್ಷ್ನ ಗುಣವುಳ್ಳ ಪದಾರ್ಥಗಳಲ್ಲಿ  ರೋಗಾಣುನಿರೋಧಕ (ಂಟಿಣi-bಚಿಛಿಣeಡಿiಚಿಟ) ಮತ್ತು ಉರಿಯೂತ (iಟಿಜಿಟಚಿmmಚಿಣioಟಿ) ನಿರೋಧಕ ತತ್ವಗಳಿವೆ.  ಇವುಗಳಿಂದ ತಯಾರಿಸಿದ  ಕಷಾಯ ಅಥವಾ ಬಿಸಿ ನೀರಲ್ಲಿ ಬೆರೆಸಿ ತಯಾರಿಸಿದ ಪೇಯ  ಆರೋಗ್ಯಕ್ಕೆ ಒಳ್ಳೆಯದು.  ಚಿಕನ್ ಸೂಪ್ ಅಥವಾ ಗಿಡ ಮೂಲಿಕೆಗಳನ್ನು ಹಾಕಿ ಮಾಡಿದ ಸೂಪ್ ಕೂಡ ಒಳ್ಳೆಯದು

Related image

*ವಿಶ್ರಾಂತಿ

ಸೈನಸ್ ಬಂದಾಗ ವಿಶ್ರಾಂತಿ ತೆಗೆದುಕೊಳ್ಳಿ. ಚೆನ್ನಾಗಿ ನಿದ್ದೆ ಮಾಡಿ ಎದ್ದರೆ ತಲೆನೋವು ಕಡಿಮೆಯಾಗುವುದು. ಆಗಾಗ ತಲೆನೋವು ಕಾಣಿಸುತ್ತಿದ್ದರೆ ಕಡೆಗಣಿಸಬೇಡಿ, ವೈದ್ಯರಲ್ಲಿ ತೋರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top