fbpx
ಮನೋರಂಜನೆ

ದರ್ಶನ್’ಗೆ ಒಲಿದು ಬಂತು ಮತ್ತೊಂದು ಬಿರುದು. ಏನು ಗೊತ್ತಾ?

ದರ್ಶನ್’ಗೆ ಒಲಿದು ಬಂತು ಮತ್ತೊಂದು ಬಿರುದು. ಏನು ಗೊತ್ತಾ?

 

ಚಾಲೆಂಜಿಂಗ್ ಸ್ಟಾರ್ ಎಂಬುದು ನಟ ದರ್ಶನ್’ಗೆ ಇರುವ ಬಿರುದು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಇದರ ಜೊತೆಗೆ ಬಾಕ್ಸ್ ಆಫೀಸ್ ಸುಲ್ತಾನ್, ಮೈಸೂರು ಹುಲಿ,ಕರುನಾಡಿನ ಕರ್ಣ ಸೇರಿದಂತೆ ಅನೇಕ ಬಿರುದುಗಳು ಕೂಡ ದರ್ಶನ್ ಅವರಿಗೆ ಒಲಿದಿವೆ. ಆದಾಗ್ಯೂ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂತಲೇ ಕರೆಯುತ್ತಾರೆ. ಈ ಎಲ್ಲ ಬಿರುದುಗಳ ಮಧ್ಯೆ ದರ್ಶನ್ ಅವರಿಗೆ ಮತ್ತೊಂದು ಬಿರುದು ಒಲಿದು ಬಂದಿದೆ.

ದರ್ಶನ್ ಅವರ ಗೆಳೆಯನಾದ ಚಿತ್ರ ಸಾಹಿತಿ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರು ದರ್ಶನ್’ಗೆ ‘ಶತಸೋದರಾಗ್ರಜಾ ಶರವೀರ’ ಎಂಬ ಹೊಸ ಬಿರುದನ್ನು ನೀಡಿದ್ದರು. ಈಗ ದರ್ಶನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹೊಸ ಬಿರುದನ್ನೂ ನೀಡಲು ಮುಂದಾಗಿದ್ದಾರೆ. ದರ್ಶನ್ ಗೆ ನೀಡಲಾಗುತ್ತಿರುವ ಹೊಸ ಬಿರುದು ಯಾವುದೆಂದರೆ ‘ಕಲಾ ಸಾರ್ವಭೌಮ’, ಎಂದು.

 

 

ಇದೆ ತಿಂಗಳ 16ನೇ ತಾರೀಕಿನಂದು ದರ್ಶನ್ ಅವರ ಹುಟ್ಟುಹಬ್ಬ ಇರುವುದರಿಂದ, ಹುಟ್ಟು ಹಬ್ಬದ ದಿನದಂದು ದರ್ಶನ್’ಗೆ ಬೆಂಗಳೂರಿನ ಗಿರಿನಗರದ ‘ಕರುನಾಡ ಕಲಾದೀಪ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ’ದ ವತಿಯಿಂದ ದರ್ಶನ್’ಗೆ ‘ಕಲಾ ಸಾರ್ವಭೌಮ’ ಎಂಬ ಬಿರುದು ನೀಡಿ ಸನ್ಮಾನಿಸಲು ಸಂಘ ನಿರ್ಧರಿಸಿದೆಯಂತೆ. ಈ ಹಿಂದೆ ಡಾ. ರಾಜಕುಮಾರ್ ಅವರು ನಟಸಾರ್ವಭೌಮ ಎಂಬ ಬಿರುದಿನಿಂದ ಕರೆಸಿಕೊಳ್ಳುತ್ತಿದ್ದರು. ಈಗ ದರ್ಶನ್’ಗೆ ಕಲಾ ಸಾರ್ವಭೌಮ ಎಂಬ ಬಿರುದು ನೀಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top