fbpx
ಬಿಗ್ ಬಾಸ್

ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಡಬ್’ಸ್ಮ್ಯಾಶ್ ರಾಣಿ ನಿವೇದಿತಾ ಗೌಡ!

ಐಟಂ ಸಾಂಗ್’ಗೆ ಹೆಜ್ಜೆ ಹಾಕಿದ ಡಬ್’ಸ್ಮ್ಯಾಶ್ ರಾಣಿ ನಿವೇದಿತಾ ಗೌಡ!

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ಪ್ರಚಾರಗಳೇ ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ನಾಲ್ಕನೇ ಸ್ಥಾನ ಪಡೆದುಕೊಂಡಿಂದ ಮೈಸೂರಿನ ಕಂಗ್ಲಿಷ್ ಸ್ಟಾರ್ ನಿವೇದಿತಾ ಅವರ ಹಳೇ ಡಬ್ ಸ್ಮ್ಯಾಷ್ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ಕತ್ತಾಗಿ ಸದ್ದು ಮಾಡ್ತಿವೆ…

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಹಾಗೆಯೇ ಇತ್ತೀಚಿಗಷ್ಟೇ ಮುಗಿದ ಸೀಸನ್ 5 ಬಿಗ್ ಬಾಸ್ ನಲ್ಲಿ ಮೇಲ್ನೋಟಕ್ಕೆ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ಚಿತ್ರ ವಿಚಿತ್ರಗಳಿಗೇನೂ ಕೊರತೆಯಿಲ್ಲ.. ಅಂಥಹ ವಿಚಿತ್ರ ಕರೆಕ್ಟರ್ ಗಳಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಿದ್ದರು.

 

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದಿದ್ದರೂ ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ “ಈ ಹುಡುಗಿ ಭಾಷೆಯಲ್ಲಿ ಮಾತ್ರ ಇಂಗ್ಲಿಶ್ ಕ್ರಾಸ್ ಬ್ರೀಡಿನಂತೆ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಸಂಶಯ ಕಾಡುವಂತೆ ವಿಚಿತ್ರವಾಗಿ ನುಲಿಯುತ್ತಾ ಮಾತಾಡೋ ಈಕೆ ಸೀಸನ್ 5 ಬಿಗ್‌ಬಾಸ್ ಶೋದ ಪ್ರಮುಖ ಆಕರ್ಶಣೆಯಾಗಿದ್ದಳು. ಆರಂಭದ ವಾರದಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಹೆಣ್ಮಗುವೊಂದು ಮಿಠಾಯಿ ಅಂಗಡಿಗೆ ಬಂದಂತೆ ನಡೆದುಕೊಂಡಿದ್ದ ನಿವೇದಿತಾ ಗೌಡ ಚಾನೆಲ್’ನವರ ಕೃಪಾಕಟಾಕ್ಷದಿಂದ ಫೈನಲ್ ವರೆಗೂ ತಲುಪಿದ್ದರು.

 

 

ತಾನೇ ಹೇಳಿಕೊಂಡಿರುವ ಹಾಗೆ ಅತ್ಯಂತ ಪ್ರಚಾರ ಪ್ರಿಯಳಾದ ಈಕೆ ಬಿಗ್ ಬಾಸ್’ಗೆ ಹೋಗುವ ಮುನ್ನ ತನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹರಿದುಬಿಟ್ಟಿರುವ ಆಕೆಯ ಡಬ್ ಸ್ಮಾಷ್’ಗಳು, ತುಂಡುಡುಗೆಯ ಡ್ಯಾನ್ಸ್ ವಿಡಿಯೊಗಳು ಈಗ ವೈರಲ್ ಆಗುತ್ತಿದ್ದು. ಆ ವಿಡಿಯೋಗಳಲ್ಲಿ ಮುಖ್ಯವಾಗಿ ಕತ್ರಿನಾ ಕೈಫ್ ಕುಣಿದಿದ್ದ ಚಿಕ್ನಿ ಚಮೇಲೆ ಎಂಬ ಹಿಂದಿ ಐಟಂ ಹಾಡಿಗೆ ನಿವೇದಿತಾ ಸಕ್ಕತ್ತಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯವನ್ನು ಆವರಿಸಿಕೊಂಡಿದ್ದು ನೋಡುಗರ ಕಣ್ಣು ಕುಕ್ಕುತ್ತಿದೆ.

ನಿವೇದಿತಾಳ ಚಿಕ್ನಿ ಚಾಮೇಲೆ ಐಟಂ ಹಾಡಿನ ಕುಣಿತವನ್ನು ನೀವೂ ಒಮ್ಮೆ ಕಣ್ತುಂಬ ನೋಡಿ ನಕ್ಕು ಬಿಡಿ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top