fbpx
ಸಿನಿಮಾ

ರಾಜಣ್ಣ ಅವರಿಗೆ ಡಾಕ್ಟರೇಟ್ ಸಿಕ್ಕು ಇಂದಿಗೆ 42 ವರ್ಷ.. ಆ ದಿನ ಹೇಗಿತ್ತು ನೀವೇ ಓದಿ

ರಾಜಣ್ಣ ಅವರಿಗೆ ಡಾಕ್ಟರೇಟ್ ಸಿಕ್ಕು ಇಂದಿಗೆ 42 ವರ್ಷ.. ಆ ದಿನ ಹೇಗಿತ್ತು ನೀವೇ ಓದಿ

 

ಕನ್ನಡ ಚಿತ್ರರಂಗದಲ್ಲಿ 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಇತಿಹಾಸ ಸೃಷ್ಟಿಸಿದ ವರನಟ ಅಣ್ಣಾವ್ರಿಗೆ 42 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌಡವಿಸಿತು. ದೇಶದಲ್ಲಿ ನಟರಾಗಿ ಪ್ರಥಮವಾಗಿ ಗೌರವ ಡಾಕ್ಟರೇಟ್ ಪದವಿ ಪಡೆದ ಮೊದಲಿಗಳು ನಮ್ಮ ಹೆಮ್ಮೆಯ ಡಾ ರಾಜಕುಮಾರ ಅವರು.

 

 

ಅಣ್ಣಾವ್ರಿಗೆ ಸಿಕ್ಕ ಈ ಅಭೂತಪೂರ್ವ ಗೌರವದ ಆ ಕ್ಷಣಗಳು ಹೇಗಿದ್ದವು ಸ್ವಲ್ಪ ಮೆಲುಕು ಹಾಕೋಣ. ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ಸಂಧರ್ಬದ ಅಪರೂಪದ ಭಾವಚಿತ್ರಗಳು ಇಲ್ಲಿವೆ. ಮೈಸೂರ ವಿಶ್ವವಿದ್ಯಾಲಯವು ಫೆ. 8 1976 ರಲ್ಲಿ ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟಿತು.

 

ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುವಾಗ ಅಪಾರ ಅಭಿಮಾನಿಗಳೇ ಹಾಜರಿದ್ದರು ಅವರ ಸಮ್ಮುಖದಲ್ಲಿ ಅಣ್ಣಾವ್ರು ಗೌರವ ಡಾಕ್ಟರೇಟ್ ಪದವಿ ಸ್ವೀಕಾರ ಮಾಡಿದರು. ಈ ಸಂಧರ್ಭದಲ್ಲಿ ಪತ್ನಿ ಪಾರ್ವತಮ್ಮ ರಾಜ್ ಕುಕುಮಾರ್ ಅವರು ಭಾಗವಹಿಸಿದ್ದರು.

 

 

ನಟರಾಗಿ ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಡಾ.ರಾಜ್ ಕುಮಾರ. ನಟನೊಬ್ಬನಿಗೆ ಗೌರವ ಡಾಕ್ಟರೇಟ್​ ಸಿಕ್ಕಿದ್ದು ಅದೇ ಪ್ರಥಮ..! – ಅಭಿನಯಿಸಿದ ಮೊದಲ ಚಿತ್ರಕ್ಕೆ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ ಡಾ.ರಾಜ್. – ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸದ ಪ್ರಥಮ ಕೀರ್ತಿ ಡಾ.ರಾಜ್ ಕುಮಾರ ಅವರಿಗೆ ಸಲ್ಲುತ್ತದೆ. ಡಾ ರಾಜಕುಮಾರ ಅವರು ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top