fbpx
ಸಮಾಚಾರ

ಮೋದಿ ಉದಾಹರಣೆ ಕೊಟ್ಟು ಫೇಕ್ ಅಕೌಂಟ್ ವಿವಾದದ ಬಗ್ಗೆ ಸವಿಸ್ತಾರವಾಗಿ ಕ್ಲಾರಿಟಿ ಕೊಟ್ಟ ರಮ್ಯಾ!

ಮೋದಿ ಉದಾಹರಣೆ ಕೊಟ್ಟು ಫೇಕ್ ಅಕೌಂಟ್ ವಿವಾದದ ಬಗ್ಗೆ ಸವಿಸ್ತಾರವಾಗಿ ಕ್ಲಾರಿಟಿ ಕೊಟ್ಟ ರಮ್ಯಾ!

 

 

ಕಳೆದ ಎರಡ್ಮೂರು ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಂಸದೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅವರ ಫೇಕ್ ಸೋಷಿಯಲ್ ಮೀಡಿಯಾ ಅಕೌಂಟ್ ವಿಚಾರವಾಗಿ ಸ್ವತಃ ಅವರೇ ಕ್ಲಿಯರ್ ಪಿಚ್ಚರ್ ನೀಡಿದ್ದಾರೆ. ವೈರಲ್ ಆಗಿದ್ದ ವಿಡಿಯೋವನ್ನು ತಮ್ಮ ಅನುಕೂಲಕ್ಕಾಗಿ ಹೇಗೆ ಬೇಕೋ ಹಾಗಿ ಎಡಿಟ್ ಮಾಡಿಕೊಳ್ಳಲಾಗಿದೆ ಎಂದು ಹೇಳಿ ಸುಮ್ಮನಾಗಿದ್ದ ರಮ್ಯಾ ತಮ್ಮ ವಿರುದ್ಧ ಫೇಕ್ ಅಕೌಂಟ್ ವಿಚಾರವಾಗಿ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಲು ಪ್ರಧಾನಿ ಮೋದಿಯನ್ನು ಎಳೆದುತಂದಿದ್ದಾರೆ.

 

ಈ ಬಗ್ಗೆ ತಮ್ಮ ಫೇಸ್ಬುಕ್ ವಾಲ್ ಮೇಲೆ ಸವಿಸ್ತಾರವಾಗಿ ಈ ಕೆಳಗಿನಂತೆ ರಮ್ಯಾ ಬರೆದುಕೊಂಡಿದ್ದಾರೆ.

“ಫೆಬ್ರವರಿ-2018ರಂದು ನಡೆದಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಸಂವಾದದಲ್ಲಿದ್ದ ಸಂದರ್ಭದಲ್ಲಿ ಅಲ್ಲಿದ್ದ ಒಬ್ಬರು ಫೇಕ್ ಅಕೌಂಟ್ಸ್ ಗಳ ಬಗ್ಗೆ ಪ್ರಶ್ನಿಸಿದರು . ಆಗ ನಾನು ಹೇಳಿದ್ದಿಷ್ಟು .

ನೀವು ನಿಮ್ಮ ನಿಜವಾದ ಗುರುತನ್ನು ತೋರಿಸಿಕೊಳ್ಳದೆ ಬೇರೆಯವರ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿದರೆ ಅದು ಫೇಕ್ ಅಕೌಂಟ್ .
ಇನ್ನೊಂದು ತರದ ಫೇಕ್ ಅಕೌಂಟ್ ಅಂದ್ರೆ ತಾವಾಗೇ ಕಾರ್ಯ ನಿರ್ವಹಿಸುವ Bot ಗಳು ಅಥವಾ ಮಷೀನ್ ಗಳು .

ಮತ್ತೆ ನೀವು ನಿಮ್ಮ ವಯುಕ್ತಿಕ ಅಕೌಂಟ್ ನೊಂದಿಗೆ ಇನ್ನೊಂದು ಅಕೌಂಟ್ ಅಫೀಷಿಯಲ್ ಕೆಲಸಕ್ಕಾಗಿ ಹೊಂದಿದ್ದರೆ ಅದು ಪರವಾಗಿಲ್ಲ .ನಾನು ಕೂಡ ಫೇಸ್ಬುಕ್ ನಲ್ಲಿ ನನ್ನ ವಯುಕ್ತಿಕ ಖಾತೆ ದಿವ್ಯ ಸ್ಪಂದನ
ಹಾಗು ಪೇಜ್ ದಿವ್ಯ ಸ್ಪಂದನ /ರಮ್ಯಾ ಹೊಂದಿದ್ದೇನೆ.

ಈ ಸಂವಾದದ ವಿಡಿಯೋವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ತಿರುಚಿರುವ ಬಿಜೆಪಿಯವರು ಇಂತಹ ಕೆಲಸ ಮಾಡ್ತಾ ಇರೋದು ಹೊಸದೇನಲ್ಲ . ಅದಕ್ಕೆ ಹೆದರುವ ಪ್ರಶ್ನೆಯು ಇಲ್ಲ 🙂 ನೀವು ಯಾವುದೇ ಪೇಜ್’ಗೆ ಅಡ್ಮಿನ್ ಆಗಿದ್ದರೆ ಇದು ಅರ್ಥವಾಗದ ವಿಷಯವು ಅಲ್ಲ . ನಾನ್ಯಾರಿಗೂ ಫೇಕ್ ಅಕೌಂಟ್ create ಮಾಡಿ ಅಂತ ಹೇಳಿಲ್ಲ . ಇಲ್ಲಿ ಸ್ಪಷ್ಟ ಪಡಿಸ್ತಾಇರೋದೂ ನನ್ನ
ಪ್ರತಿ ಹೆಜ್ಜೆಯಲ್ಲೂ ಜೊತೆ ಇರುವ ಅಭಿಮಾನಿಗಳಿಗಾಗಿ ಹಾಗು ನನ್ನ ಎಲ್ಲ ಬೆಂಬಲಿಗರಿಗಾಗಿ .

ಆದ್ರೆ ನಾವೆಲ್ಲಾ ಮುಖ್ಯವಾಗಿ ಅರ್ಥ ಮಾಡ್ಕೋಬೇಕಾಗಿರೋದು ಯಾಕೆ ಈ ತರದ ಕ್ಷುಲ್ಲಕ ವಿಷಯವನ್ನು
ಜನರ ಮುಂದೆ ದೊಡ್ಡದಾಗಿ ಮಾಡ್ತಾರೆ ಅಂದ್ರೆ ನಿಜವಾದ ಸಮಸ್ಯೆಗಳನ್ನು ಮುಚ್ಚಿ ಹಾಕೋಕೆ . ದಿನ ಬೆಳಗಾದ್ರೆ ಟ್ವಿಟ್ಟರ್ ಫೇಸ್ಬುಕ್ ವಾಟ್ಸ್ ನೋಡೋ ಪ್ರತಿಯೊಬ್ಬರಿಗೂ ಯಾವುದು ಸುಳ್ಳು ಯಾವುದು ನಿಜ ಅಂತ ಗೊತ್ತಾಗೋಕೆ ಸ್ವಲ್ಪ ಟೈಮ್ ಬೇಕಾಗಬಹುದು .ಆದ್ರೆ ಸತ್ಯ ಯಾವತ್ತಿದ್ರೂ ಮೇಲೆ ಬರುತ್ತೆ .”

 

 

ಇಷ್ಟು ಬರೆದುಕೊಂಡು ಸುಮ್ಮನಾಗದ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ನಲ್ಲಿ ಹೊಂದಿರುವ ಎರಡು ಖಾತೆಗಳ ಸ್ಕ್ರೀನ್ ಶಾಟ್ ಮತ್ತು ತಮ್ಮ ಎರಡು ಅಕೌಂಟ್’ಗಳ ಸ್ಕ್ರೀನ್ ಶಾಟ್ ತೆಗೆದುಕೊಂಡು ಪೋಸ್ಟ್ ಮಾಡಿದ್ದಾರೆ. “ಮೋದಿ ಕೂಡ ಟ್ವಿಟರ್ ನಲ್ಲಿ ಎರಡು ವೆರಿಫೈಯ್ಡ್ ಅಕೌಂಟ್ ಗಳನ್ನು ಹೊಂದಿದ್ದಾರೆ ಹಾಗಂತ ಅವನ್ನು ಫೇಕ್ ಅನ್ನೋಕಾಗುತ್ತಾ, ಇವು ಮೋದಿಯ ಅಫೀಷಿಯಲ್ ಹಾಗು verified ಪೇಜ್ ಮತ್ತು ವಯುಕ್ತಿಕ ಖಾತೆಯಾಗಿವೆ.” ಎಂದು ಮೋದಿಯವರ ಎರಡು ಟ್ವಿಟರ್ ಖಾತೆಯ ಉದಾಹರಣೆ ಕೊಡುವ ಮೂಲಕ ತಮ್ಮ ವಿರೋಧಿಗಳಿಗೆ ಬಾಯಿ ಮುಚ್ಚಿಸುವ ಪ್ರಯತ್ನವನ್ನು ರಮ್ಯಾ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top