fbpx
ಸಮಾಚಾರ

ಜಗ್ಗೇಶ್ ಪಲ್ಲಂಗದ ಟ್ವೀಟ್’ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ ಹೇಳಿದ್ದು ಹೀಗೆ!

ಜಗ್ಗೇಶ್ ಪಲ್ಲಂಗದ ಟ್ವೀಟ್’ಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದು ಹೀಗೆ!

 

 

ಕಳೆದ ಎರಡ್ಮೂರು ದಿನಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಸಂಸದೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅವರ ಫೇಕ್ ಸೋಷಿಯಲ್ ಮೀಡಿಯಾ ಅಕೌಂಟ್ ಮತ್ತು ಜಗ್ಗೇಶ್ ಪಲ್ಲಂಗದ ಟ್ವೀಟ್ ವಿಚಾರವಾಗಿ ಸ್ವತಃ ರಮ್ಯಾಅವರೇ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ..ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಗಳ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅವರು ತಮ್ಮ ವಿರುದ್ಧದ ಟೀಕೆ ಬಗ್ಗೆ ಸ್ಪಷ್ಟನೆ ನೀಡಿದರು.

 

 

“POT ಪದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಹೇಳಿದ್ದ TOP(ಟೊಮೊಟೊ, ಆಲೂಗೆಡ್ಡೆ,ಪೊಟ್ಯಾಟೋ) ಹೇಳಿಕೆಯನ್ನೇ ನಾನು ಉಲ್ಟಾ ಮಾಡಿ POT ಅಂತ ಹೇಳಿದ್ದೇನೆ. ಈ ಹೇಳಿಕೆಗೆ ಬೇರೆ ಯಾವುದೇ ಅರ್ಥವನ್ನು ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ” ಎಂದು ರಮ್ಯಾ ಹೇಳಿದರು.

ಇದೇ ವೇಳೆ ವೈರಲ್ ಆಗಿದ್ದ ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ಮಾತನಾಡಿದ ರಮ್ಯಾ “ಪಕ್ಷಕ್ಕೆ ಒಂದು, ವೈಯಕ್ತಿಕ ವಿಚಾರಕ್ಕೆ ಒಂದು ಅಕೌಂಟ್ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಂತ ಎಲ್ಲೂ ಹೇಳಿಲ್ಲ. ಮೋದಿ ಹೆಸರಲ್ಲಿ ಮೂರು ಟ್ವಿಟರ್‌ ಅಕೌಂಟ್ ಇದೆ ಹಾಗಂತ ಅವನ್ನು ಫೇಕ್ ಅಕೌಂಟ್ ಗಳು ಅಂತ ಹೇಳೋದಕ್ಕಾಗುತ್ತಾ? ಇನ್ನು ಆ ವಿಡಿಯೋವನ್ನು ತಮ್ಮ ಅನುಕೂಲಕ್ಕಾಗಿ ಹೇಗೆ ಬೇಕೋ ಹಾಗಿ ಎಡಿಟ್ ಮಾಡಿಕೊಳ್ಳಲಾಗಿದೆ,” ಎಂದು ಹೇಳಿದ್ದಾರೆ.

ನಂತರ ಜಗ್ಗೇಶ್ ಅವರ ಪಲ್ಲಂಗದ ಟ್ವೀಟ್ ಕುರಿತಾಗಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮ್ಯಾ “ಅವರು ದೊಡ್ಡವರು ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ” ಎಂದು ಹೇಳಿ ಮುಂದೆ ನಡೆದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top