fbpx
ಮನೋರಂಜನೆ

ಕುತೂಹಲದ ರಂಗ್ ಬಿರಂಗಿ!

ಕಾಲೇಜು ಕಾರಿಡಾರಿನ ನವಿರು ಭಾವಗಳನ್ನು ದೃಷ್ಯವಾಗಿಸಿದ ಚಿತ್ರಗಳಲ್ಲಿ ಬಹುತೇಕವು ಗೆದ್ದ ಉದಾಹರಣೆಗಳಿವೆ. ಅಂಥಾದ್ದೇ ಒಂದು ಕಾಲೇಜು ಸ್ಟೋರಿಯನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಡುವ ಭರವಸೆಯೊಂದಿಗೆ ತೆರೆ ಕಾಣಲು ಸಜ್ಜಾಗಿರುವ ಚಿತ್ರ ರಂಗ್ ಬಿರಂಗಿ. ಕಾಲೇಜು ಕಥೆ ಮಾಮಾಲು ಅನ್ನಿಸಿದರೂ ವಿಶಿಷ್ಟವಾಗಿ ವಿಶಿಷ್ಟವಾಗಿ ಬೇರೇನನ್ನೋ ಹೇಳಿರುವ ಭರವಸೆ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಅವರದ್ದು.

 

 

ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಿಂದೆ ಮದರಂಗಿ ಅಂತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದವರು. ಆ ನಂತರ ಅದೇಕೋ ಒಂದು ವಿರಾಮ ತೆಗೆದುಕೊಂಡಂತಿದ್ದ ಮಲ್ಲಿಕಾರ್ಜುನ್ ಇದೀಗ ಒಂದು ಎನರ್ಜಿಟಿಕ್ ಕಥಾ ಹಂದರದ ರಂಗ್ ಬಿರಂಗಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಎದುರುಗೊಂಡಿದ್ದಾರೆ.

ನಿರ್ದೇಶಕರು ಹೊಸಾ ಮುಖಗಳನ್ನೇ ಇಟ್ಟುಕೊಂಡು ರಂಗ್ ಬಿರಂಗಿ ಚಿತ್ರವನ್ನು ಅಣಿಗೊಳಿಸಿದ್ದಾರೆ. ಮೂವರು ಯುವಕರು ನಾಯಕರಾಗಿರೋ ಈ ಚಿತ್ರದಲ್ಲಿ ತನ್ವಿ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ತಂಡ ಈಗಾಗಲೇ ಬಗೆ ಬಗೆಯ ಭಿನ್ನವಾದ ನಡೆಗಳಿಂದಲೇ ಪ್ರೇಕ್ಷಕರ ಮನ ಗೆದ್ದಿದೆ. ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಹಾಡುಗಳಂತೂ ಈಗ ಎಲ್ಲೆಡೆ ಟ್ರೆಂಡ್ ಕ್ರಿಯೇಟ್ ಮಾಡಿವೆ. ಯೋಗರಾಜ ಭಟ್ ಬರೆದಿರೋ ಹಾಡಿಗೆ ಯುವ ಸಮುದಾಯ ಫಿದಾ ಆಗಿದೆ. ಅರ್ಜುನ್ ಜನ್ಯಾ ಕೂಡಾ ಈ ಚಿತ್ರದ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

 

 

ರಂಗ್ ಬಿರಂಗಿ ಚಿತ್ರದ ಅಡಿ ಬರಹವೇ ಹೇಳುವಂತೆ ಇದು ಟೀನೇಜ್ ಎಂಬ ಹುಚ್ಚು ಕುದುರೆಯ ಬೆನ್ನೇರಿದ ಮನಸುಗಳ ಸುತ್ತಲಿನ ಚೆಂದದ ಕಥೆಯನ್ನು ಒಳಗೊಂಡಿದೆಯಂತೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಲೇ ಬಹುನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top