fbpx
ಮನೋರಂಜನೆ

ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.

ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.

 

 

ಕನ್ನಡ ಚಿತ್ರರಂಗದ ಪಾಲಿನ ಶೋಮ್ಯಾನ್ ಎಂದೇ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ಈವರೆಗೆ ಮಾಡಿರೋ ಪಾತ್ರಗಳೆಲ್ಲಾ ವಿಭಿನ್ನವಾದವುಗಳೇ. ಮೊದಲು ಕೈಯಲ್ಲಿ ಗುಲಾಬಿ ಹಿಡಿದು ಮರ ಸುತ್ತುವ ಪ್ರೇಮಕತೆಯುಳ್ಳ ಚಿತ್ರಗಳನ್ನು ಮಾಡುತ್ತಿದ್ದ ರವಿಚಂದ್ರನ್ ನಂತರ ದೊಡ್ಡ ಆಕ್ಷನ್ ಚಿತ್ರಗಳನ್ನ ಕೂಡ ಮಾಡಿದ್ದರು., ಕೊನೆಗೆ ಸುದೀಪ್ ನಿರ್ದೇಶನದ ಮಾಣಿಕ್ಯ ಚಿತ್ರದ ಮೂಲಕ ಪೋಷಕ ಮಾತ್ರಗಳನ್ನ ಮಾಡಲು ರವಿಚಂದ್ರನ್ ಪ್ರಾರಂಭಿಸಿದ್ದರು. ಹಿರೋ ಆಗುವುದಕ್ಕೂ ಮುಂಚೆ ಅಂದರೆ ಚಕ್ರವ್ಯೂಹ, ಖದೀಮ ಕಳ್ಳರು ಸೇರಿದಂತೆ ಕೆಲವು ಚಿತ್ರಗಳಲ್ಲಿ ರವಿಚಂದ್ರನ್ ಖಳನಟನಾಗಿ ಕಾಣಿಸಿಕೊಂಡಿದ್ದರು ಆದರೆ ಈಗ ರಿಲೀಸ್’ಗೆ ರೆಡಿಯಾಗಿರುವ ಒಂದು ಚಿತ್ರದಲ್ಲಿ ರವಿ ಸರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರಂತೆ.

 

 

6-5=2 ಮತ್ತು ಕರ್ವ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದ ನಿರ್ದೇಶಕ ನವನೀತ್ ನಿರ್ದೇಶನದ ‘ಬಕಾಸುರ’ ರೆಡಿಯಾಗಿದೆ. ಚಿತ್ರದಲ್ಲಿ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಂಬುದನ್ನೂ ಮೀರಿ ಇಲ್ಲಿ ರವಿಚಂದ್ರನ್ ಬಹು ದೊಡ್ಡ ಬ್ಯುಸಿನೆಸ್ ಮನ್ ಆಗಿ ನಟಿಸಿದ್ದಾರೆ ಎನ್ನುವ ಸುದ್ದಿ ಸ್ವತಃ ಚಿತ್ರತಂಡದಿಂದ ಹೊರಬಿದ್ದಿತ್ತು. ಆದರೆ ರವಿಚಂದ್ರನ್ ಈ ಚಿತ್ರದಲ್ಲಿ ಬ್ಯುಸಿನೆಸ್ ಮನ್ ಮಾತ್ರ ಅಲ್ಲ ಚಿತ್ರದಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡುತ್ತಿದ್ದಾರೆ ಎನ್ನುವುದು ಅಸಲೀ ವಿಚಾರ.

 

 

ಈವರೆಗೆ ಕನಸುಗಾರ ಕೈಗೆತ್ತಿಕೊಂಡಿರೋದೆಲ್ಲವೂ ಸವಾಲಿನ ಪಾತ್ರಗಳೇ. ಲವರ್ ಬಾಯ್ ಆಗಿ ಕಾಣಿಸಿಕೊಂಡಾಗಲೂ, ತಂದೆಯ ಪಾತ್ರ ಮಾಡಿದಾಗಲೂ ಅದರಲ್ಲೇನೋ ವಿಭಿನ್ನತೆ ಇದ್ದೇ ಇತ್ತು. ಅಂತೆಯೇ ಬಕಾಸುರ ಚಿತ್ರದಲ್ಲಿ ಕೂಡಾ ರವಿ ಚಂದ್ರನ್ ವಿಲನ್ ಲುಕ್ ನೋಡುಗರಿಗೆ ರುಚಿಸಿದರೆ ಸಾಕು..ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೀರೋ ಆಗಿ ಮೆರೆದ ಎಷ್ಟೋ ಜನ ವಯಸ್ಸಾಗುತ್ತಿದ್ದಂತೇ ವಿಲನ್ ಪಾತ್ರಗಳನ್ನು ಒಪ್ಪಿಕೊಂಡು ಅದರಲ್ಲೂ ಮಿಂಚಿದ ಉದಾಹರಣೆಗಳಿವೆ. ರವಿಚಂದ್ರನ್ ಕೂಡಾ ಈಗಾಗಲೇ ತಂದೆಯಾಗಿ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಕಾಸುರ ಬಿಡುಗಡೆಯಾದ ನಂತರ ರವಿ ವಿಲನ್ ಪಾತ್ರದಲ್ಲಿ ಬ್ಯುಸಿಯಾದರೂ ಅಚ್ಚರಿಯಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top