fbpx
ಹೆಚ್ಚಿನ

ವಿಜಯಪುರ ಜಿಲ್ಲೆಯಲ್ಲಿ ಹಿಂದೂ ಯುವಕನ ತಲೆ ಕೆಡೆಸಿ ಮುಸ್ಲಿಂ ಧರ್ಮಕ್ಕೆ ಮತಾಂತರ – ಯುವಕನ ತಂದೆ ಆರೋಪ

ವಿಜಯಪುರ ಜಿಲ್ಲೆಯಲ್ಲಿ ಹಿಂದೂ ಯುವಕನ ತಲೆ ಕೆಡೆಸಿ ಮುಸ್ಲಿಂ ಧರ್ಮಕ್ಕೆ ಮತಾಂತರ – ಯುವಕನ ತಂದೆ ಆರೋಪ

 

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಯುವಕನೊಬ್ಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಘಟನೆ ಬೆಳಕಿಗೆ ಬಂದಿದೆ. ಯುವಕನ ತಂದೆಯಾಗಿರುವ ಲಕ್ಕಪ್ಪ ಶಿಂದೆ ಹೇಳುವ ಪ್ರಕಾರ ಲಕ್ಷ್ಮಿಕಾಂತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಯುವಕ ಲಕ್ಷ್ಮಿಕಾಂತ ಮೊದಲಿನಿಂದಲೂ ಮುಸ್ಲಿಂ ಹುಡುಗರೊಂದಿಗೆ ಆತ ಓಡಾಡುತ್ತಿದ್ದ. ಒಂದು ವಾರದಿಂದ ಆತ ಮನೆಗೆ ಬಂದಿಲ್ಲ. ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿ ವಶೀಕರಣ ಮಾಡಿಕೊಂಡಿದ್ದಾರೆ ಎಂದು ಆತನ ತಂದೆ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಯುವಕನಿಗೆ ಧರ್ಮದ ಬಗ್ಗೆ ತಲೆ ಕೆಡಿಸಿ ಧರ್ಮಕ್ಕೆ ಮತಾಂತರ ಮಾಡಿವುದಾಗಿ ಯುವಕನ ತಂದೆ ಆರೋಪ ಮಾಡಿದ್ದಾರೆ.

 

 

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಮೌಲ್ವಿ ಯಾಗಿರುವ ಸಾಜೀರ್ ಮುಲ್ಲಾ ಅವರ ಕೈವಾಡವೂ ಯುವಕನ ಮತಾಂತರದ ಹಿಂದೆ ಇದೆ ಎಂದು ಯುವಕನ ತಂದೆ ಆರೋಪ ಮಾಡಿದ್ದಾರೆ. ತಮ್ಮ ಕುಟುಂಬದ ಮೇಲೆ ಜೀವ ಬೆದರಿಗೆ ಇದೆ ನಮಗೆ ರಕ್ಷಣೆ ಕೊಡಿ ಎಂದು ಯುವಕನ ತಂದೆ ಹಾಗು ಕುಟುಂಬಸ್ಥರು ಸೇರಿ ಜಿಲ್ಲಾ ಪೊಲೀಸ್ ಎಸ. ಪಿ ಅವರಿಗೆ ದೂರನ್ನು ಸಲ್ಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top