fbpx
ಸಿನಿಮಾ

ನಿನಾಸಂ ಸತೀಶ್ ಪ್ರತಿದಿನ 2 ಘಂಟೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವುದು ಈ ಕಾರಣಕ್ಕೆ

ನಿನಾಸಂ ಸತೀಶ್ ಪ್ರತಿದಿನ 2 ಘಂಟೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವುದು ಈ ಕಾರಣಕ್ಕೆ

 

ಜಿಮ್ ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಬೆವರು ಇಳಿಸುತ್ತಿದ್ದರೆ ನಿನಾಸಂ ಸತೀಶ್. ಕಳೆದೆರಡು ತಿಂಗಳಿಂದ ಸತೀಶ್‌ ಪ್ರತಿ ನಿತ್ಯ ಬೆಂಗಳೂರಿನ ಆರ್‌.ಆರ್‌. ನಗರದ ಗೋಲ್ಡ್‌ ಜಿಮ್‌ನಲ್ಲಿ ಎರಡು ಗಂಟೆಗಳ ಕಾಲ ಕಸರತ್ತು ಮಾಡುತ್ತಾರೆ. ಅವರ ಅಭಿಮಾನಿಗಳು ಇಷ್ಟ್ಯಾಕೆ ಇವರು ವರ್ಕೌಟ್ ಮಾಡುತ್ತಿದ್ದಾರೆ ಎಂದು ತಲೆ ಕೆಡಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಏನು ಗೊತ್ತ ಮುಂದೆ ಓದಿ.

 

 

ಮಹೇಶ್‌ ನಿರ್ದೇಶನ ಮಾಡಿರುವ ‘ಅಯೋಗ್ಯ’ ಚಿತ್ರದ ಪಾತ್ರಕ್ಕಾಗಿ ಸತೀಶ್‌ ಹೀಗೆ ದೇಹವನ್ನು ಜಿಮ್‌ನಲ್ಲಿ ದಂಡಿಸಿ ಕಸರತ್ತು ಮಾಡುತ್ತಿದ್ದಾರೆ. ಟೈಗರ್‌ ಗಲ್ಲಿ ಚಿತ್ರದ ನಂತರ ಈಗ ಅಯೋಗ್ಯ ಚಿತ್ರದಲ್ಲಿ ಖಡಕ್ ಆಗಿ ನಿನಾಸಂ ಸತೀಶ್ ಮಿಂಚಲಿದ್ದಾರೆ ಎಂದು ತಿಳಿದು ಬಂದಿದೆ. ಆ್ಯಕ್ಷನ್‌, ಹಾಸ್ಯ, ಪ್ರೇಮ, ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ.

 

 

ನಟ ನಿನಾಸಂ ಸತೀಶ್ ಮತ್ತು ರಚಿತಾ ರಾಮ್ ನಟಿಸಿರುವ ‘ಅಯೋಗ್ಯ’ ಚಿತ್ರದಲ್ಲಿ ಮಂಡ್ಯದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಾತ್ರದಲ್ಲಿ ಆರ್ಮುಗಂ ರವಿಶಂಕರ್ ಎಂಟ್ರಿ ಕೊಟ್ಟಿದ್ದಾರೆ. ಅಯೋಗ್ಯ ಚಿತ್ರದಲ್ಲಿ ರವಿಶಂಕರ್ ರಾಜಕಾರಣಿ ಪಾತ್ರದಲ್ಲಿ ಮಿಚಲಿದ್ದಾರೆ. ನಟ ನಿನಾಸಂ ಸತೀಶ್ ಗ್ರಾಮ ಪಂಚಾಯತಿಯ ಸದಸ್ಯನಾಗಿ ನಾಯಕನ ಪಾತ್ರದಲ್ಲಿ ತೆರೆಮೇಲೆ ಮಿಂಚಲಿದ್ದಾರೆ.

 

 

ಅಯೋಗ್ಯ ನಾಯಕ ಶೌಚಾಲಯ ಕಟ್ಟುವ ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದನ್ನು ಕೆಡವುವ ಕೆಲಸವನ್ನು ರವಿಶಂಕರ್ ಪಾತ್ರ ಮಾಡಲಿದೆ. ಚಿತ್ರವನ್ನು ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. . ಚಿತ್ರದ ಬಹುತೇಹ ಚಿತ್ರೀಕರಣ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಅಯೋಗ್ಯ ಚಿತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ, ರಂಗಾಯಣ ರಘು ಅಭಿನಯ ಮಾಡುತ್ತಿದ್ದಾರೆ. ಇನ್ನು ಕೇವಲ ಹತ್ತು ದಿನದಲ್ಲಿ ಸಿನಿಮಾ ಶೂಟಿಂಗ್ ಸಂಪೂರ್ಣ ಮುಗಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top