fbpx
ದೇವರು

ಈ ನಾಲ್ಕು ಕೆಟ್ಟ ಅಭ್ಯಾಸಗಳನ್ನು ಇಟ್ಟುಕೊಂಡಿದ್ರೆ ಶನಿ ದೇವರ ವಕ್ರ ದೃಷ್ಟಿಗೆ ಬೀಳುತ್ತಾರೆ ಎನ್ನುತ್ತವೆ ಶಾಸ್ತ್ರಗಳು

ಈ ನಾಲ್ಕು ಕೆಟ್ಟ ಅಭ್ಯಾಸಗಳನ್ನು ಇಟ್ಟುಕೊಂಡಿದ್ರೆ ಶನಿ ದೇವರ ವಕ್ರ ದೃಷ್ಟಿಗೆ ಬೀಳುತ್ತಾರೆ ಎನ್ನುತ್ತವೆ ಶಾಸ್ತ್ರಗಳು

 

ಶನೈಶ್ಚರ ದೇವರ ಬಗ್ಗೆ ಸರಿಯಾಗಿ ತಿಳಿಯದವರು ಆತನಿಗೆ ಬಹಳ ಹೆದರುತ್ತಾರೆ. ಆದರೆ ಒಂದು ವೇಳೆ ಶನೈಶ್ಚರ ದೇವನು ಅನುಗ್ರಹಿಸಿದರೆ , ಜೀವನ ಆನಂದ ಮಯವಾಗಿರುತ್ತದೆ. ಒಬ್ಬ ಮನುಷ್ಯನಿಗೆ ಬೇಕಾದಂತಹ ಸಕಲವನ್ನು ಶನೈಶ್ಚರನು ಕರುಣಿಸಬಲ್ಲನು.

 

 

ಅದೇ ರೀತಿ ಶನೈಶ್ಚರ ದೇವರಿಗೆ ಕೋಪ ಬಂತೆಂದರೆ ಅದನ್ನು ಅವರು ತಡೆದುಕೊಳ್ಳಲಾರರು, ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕಷ್ಟಗಳಲ್ಲಿ ಮುಳುಗಬೇಕಾಗುತ್ತದೆ , ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನು ಮಾಡಿದರೆ ಶನೈಶ್ಚರ ದೇವರು ಕ್ಷಮಿಸುವುದಿಲ್ಲ ? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

 

 

ಮಾನವನ ಜೀವನದಲ್ಲಿ ಎಲ್ಲವೂ ಸರಿ ಇದ್ದರೆ ದೇವರನ್ನು ಆರಾಧಿಸುತ್ತಾರೆ, ಹೊಗಳುತ್ತಾರೆ, ಅದೇ ಪರಿಸ್ಥಿತಿ ಸರಿ ಇಲ್ಲದಿರುವಾಗ ದೇವರನ್ನು ಬಯ್ಯುತ್ತಾರೆ. ಅಂತಹ ಕೆಲಸಗಳನ್ನು ಮಾಡಿದರೆ ಶನೈಶ್ಚರ ದೇವರಿಗೆ ಕೋಪ ಬರುತ್ತದೆ.ಅವನ ಕೆಟ್ಟ ದೃಷ್ಟಿ ಆಗ ನಿಮ್ಮ ಮೇಲೆ ಬೀಳುವುದು.ಆಗ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುವುದು.

 

 

ಶನಿವಾರ ತಪ್ಪದೇ ಶನೈಶ್ಚರ ದೇವರಿಗೆ ದೀಪವನ್ನು ಬೆಳಗಿಸಬೇಕು, ಇಲ್ಲದಿದ್ದರೆ ಆತನ ಕೋಪಗೊಳ್ಳುತ್ತಾನೆ.ಸಾಮಾನ್ಯವಾಗಿ ಎಳ್ಳೆಣ್ಣೆ ದೀಪ ಮತ್ತು ಕಪ್ಪು ಎಳ್ಳಿನಿಂದ ಮಾಡಿದ ಬತ್ತಿಯಿಂದ ದೀಪವನ್ನ ಬೆಳಗುತ್ತಾರೆ.
ಚರ್ಮದ ವಸ್ತುಗಳನ್ನು ಧರಿಸಿ ಪೂಜೆ ಮಾಡಿದರೆ ಶನೈಶ್ಚರ ದೇವರು ಕೋಪಗೊಳ್ಳುತ್ತಾನೆ .ಆದ್ದರಿಂದ ಶನೈಶ್ಚರ ದೇವರನ್ನು ಪೂಜಿಸುವಾಗ ಚರ್ಮದಿಂದ ಮಾಡಿದ ಯಾವುದೇ ವಸ್ತುಗಳನ್ನು ಧರಿಸಬೇಡಿ.
ಕೆಲವರು ಕಲ್ಲುಗಳಿಂದ ಹೊಡೆಯುತ್ತಾರೆ, ಹಾಗೆ ಮಾಡಿದರೆ ಶನೈಶ್ಚರ ದೇವರಿಗೆ ವಿಪರೀತ ಕೋಪ ಬರುತ್ತದೆ.ಯಾಕೆಂದರೆ ಕಾಗೆಯು ಶನೈಶ್ಚರ ದೇವರ ವಾಹನವಾಗಿದೆ, ಆದ್ದರಿಂದ ಅದಕ್ಕೆ ಹಾನಿಯುಂಟು ಮಾಡಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top