fbpx
ದೇವರು

8 ತಿಂಗಳು ನೀರಿನಲ್ಲೇ ಮುಳುಗಿದ್ದು ಕೇವಲ 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ಇತಿಹಾಸದ ಪವಾಡ ಸಿದ್ದ ಶಿವನ ದೇವಾಲಯವಿದು

8 ತಿಂಗಳು ನೀರಿನಲ್ಲೇ ಮುಳುಗಿದ್ದು ಕೇವಲ 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ಇತಿಹಾಸದ ಪವಾಡ ಸಿದ್ದ ಶಿವನ ದೇವಾಲಯವಿದು

 

ಅನೇಕ ಋಷಿಮುನಿಗಳಿಗೆ ಆಶ್ರಯ ನೀಡಿ 8 ತಿಂಗಳು ನೀರಿನಲ್ಲೇ ಇದ್ದು 4 ತಿಂಗಳು ಭಕ್ತರಿಂದ ಪೂಜೆ ಸ್ವೀಕರಿಸುವ ದೇವಾಲಯ ಇರುವುದಾದರೂ ಎಲ್ಲಿ ಮತ್ತು ಅಷ್ಟು ತಿಂಗಳು ಈ ದೇವಾಲಯ ನೀರಿನಲ್ಲಿ ಇರಲು ಕಾರಣವಾದರು ಏನು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ .

 

 

ಈ ದೇವಾಲಯ ಇರುವುದು ಆಂಧ್ರ ಪ್ರದೇಶ ಕರ್ನೂರ್ ಜಿಲ್ಲೆಯ 56 ಕಿಲೋಮೀಟರು ದೂರದಲ್ಲಿ ಸಂಗಮೇಶ್ವರ ಎಂಬ ಗ್ರಾಮದಲ್ಲಿ ಸಂಗಮೇಶ್ವರ ಸ್ವಾಮಿ ದೇವಾಲಯವಿದೇ ,ಈ ದೇವಾಲಯ ಅತಿ ಪುರಾತನವಾದ ದೇವಾಲಯ, ಧರ್ಮರಾಯ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಪುರಾಣಗಳು ಹೇಳುತ್ತದೆ .

 

 

ಸಂಗಮೇಶ್ವರ ದೇವಾಲಯ 7 ನದಿಗಳು ಕೂಡುವ ಪ್ರದೇಶ ಅದಕ್ಕೆ ಈ ಸ್ಥಳಕ್ಕೆ ಸಪ್ತನದಿಗಳ ಸಂಗಮ ಎಂದು ಕರೆಯುತ್ತಾರೆ. ಈ ದೇವಾಲಯದ ಪುರಾಣಕ್ಕೆ ಬಂದರೆ ಪೂರ್ವದಲ್ಲಿ ಇಲ್ಲಿ ದಕ್ಷಯಜ್ಞ ನಡೆದಿತ್ತು ಆ ಸಮಯದಲ್ಲಿ ದಕ್ಷ ಸತಿಯನ್ನು ಅವಮಾನ ಮಾಡಿದರಿಂದ ಅವಳು ಈ ಯಜ್ಞಕುಂಡದಲ್ಲಿ ಬಿದ್ದು ಮರಣ ಹೊಂದಿದಳು ಎಂದು ಸ್ಥಳ ಪುರಾಣ ಹೇಳುತ್ತದೆ .

 

 

 

ಪಾಂಡವರ ವನವಾಸ ಸಮಯದಲ್ಲಿ ಧರ್ಮರಾಯ ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಬೇಕು ಎಂದು ನಿರ್ಧಾರ ಮಾಡುತ್ತಾನೆ ,ಧರ್ಮರಾಯನ ಆದೇಶದಂತೆ ಭೀಮ ಶಿವಲಿಂಗವನ್ನು ತರಲು ಕಾಶಿಗೆ ಹೋಗುತ್ತಾನೆ ,ಆದರೆ ಸರಿಯಾದ ಸಮಯಕ್ಕೆ ಭೀಮ ಬರುವುದಿಲ್ಲ ,ಆ ಸಮಯದಲ್ಲಿ ಋಷಿಮುನಿಗಳ ಆದೇಶದಂತೆ ಒಂದು ಕಲ್ಲನ್ನು ಶಿವಲಿಂಗದಂತೆ ಪ್ರತಿಷ್ಠಾಪಿಸುತ್ತಾನೆ ,ಇದರಿಂದ ಕೋಪಗೊಂಡ ಭೀಮ ತನ್ನ ತಂದ ಶಿವಲಿಂಗವನ್ನು ನೀರಿಗೆ ಎಸೆಯುತ್ತಾನೆ ,ಭೀಮನನ್ನು ಸಮಾಧಾನ ಮಾಡುವುದಕ್ಕೆ ಧರ್ಮರಾಯ ಅವನ್ನು ತಂದ ಶಿವಲಿಂಗವನ್ನು ನದಿತೀರದಲ್ಲೇ ಪ್ರತಿಷ್ಠಾಪಿಸಿ ಅದಕ್ಕೆ ಭೀಮಲಿಂಗ ಎಂದು ಹೆಸರು ಇಡುತ್ತಾನೆ.

 

 

ಭಕ್ತರು ಮೊದಲು ಭೀಮಲಿಂಗದ ದರ್ಶನ ಮಾಡಿದ ಮೇಲೆ ಸಂಗಮೇಶ್ವರ ಸ್ವಾಮಿಯ ದರ್ಶನ ಮಾಡುತ್ತಾರೆ. ಪ್ರಪಂಚದಲ್ಲಿ 7 ನದಿಗಳು ಸೇರುವ ಒಂದೇ ಒಂದು ಸ್ಥಳ ಸಂಗಮೇಶ್ವರ. ಈ ದೇವಾಲಯದಲ್ಲಿ ಎಲ್ಲ ದೇವಾಲಯಗಳ ತರಹ ಪೂಜೆಗಳು ದಿನ ನಡೆಯುದಿಲ್ಲ ,ತುಂಬಾ ತಿಂಗಳುಗಳು ನೀರಿನಲ್ಲಿ ಈ ದೇವಾಲಯ ಮುಳುಗಿರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top