fbpx
ಸಿನಿಮಾ

ಕನ್ನಡ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಮಾಡಿದ ಶಿವಣ್ಣನ ಹುಡುಗ್ರು – ಟಗರು ಜಾತ್ರೆ ಶುರು

 

ಇದುವರೆಗೆ ಯಾವ ನಟನಿಗೂ ಈ ರೀತಿಯ ಭರ್ಜರಿ ಚಿತ್ರ ಬಿಡುಗಡೆ ಮಾಡಿರಲಿಲ್ಲ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದು ಮೊಟ್ಟ ಮೊದಲ ಬಾರಿ ಎಂದು ಹೇಳಬಹುದು ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟರಿಗೆ ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ .

 

 

ಇನ್ನು ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಟಗರು ಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಈ ಚಿತ್ರದ ಬಿಡುಗಡೆಗೆ ಮುಂಚೆಯೇ ಶಿವರಾಜ್ ಕುಮಾರ್ ಅಭಿಮಾನಿಗಳು ಒಂದು ವಿಶಿಷ್ಟ ಕಾರ್ಯಕ್ಕೆ ಕೈ ಹಾಕಿದ್ದಾರೆ

ಅದೇನಪ್ಪ ವಿಶಿಷ್ಟ ಕಾರ್ಯ ಎಂದರೆ ಶಿವರಾಜ್ ಕುಮಾರ್ ಹಾಗೂ ಡಾ ರಾಜ್ಕುಮಾರ್ ಅಭಿಮಾನಿ ಸಂಘಗಳಾದ ರಾಜ್ ಡೈನಾಸ್ಟಿ ಹಾಗೂ ಶಿವು ಅಡ್ಡ ಎಂಬ ಎರಡು ಗುಂಪುಗಳು ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಅದುವೇ ಡಿಜೆ ನೈಟ್ ಈಗಾಗಲೇ ಟಗರು ಚಿತ್ರದ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ.

 

 

ಈ ಎರಡು ಅಭಿಮಾನಿ ಸಂಘಗಳು ಡಿಜೆ ನೈಟ್ಸ್ ನ್ನು ಆಯೋಜಿಸಿದ್ದು ಎಲ್ಲೆಡೆ ಇದರ ಹವಾ ಕ್ರಿಯೇಟ್ ಆಗುತ್ತಿದೆ ಇನ್ನು ಈ ಡಿಜೆ ನೈಟ್ಸ್ ಗೆ ಕನ್ನಡದ ಖ್ಯಾತ ನಟರನ್ನು ಹಾಗೂ ನಟಿಯರನ್ನು ಆಹ್ವಾನಿಸಲಾಗಿದೆ.

 

 

ಸಿಂಪಲ್ ಸುನಿ, ನಟಿ ಶಾನಿ ಶ್ರೀವತ್ಸ, ಅರುಣ್ ,ಧನಂಜಯ್, ವಸಿಷ್ಠ ಸಿಂಹ ,ಭಾವನಾ ,ಚಿತ್ರ ನಟಿ ಮಾನ್ವಿತಾ ಹರೀಶ್ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top