fbpx
ಮನೋರಂಜನೆ

ದರ್ಶನ್ ಜೀವನದಲ್ಲೇ ಈ ದಿನ ಅತ್ಯಂತ ಮಹತ್ವವಾದದ್ದು: ಯಾಕೆ ಗೊತ್ತಾ?

ದರ್ಶನ್ ಜೀವನದಲ್ಲೇ ಈ ದಿನ ಅತ್ಯಂತ ಮಹತ್ವವಾದದ್ದು: ಯಾಕೆ ಗೊತ್ತಾ?

 

 

ಕನ್ನಡ ಚಿತ್ರರಂಗದಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ ಎಂದರೆ ತಪ್ಪಾಗುವುದಿಲ್ಲ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ತಮ್ಮ ಚಿತ್ರರಸಿಕರನ್ನು ರಂಜಿಸುತ್ತಾ ಬಂದಿರುವ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ದರ್ಶನ್ ಅವರಿಗೆ ಈ ದಿನ ಅಂದ್ರೆ ಫೆಬ್ರವರಿ 8ನೇ ತಾರೀಖು ಅವರ ಜೀವನದಲ್ಲೇ ಅತ್ಯಂತ ಮಹತ್ವವಾದದ್ದು. ದರ್ಶನ್ ಹುಟ್ಟುಬ್ಬವಾದ ಫೆಬ್ರವರಿ 16 ಎಷ್ಟು ಮುಖ್ಯವೋ ಅದೇ ರೀತಿ ಫೆಬ್ರವರಿ 08 ಕೂಡ ಅಷ್ಟೇ ಮುಖ್ಯ, ಅಷ್ಟಕ್ಕೂ ಈ ದಿನ ದರ್ಶನ್ ಗೆ ಯಾಕೆ ಅಷ್ಟೊಂದು ಸ್ಪೆಷಲ್ ಅಂತೀರಾ ಮುಂದೆ ಓದಿ!

 

 

ಫೆಬ್ರವರಿ 8ನೇ ತಾರೀಖು ದರ್ಶನ್ ನಾಯಕನಾಗಿ ನಟಿಸಿದ ಮೊದಲ ಚಿತ್ರವಾದ ಮೆಜೆಸ್ಟಿಕ್ ಬಿಡುಗಡೆಯಾದ ದಿನ, ಹೌದು ಮೆಜೆಸ್ಟಿಕ್ ಚಿತ್ರ ಫೆಬ್ರವರಿ 8, 2002 ತೆರೆಕಂಡಿತ್ತು. ಇಂದಿಗೆ ದರ್ಶನ್ ನಾಯಕನಾಗಿ 16 ವರ್ಷಗಳು ಕಳೆದಿವೆ. ಮೆಜೆಸ್ಟಿಕ್ ಚಿತ್ರಕ್ಕೂ ಮುನ್ನ ಸಣ್ಣ ಪುಟ್ಟ ಪೋಷಕ ಪಾತ್ರಗಳಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಮೆಜೆಸ್ಟಿಕ್ ಚಿತ್ರ ಮಾಡಿದರು ನಂತರ ಅವರು ತಿರುಗಿ ನೋಡಲೇ ಇಲ್ಲ. ಮೆಜೆಸ್ಟಿಕ್ ಚಿತ್ರ ಅಮೋಘ ಯಶಸ್ಸನ್ನು ಕಂಡು ದರ್ಶನ್ ವೃತ್ತಿ ಜೀವನವನ್ನೇ ಬದಲಾಯಿಸಿತು.

 

 

ಮೆಜೆಸ್ಟಿಕ್ ಚಿತ್ರವು ಅಂಬರೀಷ್ ದಂಪತಿಗಳ ಆಶೀರ್ವಾದದೊಂದಿಗೆ ಆಗಸ್ಟ್ 20, 2001 ರಂದು ಈ ಸಿನಿಮಾ ಸೆಟ್ಟೇರಿತ್ತು. ದರ್ಶನ್ 50ನೇ ಚಿತ್ರಕ್ಕೆ ನಿರ್ಮಾಪಕರಾಗಿರುವ ಮುನಿರತ್ನ ಮೊದಲ ಶಾಟ್ ಗೆ ಕ್ಲಾಪ್ ಮಾಡಿದ್ದರು. ಚಿತ್ರವನ್ನು ನಿರ್ದೇಶನ ಮಾಡಿದ್ದ ಪಿ.ಎನ್.ಸತ್ಯ ಅವರಿಗೂ ಕೂಡ ಇದೇ ಮೊದಲ ಚಿತ್ರವಾಗಿತ್ತು. ಮೆಜೆಸ್ಟಿಕ್ ಚಿತ್ರ ಹೇಗೆ ದರ್ಶನ್ ವೃತ್ತಿ ಜೀವನವನ್ನು ಬದಲಿಸಿತೋ ಅದೇ ರೀತಿ ನಿರ್ದೇಶಕರ ಜೇವನವನ್ನು ಬದಲಿಸಿತು. ಮೆಜೆಸ್ಟಿಕ್ ನಂತರ ಪಿ.ಎನ್ ಸತ್ಯ ಡಾನ್, ದಾಸ, ಗೂಳಿ, ಸರ್ದಾರ, ಶಾಸ್ರ್ತೀ ಗಳಂತಹ ಹಿಟ್ ಚಿತ್ರಗಳನ್ನು ನೀಡಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top