fbpx
ತಂತ್ರಜ್ಞಾನ

ವಾಟ್ಸಪ್ಪ್ ನಲ್ಲಿ ಕ್ಷಣಾರ್ಧದಲ್ಲೇ ಹಣ ವರ್ಗಾವಣೆ ಮಾಡಬಹುದು, ಅದು ಹೇಗೆಂದು ತಿಳಿದುಕೊಳ್ಳಿ

ವಾಟ್ಸಪ್ಪ್ ನಲ್ಲಿ ಕ್ಷಣಾರ್ಧದಲ್ಲೇ ಹಣ ವರ್ಗಾವಣೆ ಮಾಡಬಹುದು, ಅದು ಹೇಗೆಂದು ತಿಳಿದುಕೊಳ್ಳಿ

 

ಸದಾ ಒಂದಿಲ್ಲ ಒಂದು ಹೊಸ ವೈಶಿಷ್ಟ್ಯಗಳನ್ನೂ ಪರಿಚಯ ಮಾಡುವ ವಾಟ್ಸಪ್ಪ್ ಈಗ ಒಂದು ಸಿಹಿ ಸುದ್ದಿ ನೀಡುತ್ತಿದೆ. ಈಗ ನಾವು ವಾಟ್ಸಪ್ಪ್ ಮುಖಾಂತರವೇ ನಮ್ಮ ಬ್ಯಾಂಕ್ ಖಾತೆಯಿಂದ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. 2017ರ ಫೆಬ್ರವರಿ 24ರಂದು ರಾಷ್ಟ್ರಿಯ ದೂರಸಂಪರ್ಕ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ `ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆಯನ್ನು ನಡೆಸಿದ್ದರು. ಇದರ ಫಲವಾಗಿ ವಾಟ್ಸಪ್ಪ್ ಈಗ ಈ ಹೊಸ ಪಾವತಿ ವ್ಯವಸ್ಥೆಯನ್ನು ಪರಿಚಯ ಮಾಡಿದೆ.

 

 

 

 

ಭಾರತದಲ್ಲಿ ವಾಟ್ಸಪ್ಪ್ ಈಗ ಯುಪಿಐ ಆಧರಿತ ಪಾವತಿಯನ್ನು ಪರೀಕ್ಷಣಾ ಹಂತವಾಗಿ ಪರಿಚಯ ಮಾಡಿದೆ. IOS ಹಾಗು ಆಂಡ್ರಾಯ್ಡ್ ಆಯ್ದ WhatsApp ಬೀಟಾ ಬಳಕೆದಾರರಿಗೆ UPI ಆಧಾರಿತ ಪಾವತಿ ವ್ಯವಸ್ಥೆಯನ್ನು ಬಿಡುಗಡೆಗೊಳಿಸಿದೆ. ಈ ವೈಶಿಷ್ಟ್ಯವು IOS ನ ವಾಟ್ಸಪ್ಪ್ ಆವೃತ್ತಿ 2.18.21 ಮತ್ತು ಆಂಡ್ರಾಯ್ಡ್ ಆವೃತ್ತಿ 2.18.41 ನಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. ಭಾರತವು ಮೆಸೇಜಿಂಗ್ ಅಪ್ಲಿಕೇಶನ್ನ ದೊಡ್ಡ ಬಳಕೆದಾರ ದೇಶವಾಗಿದೆ, ವಾಟ್ಸಪ್ಪ್ ಡಿಜಿಟಲ್ ಪಾವತಿಗಳಿಗೆ ಮತ್ತಷ್ಟು ಉತ್ತೇಜನ ಮಾಡಲು ಸಹಾಯಕಾರಿಯಾಗಲಿದೆ.

ಈ ಹೊಸ ಪಾವತಿ ವ್ಯವಸ್ಥೆಯು ಅಟ್ಯಾಚಮೆಂಟ್ ವಿಂಡೋ ದಲ್ಲಿ ಇರುವ ಗ್ಯಾಲರಿ, ಡಾಕ್ಯುಮೆಂಟ್ ಜೊತೆ ಹೊಸದಾಗಿ ಪರಿಚಯವಾಗಲಿದೆ. ನಮಗೆ ಬೇಕಾಗಿರುವ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿ ನಂತರ UPI ಗೆ ಲಿಂಕ್ ಮಾಡಬೇಕು. ನಮ್ಮ ಹಳೆಯ UPI ಪಿನ್ ಇದ್ದರೆ ಅದನ್ನು ನಮೂದಿಸಬೇಕು ಇಲ್ಲದಿದ್ದರೆ ಹೊಸ UPI ಪಿನ್ ರಚಿಸಬೇಕು. ಆಮೇಲೆ UPI ಐಡಿ ರಚಿಸಬೇಕು. ನಮಗೆ ಇನ್ನೊಬ್ಬರ UPI ಐಡಿ ಗೊತ್ತಿದ್ದರೆ ಅವರಿಗೆ ಹಣ ವರ್ಗಾವಣೆ ಮಾಡಬಹುದು ಅದು ನೆರವರಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಯಾಗುತ್ತದೆ. UPI ಐಡಿ ಗೊತ್ತಿಲ್ಲದಿದ್ದರೆ ನಾವು ಅವರ ಬ್ಯಾಂಕ್ IFSC ಕೋಡ್ ಹಾಗು ಖಾತೆ ಸಂಖ್ಯೆ ನಮೂದಿಸಿ ಕೂಡ ಹಣ ವರ್ಗಾವಣೆ ಮಾಡಬಹುದು.

 

 

ವಾಟ್ಯಾಪ್ಪ್ ಪಾವತಿ ವ್ಯವಸ್ಥೆಯಲ್ಲಿ ನಾವು ಗೆಳೆಯರಿಂದ ಹಣ ಪಡೆಯಲು ಮನವಿ ಕೂಡ ಮಾಡಬಹುದು. ಅವರ UPI ಐಡಿ ಹಾಗು ಮೊತ್ತ ದಾಖಲಿಸಿ ಸಬ್ಮಿಟ್ ಮಾಡಿದಾಗ ಗೆಳೆಯರಿಗೆ ನೋಟಿಫಿಕೇಶನ್ ರವಾನೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top