fbpx
ಮನೋರಂಜನೆ

ಬಿಗ್’ಬಾಸ್ ಸ್ಪರ್ಧಿಗಳು ಸ್ಟಾರ್ ನಟರನ್ನು ಭೇಟಿ ಮಾಡುತ್ತಿರೋದು ಯಾಕೆ?

ಬಿಗ್’ಬಾಸ್ ಸ್ಪರ್ಧಿಗಳು ಸ್ಟಾರ್ ನಟರನ್ನು ಭೇಟಿ ಮಾಡುತ್ತಿರೋದು ಯಾಕೆ?

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಬಿಗ್’ಬಾಸ್ ಮನೆಯಿಂದ ಹೊರ ಬಂದ ನಂತರ ಸೆಲೆಬ್ರಿಟಿ ಸ್ಪರ್ಧಿಗಳು ಕನ್ನಡದ ಸ್ಟಾರ್ ನಟರನ್ನ ಭೇಟಿ ಮಾಡಿ ಸಂತಸಗೊಂಡಿದ್ದಾರೆ.

 

 

ಒಂದು ಕಡೆ ಕೆಲವೊಂದಷ್ಟು ಸ್ಪರ್ಧಿಗಳು ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರೆ ಇನ್ನೂ ಕೆಲವರು ಗೆಟ್ ಟು ಗೆದರ್ ಪಾರ್ಟಿ ಮಾಡಿ ಒಂದೆಡೆ ಸೇರಿ ಹಾಡಿ ಕುಣಿದಿದ್ದಾರೆ. ಷೋನ ರನ್ನರ್ ಆಗಿರುವ ದಿವಾಕರ್ ತಮ್ಮ ಪತ್ನಿಯೊಡನೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನೆಗೆ ತೆರಳಿ ಕೆಲವೊಂದು ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ದಿವಾಕರ್ ಗೆ ಈಗಾಗಲೇ ಸಿನಿಮಾ ಆಫರ್ ಗಳು ಬಂದಿದ್ದು ಈ ಬಗ್ಗೆ ಸುದೀಪ್ ಬಳಿ ಸಲಹೆ ಕೇಳಲು ಭೇಟಿಯಾಗಿದ್ದರು ಎಂದು ವರದಿಯಾಗಿದೆ.

 

 

ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಕೋಟಾದಲ್ಲಿ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ಸ್ಪರ್ಧಿಯಾದ ಸಮೀರಾಚಾರ್ಯ ಅವರು ಹ್ಯಾಟ್ರಿಕ್ ಹೀರೊ ಶಿವಣ್ಣ ಮತ್ತು ಬಿಗ್ ಬಾಸ್ 4ನ ವಿನ್ನರ್ ಆಗಿದ್ದ ಪ್ರಥಮ್ ರನ್ನು ಭೇಟಿ ಮಾಡಿ ಕೆಲವು ವಿಷಯಗಳನ್ನು ಮಾತುಕತೆ ನಡೆಸಿದ್ದಾರೆ..ಹಾಗು ಚಂದನ್ ಶೆಟ್ಟಿ ಸಮೀರ್ ಅವರ ಮೆನೆಗೆ ಹೋಗಿ ಸಮೀರ್ ಪತ್ನಿ ಮೇಲೆ ಹಾಡನ್ನು ಹಾದಿ ಬಂದಿದ್ದಾರೆ. ಹೀಗೆ ಬಿಗ್ ಬಾಸ್ ಸಾಮಾನ್ಯ ಸ್ಪರ್ಧಿಗಳು ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ನಟರುಗಳನ್ನ ಭೇಟಿಯಾಗುತ್ತಿರುವುದು ಗಾಂಧಿನಗರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top