fbpx
ಮನೋರಂಜನೆ

ಕ್ಯಾನ್ಸರ್’ಗೆ ತುತ್ತಾಗಿರುವ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ದರ್ಶನ್!

ಕ್ಯಾನ್ಸರ್’ಗೆ ತುತ್ತಾಗಿರುವ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ದರ್ಶನ್!

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯೊಬ್ಬ ತನ್ನ ಜೀವನದ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾರೆ. ದರ್ಶನ್ ಅವರ ಪಕ್ಕಾ ಅಭಿಮಾನಿಯಾಗಿರುವ ರೇವಂತ್ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಶಿವಮೊಗ್ಗದ ರೇವಂತ್ ಆತನ ಸ್ನೇಹಿತರ ವಲಯದಲ್ಲಿ ದರ್ಶನ್ ಅಂತಲೇ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ದರ್ಶನ್ ಅವರನ್ನು ಹಚ್ಚಿಕೊಂಡಿದ್ದಾತ. ಆದರೀಗ ಆತ ಕ್ಯಾನ್ಸರ್ ಎಂಬ ಯಮಸದೃಷ ಕಾಯಿಲೆಗೆ ಸಿಕ್ಕು ಕಡೇ ಕ್ಷಣಗಳನ್ನು ಎಣಿಸುತ್ತಿದ್ದಾನೆ.

 

 

ಹೀಗೆ ಸಾವಿನ ಸಮ್ಮುಖದಲ್ಲಿ ನರಳುತ್ತಾ ಮಲಗಿರೋ ಈ ಹುಡುಗನಿಗೆ ಕಡೇ ಘಳಿಗೆಯಲ್ಲಿ ತನ್ನ ಇಷ್ಟದ ನಟ ದರ್ಶನ್ ಅವರನ್ನು ನೋಡಿ ಕಣ್ಮುಂಬಿಕೊಳ್ಳಬೇಕೆಂಬ ಅದಮ್ಯ ಆಸೆಯನ್ನು ಇಟ್ಕೊಂಡಿದ್ದ ರೇವಂತ ತಾನಿನ್ನು ಹೆಚ್ಚು ದಿನ ಬದುಕೋದಿಲ್ಲ ಹೇಗಾದರೂ ಮಾಡಿ ದರ್ಶನ್ ಅವರನ್ನು ಒಂದು ಸಲ ನೋಡೋ ಅವಕಾಶ ಕಲ್ಪಿಸಿ ಎಂದು ತಮ್ಮ ಸ್ನೇಹಿತರನ್ನೆಲ್ಲಾ ಕೇಳಿಕೊಂಡಿದ್ದನು.ಈಗ ದರ್ಶನ್ ಅವರು ತಮ್ಮ ಅಭಿಮಾನಿಯೇ ಕಡೇ ಆಸೆಯನ್ನು ಪೂರೈಸಿದ್ದಾರೆ.

ಅಭಿಮಾನಿಗಳನ್ನು ಅಪಾರವಾಗಿ ಪ್ರೀತಿಸುವವರು ದರ್ಶನ್ಅವರಿಗೆ ಶಿವಮೊಗ್ಗದ ಹುಡುಗ ರೇವಂತನ ಸ್ಥಿತಿಯ ವಿಚಾರ ಗೊತ್ತಾಗಿದೆ ಬಹುಶಃ ದರ್ಶನ್ ಯಾವತ್ತೋ ಹೋಗಿ ಆತನನ್ನು ಮೈದಡವಿ ಮಾತಾಡಿಸುತ್ತಿದ್ದರು. ಆದರೆ ದರ್ಶನ್ ಹೋಗೋ ವಿಚಾರ ಗೊತ್ತಾದರೆ ದೃಷ್ಯ ಮಾಧ್ಯಮಗಳು ಟಾಂ ಟಾಂ ಬಾರಿಸುತ್ತವೆ. ಅಲ್ಲಿ ಅಪಾರವಾದ ಕ್ರೌಡು ಸೃಷ್ಟಿಯಾಗುತ್ತೆ. ಮೊದಲೇ ಮರಣಶಯ್ಯೆಯಲ್ಲಿರೋ ರೇವಂತನ ಮೇಲೂ ಅದರ ಪರಿಣಾಮವಾಗಬಹುದು.

 

 

ಇಷ್ಟೆಲ್ಲಾ ಮುಂದಾಲೋಚನೆ ಮಾಡಿರೋ ದರ್ಶನ್ ವೀಡಿಯೋ ಕಾಲ್ ಮೂಲಕ ರೇವಂತ್ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಈ ಮೂಲಕ ಅಂತೂ ಕೊನೆಗಳಿಗೆಯಲ್ಲಿ ರೇವಂತನ ಆಸೆ ಈಡೇರಿದೆ. ಸಾವಿನೊಂದಿಗೆ ಸೆಣೆಸುತ್ತಿರೋ ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸುವ ಬಗ್ಗೆ ಸಾಧ್ಯಂತವಾಗಿ ಆಲೋಚಿಸಿಯೇ ಅವರು ವೀಡಿಯೋ ಕಾಲ್ ಮೂಲಕ ಮಾತಾಡುವ ನಿರ್ಧಾರ ಮಾಡಿದ್ದಾರೆ. ಈ ಹುಡುಗನ ದರ್ಶನ್ ಪ್ರೀತಿ ನಿಜಕ್ಕೂ ಬೆರಗಾಗಿಸುವಂತಿದೆ. ಆತನ ಫೇಸ್ ಬುಕ್ ವಾಲ್ ತೆಗೆದರೂ ಅಲ್ಲೆ ದರ್ಶನ್ ಬಗೆಗಿನ ವಿಚಾರಗಳು, ಫೋಟೋಗಳೇ ರಾರಾಜಿಸುತ್ತವೆ. ಈ ಹುಡುಗ ದರ್ಶನ್ ಕಕ್ಕುಲಾತಿಯ ಪ್ರಭಾವದಿಂದಲಾದರೂ ಬದುಕಿಕೊಳ್ಳಲಿ ಅಂತ ಆತನ ಒಡನಾಡಿಗಳು, ದರ್ಶನ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top