fbpx
ಆರೋಗ್ಯ

ಹಾನಿಕಾರಕ ರಾಸಾಯನಿಕ ಎನರ್ಜಿ ಡ್ರಿಂಕ್ ಗಳಿಗೆ ಗುಡ್ ಬೈ ಹೇಳಿ.. ಮನೆಯಲ್ಲೇ ತಯಾರಿಸಿ ಶಕ್ತಿಶಾಲಿ ಎನರ್ಜಿ ಡ್ರಿಂಕ್

ಹಾನಿಕಾರಕ ರಾಸಾಯನಿಕ ಎನರ್ಜಿ ಡ್ರಿಂಕ್ ಗಳಿಗೆ ಗುಡ್ ಬೈ ಹೇಳಿ..
ಮನೆಯಲ್ಲೇ ತಯಾರಿಸಿ ಶಕ್ತಿಶಾಲಿ ಎನರ್ಜಿ ಡ್ರಿಂಕ್

 

ನಾವು ದಷ್ಟಪುಷ್ಟ ಶಕ್ತಿವಂತರಾಗಲು ಮಾರುಕಟ್ಟೆಯಿಂದ ರಾಸಾಯನಿಕ ಎನರ್ಜಿ ಡ್ರಿಂಕ್ ಖರೀದಿ ಮಾಡುತ್ತವೆ. ಇವು ತಾತ್ಕಾಲಿಕವಾಗಿ ನಿಮಗೆ ಶಕ್ತಿ ಕೊಡುತ್ತವೆ ಆದರೆ ಅವು ನಿಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದನ್ನು ತಡೆಗಟ್ಟಲು ನೀವೇ ಮನೆಯಲ್ಲಿ ತಯಾರು ಮಾಡಬಹುದಾಗ ಸುಲಭವಾದ ಎನರ್ಜಿ ಡ್ರಿಂಕ್ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
1 ಚಮಚ ಬೆಣ್ಣೆ,
50 ಗ್ರಾಂ ಬಾದಾಮಿ.
ಒಂದು ಲೋಟ ಹಾಲು
ನಾಲ್ಕೈದು ಎಸಳು ಕೇಸರಿ,
ತೆಂಗಿನ ಸಕ್ಕರೆ( ಕೊಕೊನಟ್ ಶುಗರ್ )
ಪೂರ್ತಿ ಹಣ್ಣಾಗಿರುವ ಬಾಳೆಹಣ್ಣು
50 ಗ್ರಾಂ ಹಸಸಿನ ಹಣ್ಣು

 

ಶಕ್ತಿ ವರ್ಧಕ ದ್ರವ( ಎನರ್ಜಿ ಡ್ರಿಂಕ್) ಮಾಡುವ ವಿಧಾನ:

ಮೊದಲಿಗೆ ಒಂದು ಬಾಣೆಲೆಯಲ್ಲಿ 1 ಚಮಚ ಬೆಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಕಾಯಿಸಿ ಬೆಣ್ಣೆ ಕಾಯ್ದಾಗ, ಅದಕ್ಕೆ 50 ಗ್ರಾಂ ಬಾದಾಮಿ ಬೀಜಗಳನ್ನು ಸೇರಿ ಚೆನ್ನಾಗಿ ಕರಿದುಕೊಳ್ಳಿ. ಉರಿಯನ್ನು ಸಣ್ಣಗೆ ಇಟ್ಟು ಕರಿಯಿರಿ. ಬಾದಾಮಿಗಳು ಕಪ್ಪಗಾಗದಿರುವ ಹಾಗೆ ನೋಡಕೊಳ್ಳಿ.

 

 

ಆಮೇಲೆ ಈ ಬಾದಾಮಿಗಳನ್ನು ಒಂದು ಮಿಕ್ಸರ್ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.

 

 

ಇನ್ನೊಂದು ಬಾಣೆಲೆಯಲ್ಲಿ ಸ್ವಲ್ಪ ನೀರು ಕಾಯಲು ಇಡೀ. ಅದಕ್ಕೆ ಕೇಸರಿಯ ಎಸಳನ್ನು ಸೇರಿಸಿ. ಒಂದು ಲೋಟ ಹಾಲನ್ನು ಸೇರಿಸಿ ಹಾಲು ಮಿಶ್ರಣವನ್ನು ಚೆನ್ನಾಗಿ ತಿರುವುತ್ತೀರಿ. ಆಮೇಲೆ ಗ್ಯಾಸ ಉರಿ ಬಂದ್ ಮಾಡಿ.

 

 

 

ಬಾಳೆಹಣ್ಣು ಮತ್ತು ಹಸಸಿನ ಹಣ್ಣನ್ನು ಚಾಕುವಿನ ಸಹಾಯದಿಂದ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.ಇದಕ್ಕೆ ಮಿಕ್ಸರ್ ನಲ್ಲಿದ್ದ ಬಾದಾಮಿ ಪುಡಿಯನ್ನು ಸೇರಿಸಿ. ಈ ಮಿಶ್ರಣಕ್ಕೆ ಕಾಯಿಸಿದ ಹಾಲಿನ ಮಿಶ್ರಣವನ್ನು ಸೇರಿಸಿ. ಆಮೇಲೆ ತೆಂಗಿನ ಸಕ್ಕರೆ (ಕೊಕೊನಟ್ ಪಾಮ್ ಶುಗರ್ ) ಸೇರಿಸಿ.

ಈಗ ಎನರ್ಜಿ ಡ್ರಿಂಕ್ ಸವಿಯಲು ಸಿದ್ದ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top