fbpx
ಸಿನಿಮಾ

33 ವರ್ಷಗಳು ಹಿಂದೆ ಪವರ್ ಸ್ಟಾರ್ ಪುನೀತ್ ಅವ್ರಿಗೆ ಇದ್ದ ಆ ಆಸೆಯನ್ನು ಪೂರೈಸಿದ ಅಭಿಮಾನಿ ದೇವ್ರು

ಸರಳತೆಗೆ ಒಂದು ಮಾದರಿ ಉದಾಹರಣೆ ಎಂದಿರುವವರು ನಮ್ಮ ಸ್ಯಾಂಡಲ್ವುಡ್ನ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪನ ಹಾದಿಯಂತೆ ಸಹಕಲಾವಿದರನ್ನು ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ ಅಷ್ಟೆ ಅಲ್ಲದೆ ಅಭಿಮಾನಿಗಳಾಗಿ ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ.

 

ಪುನೀತ್ ಹೇಳಿ ಕೇಳಿ ಬಾಲ ಕಲಾವಿದರಾಗಿ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದವರು ನಮಗೆ ಈಗಾಗಲೇ ಗೊತ್ತಿರುವ ಹಾಗೆ ಅವರು ಅಭಿನಯಿಸಿರುವ ‘ಬೆಟ್ಟದ ಹೂ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು 1985 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು

 

ಬೆಟ್ಟದ ಹೂ ಚಿತ್ರದಲ್ಲಿ ಶರ್ಲಿ ಮೇಡಂಗಾಗಿ ಬೆಟ್ಟದ ಹೂವನ್ನು ತಂದು ಕೊಟ್ಟು ಆ ದುಡ್ಡಿನಲ್ಲಿ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಕೊಳ್ಳಬೇಕೆಂಬ ಆಸೆ ಬಹಳ ವಾಗಿರುತ್ತದೆ ಆದರೂ ಸಹ ಕಿತ್ತು ತಿನ್ನುವ ಬಡತನದಲ್ಲಿ ಆ ಹಣವನ್ನು ಅಮ್ಮನ ಸೀರೆ ಕೊಂಡುಕೊಳ್ಳಲು ವಿನಿಯೋಗಿಸುತ್ತಾರೆ ಕೊನೆಗೂ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಕೊಂಡುಕೊಳ್ಳಲು ಆಗುವುದಿಲ್ಲ

ಇದೀಗ ಅಭಿಮಾನಿಯೊಬ್ಬರು ಅದೇ ವಾಲ್ಮೀಕಿ ರಾಮಣ್ಣ ಪುಸ್ತಕವನ್ನು ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ
1985 ರಲ್ಲಿ ಬಿಡುಗಡೆಯಾಗಿದ್ದ ಬೆಟ್ಟದ ಹೂ ಚಿತ್ರ ಮತ್ತೆ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳಿಂದ ನೆನಪಾಗಿದೆ

 

 

ಈ ಬಗ್ಗೆ ಪುನೀತ್ ರಾಜ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು ಬೆಟ್ಟದ ಹೂ ಚಿತ್ರದಲ್ಲಿ ಎಷ್ಟು ದುಡ್ಡು ಸೇವ್ ಮಾಡಿದ್ದರೂ ತೆಗೆದುಕೊಳ್ಳಲು ಆಗಲಿಲ್ಲ ಆದರೆ ಅಭಿಮಾನಿಯೊಬ್ಬರು ಗಿಫ್ಟ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ

“ಬೆಟ್ಟದಹೂವು movieLi ಎಷ್ಟೇ ದುಡ್ಡು save ಮಾಡದ್ರೂ ತೊಗೊಳೋಕ್ಕೆ ಆಗ್ಲಿಲ್ಲ, finally a fan gifted it.”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top