fbpx
ದೇವರು

ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಶುರು ಮಾಡಿದ ಮೇಲೆ ಅಪ್ಪಿತಪ್ಪಿನೂ ಯಾವತ್ತಿಗೂ ಮಧ್ಯದಲ್ಲೇ ಬಿಡಬಾರದು

ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಶುರು ಮಾಡಿದ ಮೇಲೆ ಅಪ್ಪಿತಪ್ಪಿನೂ ಯಾವತ್ತಿಗೂ ಮಧ್ಯದಲ್ಲೇ ಬಿಡಬಾರದು

 

 

ಗರುಡ ಪುರಾಣವು ಹದಿನೆಂಟು ಮಹಾ ಪುರಾಣಗಳಲ್ಲಿ ಒಂದಾಗಿದ್ದು, ಈ ಗ್ರಂಥವು ಅನೇಕ ಆವೃತ್ತಿಗಳಲ್ಲಿ ಬಂದಿದೆ. ಇದು ಎಂಟು ಸಾವಿರದಿಂದ ಹತ್ತೊಂಬತ್ತು ಸಾವಿರ ಆವೃತ್ತಿಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ನಿಯಮಗಳನ್ನು ಮುಖ್ಯವಾಗಿ ಉಲ್ಲೇಖಿಸಿದ್ದಾರೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಮೂರು ವಿಷಯಗಳನ್ನು ಎಂದಿಗೂ ಕೂಡ ಅಪೂರ್ಣವಾಗಿ ಉಳಿಸಬಾರದಂತೆ.

1.ಬೆಂಕಿಯನ್ನು ಸುಮ್ಮನೆ ಉರಿಯಲು ಬಿಡಬೇಡಿ, ನಂದಿಸಿ.
ಬೆಂಕಿಯನ್ನು ಎಂದಿಗೂ ಕೂಡ ಸುಮ್ಮನೆ ಉರಿಯಲು ಬಿಡಬೇಡಿ, ನೀವು ಬೆಂಕಿ ಉರಿಯುತ್ತಿರುವುದನ್ನು ಎಲ್ಲಾದರೂ ಅಕಸ್ಮಾತಾಗಿ ಕಂಡರೆ ಎಷ್ಟು ಬೇಗ ಸಾಧ್ಯವಾಗುತ್ತದೋ, ಅಷ್ಟು ಬೇಗನೆ ಅದನ್ನು ಹತ್ತಿರದಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ನಂದಿಸಿ.

 

 

2.ವೈದ್ಯಕೀಯ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬೇಡಿ.
ಯಾವುದೇ ವೈದ್ಯಕೀಯ ಚಿಕಿತ್ಸೆಗಳನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುವುದರಿಂದ ಕಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಗುವುದಿಲ್ಲ. ಬದಲಾಗಿ ಬುಡದಿಂದ ಪದೇ ಪದೇ ಅದೇ ರೀತಿಯ ರೋಗ ಲಕ್ಷಣಗಳು ಕಂಡು ಬರುತ್ತಿರುತ್ತವೆ ಮತ್ತು ಮನುಷ್ಯನ ಆರೋಗ್ಯವನ್ನು ಇನ್ನಷ್ಟು ಹೆಚ್ಚಾಗಿ ಹಾಳು ಮಾಡುತ್ತವೆ.

 

 

3. ಸಾಲ ತೆಗೆದುಕೊಂಡ ಹಣವನ್ನು ಬೇಗನೆ ಹಿಂತಿರುಗಿಸಿ.
ಬ್ಯಾಂಕಿನಿಂದ ಸಾಲವಾಗಿ ತೆಗೆದುಕೊಂಡ ಹಣವನ್ನು ಬೇಗನೆ ತಮ್ಮ ವಾರಸುದಾರರಿಗೆ ಹಿಂದಿರುಗಿಸಿ. ಹಿಂದಿರುಗಿಸದೆ ಉಳಿಸಿಕೊಳ್ಳುವುದರಿಂದ ಬಡ್ಡಿಯು ಹೆಚ್ಚಾಗುವುದಲ್ಲದೆ, ನಿಮಗೆ ಒಂದರ ನಂತರ ಮತ್ತೊಂದು ತೊಂದರೆಯನ್ನು ತಂದೊಡ್ಡುತ್ತವೆ. ಇಲ್ಲವಾದರೆ ಹಣದ ವಿಚಾರದಲ್ಲಿ ನೀವು ಅನೇಕ ಸಮಸ್ಯೆಗಳನ್ನು, ನಿಂದನಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ಆದ್ದರಿಂದ ಹಣವನ್ನು ಬೇಗನೆ ಹಿಂತಿರುಗಿಸಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top