fbpx
ಆರೋಗ್ಯ

ಕನ್ನಡಕ ಧರಿಸಿ ಮೂಗಿನ ಮೇಲೆ ಕಲೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಕನ್ನಡಕ ಧರಿಸಿ ಮೂಗಿನ ಮೇಲೆ ಕಲೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಕನ್ನಡಕ ಹಾಕಿಕೊಳ್ಳುವ ಕೆಲವರ ಮೂಗಿನ ಮೇಲೆ ಕಲೆಯಾಗೋದು ಸಾಮಾನ್ಯ. ಕಪ್ಪು ಕಲೆಯಿಂದ ಬೇಸರಮಾಡಿಕೊಂಡು ಚಿಂತೆಮಾಡೋದು ಬಿಟ್ಟು ಈ  ಸರಳ, ಸುಲಭ ಉಪಾಯದಿಂದ ಈ ಕಲೆಯನ್ನು ನಿವಾರಣೆಮಾಡಿಕೊಳ್ಳಿ.

Image result for lemon

ನಿಂಬೆಹಣ್ಣು : ಒಂದು ಚಮಚ ನಿಂಬೆ ರಸವನ್ನು ಒಂದು ಚಮಚ ನೀರಿಗೆ ಬೆರೆಸಿ ಹತ್ತಿ ಸಹಾಯದಿಂದ ಮೂಗಿನ ಕಲೆ ಮೇಲೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ಒಂದು ವಾರ ಇದನ್ನು ಹಚ್ಚಿದ್ರೆ ಕಲೆ ಮಾಯ.

Related image

ಲೋಳೆ ಸರ: ಅಲೋ ವೆರಾ ಜೆಲ್ ರಲ್ಲಿ ಅಳ್ಳೆವಿಯೆಟ್ ಪಾಲಿಸ್ಯಾಕರೈಡ್ಗಳು ಹೈಪರ್ಪಿಗ್ಮೆಂಟೇಶನ್ ಕಡಿಮೆ ಮಾಡುತ್ತೆ ಹಾಗೂ ನಿಮ್ಮ ಚರ್ಮದ ಮೂಲ ಬಣ್ಣವನ್ನು ಮತ್ತೆ ತರಿಸುತ್ತದೆ , ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಿ ಹೊಸ ಚರ್ಮ ಜೀವಕೋಶಗಳನ್ನು ಪುನಃ ಉತ್ಪಾದಿಸಲು ಸಹಾಯಕ .

Image result for aduge soda

ಅಡುಗೆ ಸೋಡಾ: ಅಡುಗೆ ಸೋಡಾ ವನ್ನು ನೀರಲ್ಲಿ ಪೇಸ್ಟ್ ರೀತಿ ಮಾಡಿಕೊಂಡು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ತಣ್ಣೀರಲ್ಲಿ ತೊಳೆಯಿರಿ.

Image result for kittale

ಕಿತ್ತಳೆ : ಕಿತ್ತಳೆ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ. ಒಂದು ಚಮಚ ಕಿತ್ತಳೆ ಸಿಪ್ಪೆ ಪುಡಿಗೆ ಅರ್ಧ ಚಮಚ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೂಗಿನ ಕಲೆ ಮೇಲೆ ಹಚ್ಚಿ. ಒಣಗಿದ ನಂತ್ರ ತಣ್ಣನೆಯ ನೀರಿನಲ್ಲಿ ಮೂಗನ್ನು ತೊಳೆಯಿರಿ. ನಾಲ್ಕೈದು ದಿನ ಈ ಮಿಶ್ರಣವನ್ನು ಹಚ್ಚಿಕೊಳ್ಳುತ್ತ ಬಂದಲ್ಲಿ ಫಲಿತಾಂಶ ಕಾಣಬಹುದಾಗಿದೆ.

Related image

ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಗೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ 15 ದಿನ ಹಚ್ಚಿ ಮೂಗಿನ ಮೇಲಿನ ಕಪ್ಪು ಮಚ್ಚೆಗಳು ಕ್ರಮೇಣವಾಗಿ ಮಾಯವಾಗುತ್ತದೆ.

Image result for cucumber

ಸೌತೆಕಾಯಿ : ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುವ ಶಕ್ತಿ ಸೌತೆಕಾಯಿಗಿದೆ. ಸೌತೆ ಕಾಯಿಯನ್ನು ಕತ್ತರಿಸಿ ಹೋಳುಗಳನ್ನು ಕಲೆಯಾಗಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ ಕೆಲವೇ ದಿನಗಳಲ್ಲಿ ಕಲೆ ಕಡಿಮೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top