fbpx
ಮನೋರಂಜನೆ

ಓಂ-2 ಚಿತ್ರ ಬರುತ್ತಾ? ಅಭಿಮಾನಿಗಳ ತಲೆಗೆ ಹೊಸ ಹುಳ ಬಿಟ್ರು ಉಪ್ಪಿ.

ಓಂ-2 ಚಿತ್ರ ಬರುತ್ತಾ? ಅಭಿಮಾನಿಗಳ ತಲೆಗೆ ಹೊಸ ಹುಳ ಬಿಟ್ರು ಉಪ್ಪಿ.

 

 

ಕನ್ನಡದ ಆಲ್ ಟೈಂ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದಾದ ‘ಓಂ’ ಚಿತ್ರ. ಉಪೇಂದ್ರ ಅವರ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದ ಚಿತ್ರ. 22 ವರ್ಷಗಳಲ್ಲಿ ’ಓಂ’ ಚಿತ್ರ 500ಕ್ಕೂ ಹೆಚ್ಚು ಬಾರಿ ರಿಲೀಸ್ ಆಗಿ ಬ್ಲಾಕ್ ಬ್ಲಾಸ್ಟರ್‌ನಲ್ಲಿ ಹಿಟ್ ಸಿನಿಮಾ ಎನಿಸಿಕೊಂಡಿದೆ.

1995ರಲ್ಲಿ ತೆರೆ ಕಂಡ ಬೆಂಗಳೂರಿನ ಭೂಗತ ಜಗತ್ತಿನ ಕಥಾ ಹಂದರವುಳ್ಳ ಈ ಚಿತ್ರಕ್ಕೆ ಸಂಭಂದಿಸಿದಂತೆ ನಟ ನಿರ್ದೇಶಕ ಉಪೇಂದ್ರ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ. ಅದೇನೆಂದರೆ ಈ ಚಿತ್ರದ ಸೀಕ್ವೆಲ್ ಬರುತ್ತದೆ ಎಂದು, ಹೌದು ಇತ್ತೀಚಿಗೆ ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಮಾಡುತ್ತಿರುವ ಹೊಸ ಟಾಕ್ ಶೋಗೆ ಮೊದಲ ಅತಿಥಿ ಆಗಿಮಿಸಿದ್ದ ನಟ ಉಪೇಂದ್ರ ಶೂಟಿಂಗ್ ಸೆಟ್ ನಲ್ಲಿ ಶಿವಣ್ಣ ಅವರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋಗೆ Om 2 coming? ಎಂದು ಬರೆದುಕೊಂಡಿದ್ದಾರೆ..

 

 

ಉಪೇಂದ್ರವರ ಈ ಪೋಸ್ಟ್ ಸದ್ಯ ಶಿವಣ್ಣ ಮತ್ತು ಉಪೇಂದ್ರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಓಂ-2 ಬಗ್ಗೆ ಸಂಚಿಕೆಯಲ್ಲಿ ಏನಾದರೂ ಮಾಹಿತಿ ಸಿಗಬಹುದೇ ಎಂದು ಕಾರ್ಯಕ್ರಮ ಯಾವಾಗ ಪ್ರಸಾರ ವಾಗಲಿದೆಯೋ ಎಂದು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಆದರೆ ಓಂ ಬರ್ತಿದೆ ಎಂದು ಬರೆದು ಅದರ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದ್ದಾರೆ ಹಾಗಾಗಿ om2 ಬರುವ ಸಾಧ್ಯತೆ ಕಡಿಮೆ ಇದೆ ಎನ್ನುವುದು ಅವರ ಅಭಿಮಾನಿ ಬಳಗದ ಮಾತು. ಸ್ಟಾರ್ ಸುವರ್ಣ ನಿರ್ಮಾಣ ಮಾಡುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮ ಸದ್ಯದಲ್ಲೇ ಶುರುವಾಗಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top