fbpx
ದೇವರು

ಪುರಾಣಗಳಲ್ಲಿ ಹೇಳಿರೋ ಪ್ರಕಾರ ಈ ಜಾಗಕ್ಕೆ ಗಂಡಸರು ಹೋದರೆ ಹೆಣ್ಣಾಗಿ ಪರಿವರ್ತನೆಯಾಗ್ತಾರಂತೆ !

ಪುರಾಣಗಳಲ್ಲಿ ಹೇಳಿರೋ ಪ್ರಕಾರ ಈ ಜಾಗಕ್ಕೆ ಗಂಡಸರು ಹೋದರೆ ಹೆಣ್ಣಾಗಿ ಪರಿವರ್ತನೆಯಾಗ್ತಾರಂತೆ !

 

ಪುರುಷರನ್ನು ಹೆಣ್ಣುಮಕ್ಕಳಾಗಿ ಪರಿವರ್ತಿತ ಮಾಡುವಂತ ಆ ವನದ ಬಗ್ಗೆ ನಿಮಗೆ ಗೊತ್ತಾ ?ನಮ್ಮ ಪುರಾಣಗಳನ್ನೂ ನೋಡಿದರೆ ಎಷ್ಟೋ ಆಸಕ್ತಿಕಾರ ವಿಷಯಗಳಿವೆ ,ಅಂತಹ ಕಥೆಯಲ್ಲಿ ನಾವು ಈಗ ಹೇಳುವ ಕಥೆ ಕೂಡ ಒಂದು .

ಕುಮಾರವನವೆಂಬ ವನಕ್ಕೆ ಹೋದರೆ ಗಂಡುಮಕ್ಕಳು ಹೆಣ್ಣುಮಕ್ಕಳಾಗಿ ಪರಿವರ್ತಿತವಾಗುತ್ತಾರಂತೆ ,ಈ ರೀತಿ ಆಗುವುದರ ಹಿಂದೆ ಇರುವಂತ ಕಥೆಯನ್ನು ನಾವು ಈಗ ತಿಳಿಯೋಣ .
ವೈವಸ್ವತ ಮನು ಮತ್ತು ಅವನ ಹೆಂಡತಿ ಶ್ರದ್ಧಾ ದೇವಿ ,ಇವರು ಸಂತಾನಕ್ಕಾಗಿ ಒಂದು ಯಾಗವನ್ನು ಶುರು ಮಾಡುತ್ತಾರೆ ,ಶ್ರದ್ಧಾ ದೇವಿಗೆ ಹೆಣ್ಣು ಮಕ್ಕಳೆಂದರೆ ತುಂಬಾ ಇಷ್ಟ ಈ ಕಾರಣದಿಂದ ಯಾಗ ನಡೆಸುತ್ತಿದ್ದ ಮುನಿಗಳನ್ನು ಕರೆದು ಹೆಣ್ಣು ಮಗು ಹುಟ್ಟುವಂತೆ ಯಾಗ ಮಾಡುವಂತೆ ರಹಸ್ಯವಾಗಿ ಆತನ ಬಳಿ ಕೇಳಿಕೊಳ್ಳುತ್ತಾಳೆ .

 

 

ಅವಳ ಮಾತಿನಂತೆ ಮುನಿಗಳು ಹೆಣ್ಣು ಮಗು ಹುಟ್ಟುವಂತೆ ಯಾಗ ಜರುಗಿಸುತ್ತಾರೆ.ಅದರ ಫಲವಾಗಿ ಕೆಲವು ದಿನಗಳಲ್ಲಿ ಅವಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಆ ಮಗುವಿಗೆ ಇಳಾ ಎಂದು ನಾಮಕರಣ ಮಾಡುತ್ತಾರೆ .

ನಂತರ ವೈವಸ್ವತ ಮನು ವಸಿಷ್ಠನ ಬಳಿ ಹೋಗಿ ನಾನು ಪುತ್ರ ಜನ್ಮಿಸಬೇಕು ಎಂದು ಯಾಗ ಮಾಡಿದರೆ ಹೆಣ್ಣು ಮಗುವಾಗಿದೆ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದಾಗ ವಸಿಷ್ಠ ತನ್ನ ದಿವ್ಯ ದೃಷ್ಠಿಯಿಂದ ನಡೆದ ವಿಷಯ ತಿಳಿದು ವೈವಸ್ವತ ಮನುವಿಗೆ ಶಾಂತನಾಗುವಂತೆ ಹೇಳಿ ಆ ಹೆಣ್ಣು ಮಗುವನ್ನು ಗಂಡು ಮಗುವಾಗಿ ತಾನು ಮಾಡುವಂತೆ ಆಶ್ವಾಸನೆ ನೀಡಿ ಆ ಕೆಲಸವನ್ನು ಮಾಡುತ್ತಾನೆ ಆ ಗಂಡು ಮಗುವಿಗೆ ಸುದ್ಯುಮ್ನ ಎಂದು ಹೆಸರು ಇಡಲಾಗುತ್ತದೆ ಆ ಬಾಲಕ ಬೆಳೆದು ರಾಜ್ಯ ಪಾಲನೆ ಮಾಡಲು ಪ್ರಾರಂಭ ಮಾಡುತ್ತಾನೆ .

 

ಒಂದು ದಿನ ಸುದ್ಯುಮ್ನ ತನ್ನ ಪಡೆಯ ಜೊತೆ ಪರ್ವತಗಳ ಮಧ್ಯೆ ಇರುವಂತ ಕುಮಾರ ವನಕ್ಕೆ ಬೇಟೆಗೆ ಎಂದು ಹೋಗುತ್ತಾರೆ ,ಅವರು ಆ ವನ ಪ್ರವೇಶ ಮಾಡುತಿದಂತೆ ಹೆಣ್ಣು ಮಕ್ಕಳಾಗಿ ಪರಿವರ್ತಿತವಾಗಿ ಬಿಡುತ್ತಾರೆ ಮತ್ತು ಅವರ ಕುದುರೆಗಳು ಕೂಡ ಹೆಣ್ಣು ಕುದುರೆಗಳಾಗಿ ಪರಿವರ್ತಿತ ವಾಗಿಹೋಗುತ್ತದೆ ,ಇದರಿಂದ ಎಲ್ಲರೂ ಆಶ್ಚರ್ಯವಾಗುತ್ತಾರೆ .

 

 

ಆದರೆ ಇದಕ್ಕೂ ಒಂದು ಕಾರಣವಿತ್ತು, ಕುಮಾರ ವನ ಶಿವ ಮತ್ತು ಪಾರ್ವತಿ ದೇವಿಯ ಏಕಾಂತ ವಿಹಾರ ಸ್ಥಳ,ಒಂದು ದಿನ ಕೆಲವು ಮುನಿಗಳು ಶಿವನ ದರ್ಶಕ್ಕೆ ಕುಮಾರ ವನಕ್ಕೆ ಬರುತ್ತಾರೆ ಆ ಸಮಯದಲ್ಲಿ ಶಿವ ಮತ್ತು ಪಾರ್ವತಿ ದೇವಿ ಏಕಾಂತ ಶೃಂಗಾರ ತಪ್ಪಸಿನಲ್ಲಿ ಇದ್ದರು,ಮುನಿಗಳು ಬರಬಾರದ ಸಮಯದಲ್ಲಿ ಅಲ್ಲಿಗೆ ಹೋದ ಕಾರಣ ಪಶ್ಚತ್ತಾಪದಿಂದ ಶಿವನಿಗೆ ಕ್ಷಮೆ ಕೇಳಿ ಅಲ್ಲಿಂದ ಹೊರಟುಬಿಡುತ್ತಾರೆ .

 

ಕೋಪಕೊಂಡ ಪಾರ್ವತಿಗೆ ಶಿವ ದುಃಖ ಪಡದಿರುವಂತೆ ಹೇಳಿ ,ಆ ಕುಮಾರ ವನಕ್ಕೆ ಯಾವ ಪುರುಷ ಬಂದರು ಹೆಣ್ಣಾಗಿ ಪರಿವರ್ತಿತ ವಾಗುವಂತೆ ಪಾರ್ವತಿಗೆ ವರನೀಡುತ್ತಾನೆ .
ಮತ್ತೆ ಇಳಾ(ಹೆಣ್ಣಿನ ) ರೂಪವಾದ ಸುದ್ಯುಮ ತನ್ನ ಪಡೆಯ ಜೊತೆ ಕುಮಾರ ವನದಿಂದ ಹೊರಹೋಗುವಾಗ ಚಂದ್ರನ ಮಗನಾದ ಬುಧನ ಕಣ್ಣು ಇಳಾ(ಹೆಣ್ಣಿನ ) ರೂಪವಾದ ಸುದ್ಯುಮ ಮೇಲೆ ಬೀಳುತ್ತದೆ ,ಅವಳನ್ನು ಕಾಮಿಸಿ ಅವಳನ್ನು ಬುಧ ಅವನ ಜೊತೆ ಕರೆದುಕೊಂಡು ಹೋಗುತ್ತಾನೆ .

 

 

ಇಳಾ ಮತ್ತು ಚಂದ್ರನ ಮಗನಾದ ಬುಧನಿಗೆ ಹುಟ್ಟಿದ ಮಗುವೇ ಪುರೂರವಸ.ಈ ಜೀವನದಿಂದ ಬೇಸರಕೊಂಡ ಇಳಾ ತನ್ನನ್ನು ಮತ್ತೆ ಗಂಡಾಗಿ ಮಾಡುವಂತೆ ವಸಿಷ್ಟ ಮುನಿಯ ಬಳಿ ಕೇಳಿಕೊಂಡಾಗ ವಸಿಷ್ಟ ಮುನಿಗಳು ಶಿವನಲ್ಲಿ ಕೇಳಿಕೊಳ್ಳುತ್ತಾರೆ ,ಆಗ ಶಿವನ್ನು ಪಾರ್ವತೀ ದೇವಿಗೆ ಕೊಟ್ಟ ಮಾತಿಗೆ ಭಂಗ ಬಾರದಂತೆ ಇಳಾ (ಸುದ್ಯುಮ)ಒಂದು ದಿನ ಗಂಡು ಇನ್ನೊಂದು ದಿನ ಹೆಣ್ಣಾಗುವಂತೆ ವರ ನೀಡುತ್ತಾನೆ .

ಶಿವ ಮತ್ತು ಪಾರ್ವತೀ ದೇವಿಯ ಏಕಾಂತದಲ್ಲಿ ಮುನಿಗಳು ಹೋದ ಕಾರಣದಿಂದ ಕುಮಾರ ವನ ಪುರುಷರನ್ನು ಹೆಣ್ಣುಮಕ್ಕಳಾಗಿ ಪರಿವರ್ತಿತ ಮಾಡುತ್ತದೆ ಎಂದು ಪುರಾಣ ಕಥೆಗಳು ಹೇಳುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top