fbpx
ಆರೋಗ್ಯ

ಒಂದು ನಿಂಬೆ ಹಣ್ಣು ಕತ್ತರಿಸಿ ಉಪ್ಪಿನ ಜೊತೆ ನಿಮ್ಮ ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡರೆ ಏನಾಗುತ್ತೆ ಗೊತ್ತಾ..!

ಒಂದು ನಿಂಬೆ ಹಣ್ಣು ಕತ್ತರಿಸಿ ಉಪ್ಪಿನ ಜೊತೆ ನಿಮ್ಮ ತಲೆ ದಿಂಬಿನ ಕೆಳಗಡೆ ಇಟ್ಟುಕೊಂಡರೆ ಏನಾಗುತ್ತೆ ಗೊತ್ತಾ..!

 

 

 

 

ನಿಂಬೆಹಣ್ಣು ಆಯುರ್ವೇದ ಆಗರವಾಗಿದೆ. ಇದರಲ್ಲಿ ಆರೋಗ್ಯಕ್ಕೆ ಪ್ರಯೋಜನವಾಗಬಲ್ಲ ಅನೇಕ ಧನಾತ್ಮಕ ಅಂಶಗಳಿವೆ. ಪ್ರತಿದಿನ ಒಂದು ನಿಂಬೆ ಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಅದಕ್ಕೆ ಉಪ್ಪನ್ನು ಸೇರಿಸಿ  ಹಾಸಿಗೆಯ ಕೆಳಗೆ ಇಡಬೇಕು. ಇದರಿಂದ ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಆವಿಯಾಗಿ ಕೊಠಡಿಯಲ್ಲಿ ಹರಡಿಕೊಂಡು. ನಮಗೆ ಕೂಡಲೇ ನಿದ್ದೆ ಬರುತ್ತದೆ, ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಕಾರಣದಿಂದ ಕ್ರಿಮಿ ಕೀಟಾಣುಗಳು ಹತ್ತಿರಕ್ಕೆ ಸುಳಿಯುವುದಿಲ್ಲ. ನಿಂಬೆಯಲ್ಲಿರುವ ಆಂಟಿ ಬ್ಯಾಕ್ಟಿರಿಯಲ್ ಗುಣಗಳಿಂದ ಶೀತ ಕಟ್ಟಿರುವ ಮೂಗು ಬೇಗನೆ ವಾಸಿಯಾಗುತ್ತದೆ. ನಿಂಬೆಹಣ್ಣು ಮೂಸುವುದರಿಂದ ಡಿಪ್ರೆಶನ್ ಕಡಿಮೆಯಾಗುತ್ತದೆ.

 

 

ನಿಂಬೆ ಹಣ್ಣಿನ ಅರೋಗ್ಯ ಭಾಗ್ಯಗಳು:

ನಿದ್ರಾ ಹೀನತೆ:

 

ನಿಂಬೆ ಹಣ್ಣು ನರಮಂಡವನ್ನು ಚುರುಕುಗಳಿಸುತ್ತದೆ ನಿದ್ರಾಹೀನತೆಯನ್ನು ತಡೆಯುತ್ತದೆ. ಸರಿಯಾಗಿ ನಿದ್ರೆ ಆಗುವುದರಿಂದ ನಾವು ದಿನವಿಡೀ ಚುರುಕುತನದಿಂದ ಕೆಲಸ ಮಾಡಬಹುದು.

 

ಕ್ಯಾನ್ಸರ್ ನಿಯಂತ್ರಣ:

 

ನಿಂಬೆಹಣ್ಣಿನಲ್ಲಿ ಸಿಟ್ರಸ್ ಪೆಕ್ತ್ವಿನ್ ಅಂಶ ಹೇರಳವಾಗಿ ಇರುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ ಆಗುತ್ತದೆ.

 

ರಕ್ತದ ಒತ್ತಡ ಸಮಸ್ಯೆಯ ನಿಯಂತ್ರಣ:

 

 

ರಕ್ತದೊತ್ತಡ ಇರುವವರು ನಿಂಬೆರಸದ ಆವಿಯನ್ನು ಪಡೆಯುವುದರಿಂದ ರಕ್ತದೊತ್ತಡ ಸಮಸ್ಯೆ ಹತೋಟಿಗೆ ಬರುತ್ತದೆ.

ಪೊಟಾಶಿಯಂನ ಮೂಲ:

ಪೊಟ್ಯಾಶಿಯಂ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚು ಶಕ್ತಿ, ಸ್ವಚ್ಛ ತ್ಚಚೆ, ವಯಸ್ಸಾದಂತೆ ತೋರುವುದನ್ನು ತಡೆಯುತ್ತದೆ, ರೋಗ ನಿರೋಧಕ ಶಕ್ತಿ, ಒತ್ತಡ ಕಡಿಮೆ ಮಾಡುತ್ತದೆ, ಹಾಗೂ ಹೆಚ್ಚು ಏಕಾಗ್ರತೆಯನು ನೀಡುತ್ತದೆ.

 

ಕಿಡ್ನಿಯಲ್ಲಿನ ಕಲ್ಲು ನಿವಾರಣೆ:

ಮೂತ್ರಪಿಂಡದಲ್ಲಿ ಕಲ್ಲುಂಟಾಗಿದ್ದರೆ ನಿತ್ಯವೂ ಮುಂಜಾನೆ ಕೊಂಚವೇ ಬಿಸಿ ಇರುವ ನೀರಿನಲ್ಲಿ ಲಿಂಬೆ ರಸ ಹಾಕಿ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಕಲ್ಲು ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಜೊತೆಗೇ ಮೇದೋಜೀರಕ ಗ್ರಂಥಿಯ ಕಲ್ಲು, ಪಿತ್ತಕೋಶದ ಕಲ್ಲುಗಳು ಮತ್ತು ಕ್ಯಾಲ್ಸಿಯಂ ಘನೀಕರಿಸಿದ್ದರೆ ಅವೂ ಕರಗಿ ನೀರಾಗಿ ಹೊರಹರಿದು ಹೋಗುತ್ತವೆ.

 

ಬಾಯಿಯ ದುರ್ವಾಸನೆ ಪರಿಹಾರ:

ಲಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಶೀಘ್ರವೇ ಶಮನಹೊಂದಲೂ ನೆರವಾಗುತ್ತದೆ.

ತೂಕ ಇಳಿಕೆಗೆ:

ದಿನಾಲೂ ಬೆಳಗ್ಗೆ, ನೀವು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಲಿ೦ಬೆಯ ರಸದೊ೦ದಿಗೆ ಜೇನು ತುಪ್ಪವನ್ನೂ ಸಹ ಸೇರಿಸಿ ಸೇವಿಸಿದರೆ, ಶೀಘ್ರವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಭೇದಿಗೆ ರಾಮಬಾಣ:

ಲಿ೦ಬೆ ಹಣ್ಣಿನ ಅತ್ಯುತ್ತಮವಾದ ಆರೋಗ್ಯ ಸ೦ಬ೦ಧೀ ಪ್ರಯೋಜನವೇನೆ೦ದರೆ, ಅದು ಸಣ್ಣಕರುಳುಗಳಲ್ಲಿರುವ ಜ೦ತು ಅಥವಾ ಹುಳುಗಳನ್ನು ನಿವಾರಿಸುತ್ತದೆ. ಮಕ್ಕಳನ್ನು ಪದೇ ಪದೇ ಬಾಧಿಸುವ ಭೇದಿ ಹಾಗೂ ಇತರ ಉದರ ಸ೦ಬ೦ಧೀ ತೊ೦ದರೆಗಳನ್ನು ನಿವಾರಿಸುವ ಅತ್ಯುತ್ತಮ ಮಾರ್ಗವೆ೦ದರೆ ಅವರಿಗೆ ಲಿ೦ಬೆರಸ ಬೆರೆಸಿದ ನೀರನ್ನು ನೀಡುವುದು.

ಕೆಲವು ಸಲಹೆಗಳು:

ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಕ್ಕರೆ ಸೇರಿಸುವುದರಿಂದ ಲಿಂಬೆಯ ಗುಣಗಳು ನಾಶವಾಗುವುದರಿಂದ ಸಕ್ಕರೆ, ಉಪ್ಪು, ಬೆಲ್ಲ ಯಾವುದನ್ನೂ ಸೇರಿಸಬೇಡಿ. ಕೆಲವು ಹನಿ ಜೇನನ್ನು ಬೇಕಾದರೆ ಸೇರಿಸಬಹುದು.

ಜೇನು ಸೇರಿಸಿದ ನೀರು ಕುಡಿಯುವುದರಿಂದ ದೇಹ ಲಿಂಬೆ ಮತ್ತು ಜೇನು ಎರಡರ ಪ್ರಯೋಜನವನ್ನೂ ಪಡೆಯಬಹುದು. ಈ ನೀರನ್ನು ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಸೇವಿಸಿದ ಬಳಿಕ ದೀರ್ಘ ಉಸಿರಾಟದ ಮೂಲಕ ಸಾಕಷ್ಟು ನಡೆಯಿರಿ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top