fbpx
ಆರೋಗ್ಯ

ಮುಖಕ್ಕೆ ಹಚ್ಚಿಕೊಳ್ಳೋ ಮುಲ್ತಾನ್ ಮಿಟ್ಟಿಯನ್ನು ಇಡೀ ತಾಜ್ ಮಹಲಗೆ ಯಾಕೆ ಹಚ್ಚಿದರು ಎಂದು ಗೊತ್ತಾದ್ರೆ ನೀವು ಮೈಯಲ್ಲ ಮುಲ್ತಾನ್ ಮಿಟ್ಟಿ ಹಚ್ಚಿಕೊಳ್ತೀರಾ.

ಮುಖಕ್ಕೆ ಹಚ್ಚಿಕೊಳ್ಳೋ ಮುಲ್ತಾನ್ ಮಿಟ್ಟಿಯನ್ನು ಇಡೀ ತಾಜ್ ಮಹಲಗೆ ಯಾಕೆ ಹಚ್ಚಿದರು ಎಂದು ಗೊತ್ತಾದ್ರೆ ನೀವು ಮೈಯಲ್ಲ ಮುಲ್ತಾನ್ ಮಿಟ್ಟಿ ಹಚ್ಚಿಕೊಳ್ತೀರಾ.

 

ವಿಶ್ವವಿಖ್ಯಾತವಾಗಿರುವ ತಾಜ್ ಮಹಲ್ ಪರ್ಷಿಯನ್‌, ಭಾರತೀಯ ಹಾಗು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ಒಂದು ಅತ್ಯುತ್ತಮವಾದ ಉದಾಹರಣೆ ಎಂದು ಪರಿಗಣಿಸಲಾಗಿದೆ. ೧೯೮೩ ರ ಇಸವಿಯಲ್ಲಿ ತಾಜ್‌ ಮಹಲ್‌ ಯುನೆಸ್ಕೊ ದಿಂದ ವಿಶ್ವ ಪರಂಪರೆಯ ತಾಣವಾಗಿ ಹೆಸರು ಪಡೆಯಿತು.

 

 

ಈ ಸುಂದರ ಸೌಧಕ್ಕೆ ಪರಿಸರ ಮಾಲಿನ್ಯದ ಬಿಸಿ ತಟ್ಟಿದೆ. ಈ ಕಾರಣದಿಂದ ತಾಜ್ ಮಹಲ್ ಕೆಲವು ವರ್ಷಗಳ ಹಿಂದೆ ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭವಾಯಿತು. ‘ವಾಯು ಮಾಲಿನ್ಯ ಮತ್ತು ಅರಣ್ಯ ನಾಶದಿಂದ ತಾಜ್‌ ಮಹಲ್ ಬಣ್ಣ ತಿರುಗಲು ಪ್ರಾರಂಭವಾಯಿತು ಆ ವೇಳೆಯಲ್ಲಿ ತಾಜ್ ಮಹಲ್ ಗೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಪಾಕಿಸ್ತಾನದ ಮುಲ್ತಾನ್ ನಲ್ಲಿ ಸಿಗುವ ಮಣ್ಣು ಅರ್ಥಾರ್ಥ “ಮುಲ್ತಾನ್ ಮುಟ್ಟಿ” ಬಳಿಯಲು ಸಿದ್ದ ಪಡಿಸಿದರು. ಮುಲ್ತಾನ್ ಮಿಟ್ಟಿ ಬಳಿಯಲು ಕಾರಣ ಏನು ಗೊತ್ತ, ಮುಂದೆ ಓದಿ.

 

 

ಮಹಿಳೆಯರು ಸೌಂದರ್ಯ ವರ್ಧಕ ಮುಲ್ತಾನ್ ಮಿಟ್ಟಿಯನ್ನು ಫೇಸ್ ಪ್ಯಾಕ್ ಆಗಿ ಮುಖಕ್ಕೆ ಬಳಸುತ್ತಾರೆ. ಇದರಿಂದ ಮುಖದ ಸೌಂದರ್ಯ ಕಾಪಾಡಬಹುದು. ಪಾಕಿಸ್ತಾನದ ಮುಲ್ತಾನ್ ಎಂಬ ಊರಿನಲ್ಲಿ ದೊರೆಯುವ ಈ ಮಣ್ಣಿನಲ್ಲಿ ಸುಣ್ಣದ ಅಂಶವಿದೆ ಇದನ್ನು ತಾಜ್ ಮಹಲ್ ಗೋಡೆಗಳಿಗೆ ಲೇಪನ ಮಾಡುವುದರಿಂದ ಹಳದಿ ಬಣ್ಣವನ್ನು ಹೋಗಲಾಡಿಡಬಹುದು ಈ ಕಾರಣಕ್ಕೆ ಭಾರತೀಯ ಪುರಾತತ್ವ ಇಲಾಖೆ ತಾಜ್ ಗೆ ಈ ಮುಲ್ತಾನಿ ಮಿಟ್ಟಿ ಬಳಿದರು. ಸುಮಾರು ದಿನಗಳ ಕಾಲ ಹಲವರ ತಜ್ಞರ ಸಮ್ಮುಖದಲ್ಲಿ ಈ ಲೇಪನ ಕಾರ್ಯ ನಡೆಯಿತು.

ಈ ಮೊದಲು ತಾಜ್ ಮಹಲ್ ಸುತ್ತಿನ ಪ್ರದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಡಲು ಮತ್ತು ವಾತಾವರಣ ಶುದ್ದೀಕರಣ ಮಾಡಲು ಪವಿತ್ರ ಸಸ್ಯವಾಗಿರುವ ತುಳಸಿಯನ್ನು ಬಳಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top