fbpx
ಮನೋರಂಜನೆ

ಫಿಟ್ನೆಸ್ ವ್ರತ ಹಿಡಿದರು ನೀನಾಸಂ ಸತೀಶ್!

 

ನೀನಾಸಂ ಸತೀಶ್ ಈಗ ವರ್ಕೌಟ್ ವ್ರತ ಕೈಗೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫಿಟ್ನೆಸ್ ಬಗ್ಗೆ ಗಮನ ಹರಿಸುವ, ಅದನ್ನು ಗಂಭೀರವಾಗಿ ಪರಿಗಣಿಸೋ ನಟರ ಸಂಖ್ಯೆ ಕಡಿಮೆ. ಆದರೆ, ಪಾತ್ರ ಡಿಮ್ಯಾಂಡು ಮಾಡಿದರೆ ಎಂಥಾ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧ ಎಂಬುದನ್ನು ನೀನಾಸಂ ಸತೀಶ್ ಕಾರ್ಯರೂಪದಲ್ಲಿಯೇ ತೋರಿಸಿದ್ದಾರೆ. ಇಲ್ಲಿರೋ ಫೋಟೋಗಳೇ ಸತೀಶ್ ಎಫರ್ಟಿಗೆ ಸ್ಪಷ್ಟ ಸಾಕ್ಷಿಯಂತಿವೆ!

 

 

ಅಂದಹಾಗೆ ನೀನಾಸಂ ಸತೀಶ್ ಇದೀಗ ಜಿಮ್ ಸೇರಿ ವರ್ಕೌಟ್ ವ್ರತ ಹಿಡಿದಿರೋದು ಅಯೋಗ್ಯ ಚಿತ್ರಕ್ಕಾಗಿ. ಅಯೋಗ್ಯ ಚಿತ್ರದ ಪಾತ್ರ ಇಂಥಾ ಫಿಟ್ನೆಸ್ ಅನ್ನು ಬೇಡುತ್ತದೆಯಂತೆ. ಇದನ್ನು ಸವಾಲಾಗಿ ಸ್ವೀಕರಿಸಿರೋ ಸತೀಶ್ ಸದ್ದಿಲ್ಲದೆ ಜಿಮ್ ಸೇರಿಕೊಂಡು ತನ್ನ ದೇಹವನ್ನು ಹದಗೊಳಿಸಿದ್ದಾರೆ. ಆದರೆ ಇದೀಗ ಹೊರ ಬಿದ್ದಿರೋ ಅವರ ಫಿಟ್ಟಾದ ದೇಹದ ಫೋಟೋಗಳೇ ಸದ್ದು ಮಾಡೋ ಎಲ್ಲ ಲಕ್ಷಣಗಳೂ ಇವೆ!

 

 

ಯೋಗರಾಜ ಭಟ್ಟರ ಶಿಷ್ಯ ಮಹೇಶ್ ನಿರ್ದೇಶನದ ‘ಅಯೋಗ್ಯ’ ಚಿತ್ರ ಮುಹೂರ್ತ ಕಂಡಿತ್ತು. ನೀನಾಸಂ ಸತೀಶ್ ಈ ಚಿತ್ರದ ಬಗ್ಗೆ ಭಾರೀ ಹೋಪ್ ಇಟ್ಟುಕೊಂಡಿರೋದೂ ಸತ್ಯ. ಯಾಕೆಂದರೆ, ಈ ಚಿತ್ರದ ಹಿಂದೆ ಏನಾದರೂ ಹೊಸತನ್ನು ಸೃಷ್ಟಿಸಿ ಗೆಲ್ಲಬೇಕೆಂಬ ಹುಮ್ಮಸ್ಸು ಹೊಂದಿರೋ ಚೆಂದದ್ದೊಂದು ತಂಡವಿದೆ.

 

 

ಭಟ್ಟರ ಗರಡಿಯಲ್ಲಿ ಪಳಗಿರುವ ಮಹೇಶ್ ನಿರ್ದೇಶನದ ಅಯೋಗ್ಯ ಚಿತ್ರ ಪಕ್ಕಾ ಹಳ್ಳಿ ಘಮಲಿನ ಕಥಾ ಹಂದರ ಹೊಂದಿದೆಯಂತೆ. ಈ ಹಿಂದೆ ಮಂಡ್ಯ ಸೀಮೆಯ ಭಾಷಾ ಸೊಗಡಿನ ಮೂಲಕವೇ ಮನೆ ಮಾತಾಗಿದ್ದವರು ಸತೀಶ್. ಈ ಚಿತ್ರದಲ್ಲಿಯೂ ಭಿನ್ನವಾದೊಂದು ಪಾತ್ರದಲ್ಲಿ ಅದೇ ಹಳ್ಳಿ ಸೊಗಡಿನ ಸತೀಶ್ ಬೇರೆಯದ್ದೇ ಬಗೆಯಲ್ಲಿ ಪ್ರೇಕ್ಷಕರನ್ನು ಮುಖಾ ಮುಖಿಯಾಗಲಿದ್ದಾರೆ. ಅಯೋಗ್ಯ ಚಿತ್ರದಲ್ಲಿ ಇಡೀ ಭಾರತವನ್ನು ಆವರಿಸಿಕೊಂಡಿರೋ ಬಯಲು ಶೌಚದ ವಿಚಾರವನ್ನೂ ಒಳಗೊಂಡು ನಮ್ಮದೇ ನಡುವಿನ ನಾನಾ ಸಂಗತಿಗಳನ್ನು ಹಾಸ್ಯದ ಮೂಲಕವೇ ದಾಟಿಸಲು ನಿರ್ದೇಶಕರು ಮುಂದಾಗಿದ್ದಾರೆ. ಆರಂಭದಲ್ಲಿ ಇಡೀ ಹಳ್ಳಿ ಜನರಿಂದ ಅಯೋಗ್ಯ ಅನ್ನಿಸಿಕೊಳ್ಳೋ ಹುಡುಗ ನಂತರ ಹೇಗೆ ಇಡೀ ಹಳ್ಳಿಯೇ ಕೊಂಡಾಡುವಂಥಾ ಕೆಲಸ ಮಾಡುತ್ತಾನೆಂಬುದು ನೀನಾಸಂ ಸತೀಶ್ ಪಾತ್ರವಂತೆ.

 

 

 

ಈ ಚಿತ್ರದ ಪಾತ್ರಕ್ಕಾಗಿ ಇದೀಗ ದೈಹಿಕ ಕಸರತ್ತಿಗೂ ಮುಂದಾಗಿರೋ ಸತೀಶ್ ಬಹಳಷ್ಟು ಹೋಪ್ ಇಟ್ಟುಕೊಂಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸತೀಶ್ ನಿಜಕ್ಕೂ ಅಚ್ಚರಿಯಾಗುವಂತೆ ದೇಹವನ್ನು ಅಣಿಗೊಳಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರು ಸಂಪೂರ್ಣ ಫಿಟ್ ಆಗಿ ಕೇರಳದಲ್ಲಿ ನಡೆಯಲಿರುವ ಅಯೋಗ್ಯ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top